Published on: January 15, 2022
ಸುದ್ಧಿ ಸಮಾಚಾರ 15 ಜನವರಿ 2022
ಸುದ್ಧಿ ಸಮಾಚಾರ 15 ಜನವರಿ 2022
- ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್, ಟ್ರಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
- ಜಲಾನಯನ ಅಭಿವೃದ್ಧಿ ಇಲಾಖೆಯಡಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ಧಿ ಘಟಕ 2.0 ಯೋಜನೆಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 642.26 ಕೋಟಿ ಮಂಜೂರಾಗಿರುವುದಾಗಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಮಾಹಿತಿ ನೀಡಿದರು.
- ಜನವರಿ 5 ರಂದು ಪಂಜಾಬ್ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪ ಉಂಟಾದ ಪ್ರಕರಣದ ತನಿಖೆಗೆ, ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರ ನೇತೃತ್ವದದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿದೆ.
- ಹೆಣ್ಣುಮಕ್ಕಳು ಋುತುಮತಿ ಯಾದಾಗ ಸ್ಯಾನಿಟರಿ ನ್ಯಾಪ್ಕಿನ್ ಬದಲು ಮೆನ್ಸ್ಟ್ರುವಲ್ ಕಪ್ (ಋುತುಸ್ರಾವ ಕಪ್) ಬಳಸುವ ದಿಸೆಯಲ್ಲಿ ಕೇರಳದ ಕುಂಬಳಂಗಿ ಗ್ರಾಮವು ದಿಟ್ಟ ಹೆಜ್ಜೆ ಇಟ್ಟಿದ್ದು, ದೇಶದಲ್ಲಿಯೇ ಸ್ಯಾನಿಟರಿ ಪ್ಯಾಡ್ನಿಂದ ಮುಕ್ತವಾದ ಮೊದಲ ಗ್ರಾಮ ಎನಿಸಿದೆ. ರಾಜ್ಯಪಾಲರು ಕಂಬಳಂ ಗ್ರಾಮವನ್ನು ‘ಮಾದರಿ ಗ್ರಾಮ’ ಎಂದೂ ಘೋಷಿಸಿದರು. ಪ್ರಧಾನಮಂತ್ರಿ ಸಂಸದ್ ಆದರ್ಶ ಗ್ರಾಮ ಯೋಜನೆ (ಎಸ್ಎಜಿವೈ) ಅಡಿಯಲ್ಲಿ ಮಾದರಿ ಗ್ರಾಮವನ್ನು ನಿರ್ಮಿಸಲಾಗಿದೆ.
- ಸರ್ಸಿಸ್ ಬ್ಲೂ ತಳಿಯ ಚಿಟ್ಟೆ ಭೂಮಿ ಮೇಲಿಂದ ನಶಿಸಿ ಹೋಗಿದೆ ಎಂದೇ ನಂಬಲಾಗಿತ್ತು. ಆ ತಳಿಯ ಚಿಟ್ಟೆ ನಶಿಸಿದೆ ಎಂದು 80 ವರ್ಷಗಳ ಹಿಂದೆಯೇ ಅಂದರೆ 1941ರಲ್ಲಿ ಷರಾ ಬರೆಯಲಾಗಿತ್ತು. ಈಗ ಅದೇ ಚಿಟ್ಟೆಯನ್ನು ಮಧ್ಯಪ್ರದೇಶದಲ್ಲಿ ಸಂಶೋಧಕರು ಪತ್ತೆಹಚ್ಚಿದ್ದಾರೆ. ಮಧ್ಯಪ್ರದೇಶದ ಜಬಲ್ಪುರ ಸನಿಹ ಈ ಸರ್ಸಿಸ್ ಬ್ಲೂ ಚಿಟ್ಟೆ ಪ್ರಭೇದ ಪತ್ತೆಯಾಗಿದೆ.
- ತಮಿಳುನಾಡಿನ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಪೊಂಗಲ್ ಸಂದರ್ಭದಲ್ಲಿ ತಮಿಳುನಾಡಿನ ಹಳ್ಳಿಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ
- ಆಸ್ಟರ್ ಡಿಎಂ ಹೆಲ್ತ್ಕೇರ್ನ ಆಸ್ಟರ್ @ ಹೋಮ್’ಗೆ ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್ಬೀಯಿಂಗ್ (ಐಎಚ್ಡಬ್ಲ್ಯು) ಕೌನ್ಸಿಲ್ ‘ಭಾರತದ ಅತ್ಯುತ್ತಮ ಹೋಮ್ ಹೆಲ್ತ್ ಕೇರ್ ಬ್ರಾಂಡ್’ ಪ್ರಶಸ್ತಿಯನ್ನು ನೀಡಿದೆ.
- ಚಂದ್ರಯಾನ-2 ಮಿಷನ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಾಪ್ ರಾಕೆಟ್ ವಿಜ್ಞಾನಿ ಎಸ್ ಸೋಮನಾಥ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ)ನೂತನ ಮುಖ್ಯಸ್ಥರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
- ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತದೆ.