Published on: October 19, 2022
ಸುದ್ಧಿ ಸಮಾಚಾರ – 19 ಅಕ್ಟೋಬರ್ 2022
ಸುದ್ಧಿ ಸಮಾಚಾರ – 19 ಅಕ್ಟೋಬರ್ 2022
- ಹೊನ್ನಾವರದ ಕಾಸರಕೋಡು ಇಕೊ ಬೀಚ್ಗೆ, ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಮನ್ನಣೆಯನ್ನು ಸತತ ಮೂರನೇ ವರ್ಷ ಪಡೆದುಕೊಳ್ಳುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಈ ಮೂಲಕ ಕಡಲತೀರವು ಅಂತರರಾಷ್ಟ್ರೀಯ ಪ್ರವಾಸೋದ್ಯಮದ ನಕ್ಷೆಯಲ್ಲಿ ಮತ್ತೊಮ್ಮೆ ಗುರುತಿಸಿಕೊಂಡಿದೆ. ಡೆನ್ಮಾರ್ಕ್ನ ಕೋಪನ್ ಹೆಗನ್ನಲ್ಲಿರುವ ‘ಪರಿಸರ ಶಿಕ್ಷಣಕ್ಕಾಗಿ ವೇದಿಕೆ’ಯು (ಎಫ್.ಇ.ಇ) ಜಾಗತಿಕ ಮಟ್ಟದಲ್ಲಿ ಈ ಮನ್ನಣೆಯನ್ನು ನೀಡುತ್ತದೆ.
- ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ (ಯುಎನ್ಎಚ್ಆರ್ಸಿ) ಸ್ವತಂತ್ರ ತಜ್ಞೆಯಾಗಿ (Special Rapporteur–SR) ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ದಲಿತ ಯುವತಿ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.
- ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಗೊಬ್ಬರ ಹೆಸರಿನಲ್ಲಿ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು. ಮತ್ತು ಇದೆ ಸಮಯದಲ್ಲಿ ಪಿಎಂ ಕಿಸಾ ನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಈ ಮೂಲಕ ದೇಶದ ಅನ್ನದಾತರಿಗೆ ಭಾರತ್ ಬ್ರ್ಯಾಂಡ್ನಡಿ ಸಬ್ಸಿಡಿ ದರದ ಯೂರಿಯಾ ದೊರೆಯಲಿದೆ.
- ಹೈದರಾಬಾದ್ ಇತ್ತೀಚೆಗೆ ಪ್ರತಿಷ್ಠಿತ ವರ್ಲ್ಡ್ ಗ್ರೀನ್ ಸಿಟಿ ಪ್ರಶಸ್ತಿ 2022 ಅನ್ನು ಸ್ವೀಕರಿಸಿದೆ.
- ಹಿಂದಿ ವಿರೋಧಿ ಗೊತ್ತುವಳಿ: ತಮಿಳುನಾಡು ವಿಧಾನಸಭೆಯಲ್ಲಿ ಹಿಂದಿ ಹೇರಿಕೆ ವಿರೋಧಿ ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ‘ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸುಗಳು ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ ಗೊತ್ತುವಳಿಯನ್ನು ಅಂಗೀಕರಿಸಲಾಯಿತು.
- ಹಿಂದಿ ಭಾಷೆಯನ್ನು ಜಾಗತಿಕ ಭಾಷೆಯನ್ನಾಗಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಫಿಜಿ ದೇಶದಲ್ಲಿ ಮುಂದಿನ ವರ್ಷ ಪ್ರಥಮ ವಿಶ್ವ ಹಿಂದಿ ಸಮ್ಮೇಳನವನ್ನು ಆಯೋಜಿಸಲಾಗಿದೆ’ ಎಂದು ದಕ್ಷಿಣ ಫೆಸಿಫಿಕ್ ರಾಷ್ಟ್ರಗಳ ಭಾರತೀಯ ಹೈಕಮಿಷನರ್ ಹೇಳಿದ್ದಾರೆ.
- ಪ್ರತಿ ವರ್ಷ ಅಕ್ಟೋಬರ್ 17 ರಂದು ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಬಡತನ ನಿರ್ಮೂಲನಾ ದಿನ 2022, 30 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಥೀಮ್ :ಆಚರಣೆಯಲ್ಲಿ ಎಲ್ಲರಿಗೂ ಘನತೆಎಂಬುದು ಈ ವರ್ಷದ ದಿನದ ವಿಷಯವಾಗಿದೆ.
- ಶ್ರೀಲಂಕಾದ ಲೇಖಕ ಶೆಹಾನ್ ಕರುಣಾತಿಲಕ ಅವರ ಎರಡನೇ ಕಾದಂಬರಿ ‘ದಿ ಸೆವೆನ್ ಮೂನ್ಸ್ ಆಫ್ ಮಾಲಿ ಅಲ್ಮೇಡಾ’ ಕೃತಿಗೆ 2022ನೇ ಸಾಲಿನ ಪ್ರತಿಷ್ಠಿತ ಬುಕರ್ ಪ್ರಶಸ್ತಿ ದೊರೆತಿದೆ.
- ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ನೇಮಕ: ಕರ್ನಾಟಕದ ರೋಜರ್ ಬಿನ್ನಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಭಾರತ ಪರ 27 ಟೆಸ್ಟ್, 72 ಏಕದಿನ ಪಂದ್ಯಗಳಲ್ಲಿ ಆಡಿರುವ ಬಿನ್ನಿ, 1983ರಲ್ಲಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಟೂರ್ನಿಯಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ 18 ವಿಕೆಟ್ ಉರುಳಿಸಿ, ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು.