Published on: July 19, 2022
ಸುದ್ಧಿ ಸಮಾಚಾರ – 19 ಜುಲೈ 2022
ಸುದ್ಧಿ ಸಮಾಚಾರ – 19 ಜುಲೈ 2022
- ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬೂಸ್ಟ್ ನೀಡುವ ಉದ್ದೇಶದಿಂದ ಕೆಲವೊಂದು ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ‘ಟೆಂಟ್ ಟೂರಿಸಂ’ ಕೂಡ ಸೇರಿದೆ. ಇದರ ಪೈಲೆಟ್ ಪ್ರಾಜೆಕ್ಟ್ ಆಗಿ ಮೈಸೂರಿನ ಲಲಿತ ಮಹಲ್ ಹೋಟೆಲ್ ಆವರಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ಡಿಬಿಟಿ ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು.
- ಕೆಂಪು ಇರುವೆಗಳಿಂದ ತಯಾರಿಸಿದ ಕಾಯಿ ಚಟ್ನಿಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ, ಇದು ಭೌಗೋಳಿಕ ಸೂಚನೆಗಳ (GI) ಟ್ಯಾಗ್ ಅನ್ನು ಪಡೆಯುವ ಪ್ರಕ್ರಿಯೆಯಲ್ಲಿದೆ, ಏಕೆಂದರೆ ವಿಜ್ಞಾನಿಗಳು ಈಗ ಅದನ್ನು GI ನೋಂದಣಿಗಾಗಿ ಪ್ರಸ್ತುತಿಪಡಿಸಲು ತಮ್ಮ ಸಂಶೋಧನಾ ವರದಿ ಸಿದ್ಧಪಡಿಸುತ್ತಿದ್ದಾರೆ.
- ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಗಳ ಭಾರತ ಶ್ರೇಯಾಂಕ 2022 ಪ್ರಕಟವಾಗಿದ್ದು, ಮದ್ರಾಸ್ ಐಐಟಿ ಅಗ್ರ ಸ್ಥಾನ ಮತ್ತು ಬೆಂಗಳೂರು ಐಐಎಸ್ಸಿ 2ನೇ ಸ್ಥಾನ ಮತ್ತು ಐಐಟಿ ಬಾಂಬೆ ಮೂರನೇ ಸ್ಥಾನ ದಲ್ಲಿವೆ.
- ಜಾಗತಿಕ ಲಿಂಗ ಸಮಾನತೆಯ ಅಂತರದ ರ್ಯಾಂಕಿಂಗ್ನಲ್ಲಿ ಭಾರತವು 135ನೇ ಸ್ಥಾನದಲ್ಲಿದೆ. ಉದ್ಯೋ ಗ, ಶಿಕ್ಷಣ, ರಾಜಕೀಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಪುರುಷರಿಗೆ ಇರುವ ಅವಕಾಶಗಳಿಗಿಂತ ತೀರಾ ಕಡಿಮೆ ಇದೆ. ಆರ್ಥಿಕ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದರಿಂದ ಶ್ರೇಯಾಂಕ ಏರಿಕೆಯಾಗಿದೆ. ಜಾಗತಿಕ ಆರ್ಥಿಕ ವೇದಿಕೆಯು (ಡಬ್ಲ್ಯು ಇಎಫ್) ಲಿಂಗ ಸಮಾನತೆ ಕುರಿತ ವರದಿಯನ್ನು ಜಿನಿವಾದಲ್ಲಿ ಬಿಡುಗಡೆ ಮಾಡಿದೆ.
- ನಾಲ್ಕು ರಾಷ್ಟ್ರಗಳ I2U2′ ಶೃಂಗಸಭೆ ಅಂಗವಾಗಿ ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.
- ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ.
- ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ನಗರವಾದ ವಾರಾಣಸಿಯನ್ನು ಶಾಂಘೈ ಸಹಕಾರ ಸಂಸ್ಥೆಯ (ಎಸ್ಸಿಒ) ಮೊದಲ ‘ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜಧಾನಿ’ ಎಂದು ಘೋಷಿಸಲಾಗುವುದು ಎಂದು ಎಸ್ಸಿಒ ಬ್ಲಾಕ್ನ ಪ್ರಧಾನ ಕಾರ್ಯದರ್ಶಿ ಜಾಂಗ್ ಮಿಂಗ್ ಹೇಳಿದರು.
- ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ: ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪಿ.ವಿ. ಸಿಂಧು ಚೀನಾದ ವಾಂಗ್ ಜಿ ಯಿ ಅವರನ್ನು ಮಣಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದಾರೆ.
- ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್: ಐಎಸ್ ಎಸ್ ಎಫ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಶೂಟರ್ ಗಳು ಅದ್ಬುತ ಪ್ರದರ್ಶನದೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.ಈ ಟೂರ್ನಿಯಲ್ಲಿ ಭಾರತ ಮೂರು ಚಿನ್ನ, ನಾಲ್ಕು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟಾರೆ 8 ಪದಕಗಳನ್ನು ಗೆದ್ದುಕೊಂಡಿತು. ಕೊರಿಯಾ ಮತ್ತು ಸೆರ್ಬಿಯಾ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ. ವಿಶ್ವಕಪ್ ನಲ್ಲಿ ಅರ್ಜುನ್ ಮತ್ತು ಶಾಹು ಅವರ ಎರಡನೇ ಚಿನ್ನದ ಪದಕವಾಗಿದೆ. ಸಂಜೀವ್ ರಜಪೂತ್, ಚೈನ್ ಸಿಂಗ್ ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಅವರಿದ್ದ ಭಾರತ ಪುರುಷರ ತಂಡವು ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದೆ.