Published on: November 19, 2022

ಸುದ್ಧಿ ಸಮಾಚಾರ – 19 ನವೆಂಬರ್ 2022

ಸುದ್ಧಿ ಸಮಾಚಾರ – 19 ನವೆಂಬರ್ 2022

  • ಶೀಘ್ರದಲ್ಲೇ ಕರ್ನಾಟಕದಲ್ಲೂ ಒನ್ ಹೆಲ್ತ್ ಮಿಷನ್ ಪ್ರಾರಂಭ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ತಿಳಿಸಿದ್ದಾರೆ. ಒನ್ ಹೆಲ್ತ್ ಮಿಷನ್ ಏಕೀಕೃತ ಪರಿಕಲ್ಪನೆಯಾಗಿದ್ದು, ಮಾನವ, ಪ್ರಾಣಿ ಮತ್ತು ಪರಿಸರದ ಮೇಲೆ ನಿಗಾ ಇರಿಸುವ ಮೂಲಕ ರೋಗ ತಡೆಕಟ್ಟುವ ಕಾರ್ಯಕ್ರಮವಾಗಿದೆ.
  • ವಿದ್ಯುನ್ಮಾನ ಜಾಲಗಳ ಮೂಲಕ ಸರಕು ಮತ್ತು ಸೇವೆಗಳ ವಿನಿಮಯಕ್ಕೆ ಉತ್ತೇಜನ ನೀಡುವ ಉದ್ದೇಶದ ಓಎನ್‌ಡಿಸಿ (ಓಪನ್‌ ನೆಟ್‌ವರ್ಕ್ ಡಿಜಿಟಲ್‌ ಕಾಮರ್ಸ್‌) ಪಾರದರ್ಶಕ ಮತ್ತು ಉತ್ತಮ ವ್ಯವಸ್ಥೆಯಾಗಿ ರೂಪುಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.
  • ಅರುಣಾಚಲ ಪ್ರದೇಶದ ಮೊದಲ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದು, ಇದು ಈಶಾನ್ಯ ಪ್ರದೇಶದ 16ನೇ ವಿಮಾನ ನಿಲ್ದಾಣವಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ದೋನಿ ಪೋಲೋ ವಿಮಾನ ನಿಲ್ದಾಣ640 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಿದ್ದು, 690 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಸ್ಥಳೀಯ ಭಾಷೆಯಲ್ಲಿ ದೋನಿ ಎಂದರೆ ಸೂರ್ಯ ಮತ್ತು ಪೋಲೋ ಎಂದರೆ ಚಂದ್ರ ಎನ್ನಲಾಗಿದೆ.
  • ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್‌ ಅವರನ್ನು ನೇಮಕ ಮಾಡಲಾಗಿದೆ.