Published on: July 15, 2022

ಸುದ್ಧಿ ಸಮಾಚಾರ – 15 ಜುಲೈ 2022

ಸುದ್ಧಿ ಸಮಾಚಾರ – 15 ಜುಲೈ 2022

  • 75 ದಿನಗಳಲ್ಲಿ 75 ಬೀಚ್ ಸ್ವಚ: ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದ ಮಂಗಳೂರಿನ ಪಣಂಬೂರು, ಮಲ್ಪೆ, ಭಟ್ಕಳದ ಗೊರಟೆ ಮತ್ತು ಕುಮಟಾದ ಅಘನಾಶಿನಿ ಸೇರಿ ದೇಶದಾದ್ಯಂತ 75 ಬೀಚ್ಗಳನ್ನು 75 ದಿನಗಳಲ್ಲಿ ಸ್ವಚ್ಛಗೊಳಿಸಲು ಕೇಂದ್ರ ಯೋಜಿಸಿದೆ. ದೇಶದ 7,500 ಕಿ.ಮೀ ಉದ್ದ ಪ್ರತಿ ಕಿಲೋ ಮೀಟರ್ಗೆ 75 ಸ್ವಯಂ ಸೇವಕರ ಬೆಂಬಲದೊಂದಿಗೆ ಕರಾವಳಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತದೆ. ಜುಲೈ 3 ರಂದು ಆರಂಭಿಸಿರುವ ಅಭಿಯಾನ ಸೆ. 17 ರಂದು ಅಂತರರಾಷ್ಟ್ರೀ ಯ ಕರಾವಳಿ ಸ್ವಚ್ಛತಾ ದಿನ ಆಚರಿಸುವುದರೊಂದಿಗೆ ದೇಶದ ಅತಿ ದೊಡ್ಡ ಬೀಚ್ ಸ್ವಚ್ಛತಾ ಕಾರ್ಯಕ್ರಮವಾಗಿದೆ. ಸಮುದ್ರ ತೀರದಿಂದ 1,500 ಟನ್ ತ್ಯಾಜ್ಯ ತೆಗೆಯುವ ಗುರಿ ಹೊಂದಿದೆ.

  • ಜೈವಿಕ ತ್ಯಾಜ್ಯಗಳಿಂದ ಹಸಿರು ಹೈಡ್ರೋಜನ್ (ಶುದ್ಧ ಜಲಜನಕ ಇಂಧನ) ಉತ್ಪಾದಿಸುವ ಪರಿಸರ ಸ್ನೇಹಿ ವಿಧಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಕೇಂದ್ರದ ನವೀನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
  • ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿಂದು ನೂತನ ಸಂಸತ್ತು ಭವನದ ಛಾವಣಿಯ ಮೇಲೆ ರಾಷ್ಟ್ರೀಯ ಲಾಂಛನವನ್ನು ಅನಾವರಣಗೊಳಿಸಿದರು.
  • ‘ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ವಲಯಕ್ಕೂ ಮುಕ್ತಗೊಳಿಸಿದ ಬಳಿಕ ಸುಮಾರು 60 ನವೋದ್ಯಮಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಜತೆ ಒಪ್ಪಂದ ನೋಂದಾಯಿಸಿಕೊಂಡಿವೆ’. ಇಸ್ರೊದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹಲವು ಕಂಪನಿಗಳು ಆಸಕ್ತಿ ವಹಿಸಿವೆ. ಕೆಲವು ಕಂಪನಿಗಳು ಬಾಹ್ಯಾಕಾಶದಲ್ಲಿ ತ್ಯಾಜ್ಯಗಳ ನಿರ್ವಹಣೆಯಲ್ಲೂ ತೊಡಗಿಸಿಕೊಂಡಿವೆ’.
  • ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೂರು ದಶಕಗಳಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ವಿಶ್ವ ಜನಸಂಖ್ಯಾ ದಿನವನ್ನು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
  • ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ದಕ್ಷಿಣ ಫಿನ್ ಲ್ಯಾಂಡ್ ನ ಟಂಪರೆಯಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನಲ್ಲಿ ಭಗವಾನ್ ದೇವಿಯವರು ಚಿನ್ನದ ಪದಕ ಗಳಿಸಿದ್ದಾರೆ. 100 ಮೀಟರ್ ಓಟ ಸ್ಪರ್ಧೆಯಲ್ಲಿ 24.74 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿ ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಶಾಟ್ ಪುಟ್ ಪಂದ್ಯದಲ್ಲಿ ಸಹ ಕಂಚಿನ ಪದಕ ಗಳಿಸಿದ್ದಾರೆ. ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳು ಚೆನ್ನೈನಲ್ಲಿ ನಡೆದಿದ್ದವು. ಅಥ್ಲೀಟ್ ಭಗವಾನಿ ದೇಸ್ವಾಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಭಗವಾನಿ ದೇವಿ ಅವರು 2022 ರ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರವಾಗಿ ಸ್ಪರ್ಧಿಸುವ ಅರ್ಹತೆಗಳಲ್ಲಿ ತೇರ್ಗಡೆ ಹೊಂದಿ ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದು ತಂದಿದ್ದಾರೆ.