Published on: November 19, 2021

ಸುದ್ಧಿ ಸಮಾಚಾರ 19 ನವೆಂಬರ್ 2021

ಸುದ್ಧಿ ಸಮಾಚಾರ 19 ನವೆಂಬರ್ 2021

  • ಎಚ್ಎಎಲ್ನಂತಹ ಸಂಸ್ಥೆ ಹೊಂದಿರುವ ಬೆಂಗಳೂರನ್ನು ಹೆಲಿ-ಹಬ್ ಆಗಿ ಪರಿವರ್ತಿಸುವ ಮಹತ್ವದ ಯೋಜನೆ ಇದೆ. ದೇಶದ ಒಟ್ಟಾರೆ ಅಭಿವೃದ್ಧಿ ದೃಷ್ಟಿಯಿಂದ ಇದು ಬಹಳ ಮಹತ್ವದ್ದಾಗಿದೆ.
  • ಗಮನಾರ್ಹ ಸಾಧನೆ ಮಾಡಿರುವ ಐದು ಕಂಪನಿಗಳಿಗೆ `ಸ್ಮಾರ್ಟ್ ಬಯೋ ಪುರಸ್ಕಾರ’ ಮತ್ತು ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನ ಪ್ರದಾನ ಮಾಡಲಾಯಿತು.
  • ದುರ್ಬಲ ವರ್ಗದ ಮಹಿಳೆಯರಿಗೆ ರಿಯಾಯಿತಿ ಸೇರಿದಂತೆ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಮುಂದೆ ಬಂದರೆ, ಅಂತಹವರಿಗೆ ಇಲಾಖೆಯ ವತಿಯಿಂದ ಸಾಧ್ಯವಿರುವ ಎಲ್ಲಾ ಅಗತ್ಯ ಸವಲತ್ತುಗಳನ್ನು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಹೇಳಿದ್ದಾರೆ.
  • ಕಳೆದ ಒಂದು ವರ್ಷದಿಂದ ವ್ಯಾಪಕ ವಿರೋಧ, ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮುಂದಿನ ವರ್ಷ ತನ್ನ ಮೊದಲ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
  • ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪಾಯಕಾರಿ ಪ್ರಾಣಾಂತಿಕ ಮತ್ತು ದೊಡ್ಡ ಜೇಡವೊಂದು ಪತ್ತೆಯಾಗಿದೆ.ಅಷ್ಟೇ ಅಲ್ಲ ಇದೇ ಜೇಡ ಆ್ಯಂಟಿ ವಿಷಕಾರಿಯೂ ಆಗಿದೆ.