Published on: September 19, 2022
ಸುದ್ಧಿ ಸಮಾಚಾರ – 19 ಸೆಪ್ಟೆಂಬರ್ 2022
ಸುದ್ಧಿ ಸಮಾಚಾರ – 19 ಸೆಪ್ಟೆಂಬರ್ 2022
-
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿರಳ ಕಾಯಿಲೆಗಳಿಗೂ ಚಿಕಿತ್ಸಾ ವೆಚ್ಚ ಭರಿಸಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಕ್ರಮ ವಹಿಸಿದ್ದಾರೆ.
- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಉದ್ಘಾಟನೆಗೆ ಪೂರ್ವಭಾವಿಯಾಗಿ ರಾಜ್ಯಾದ್ಯಂತದಿಂದ ಪವಿತ್ರ ಮೃತ್ತಿಕೆ (ಮಣ್ಣು) ಮತ್ತು ಜಲವನ್ನು ಸಂಗ್ರಹಿಸುವ ವಿಶಿಷ್ಟ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
- ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರೂ. 250 ಕೋಟಿ ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರೊಂದಿಗೆ ಕರಾವಳಿಯಲ್ಲಿ ಮತ್ತೊಂದು ಬಂದರು ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಾಗರಮಾಲಾ’ದ ಅಡಿಯಲ್ಲಿ ಬಂದರು ನಿರ್ಮಾಣವಾಗಲಿದೆ.
- ಕೇಂದ್ರ ಸರ್ಕಾರ ರಾಜ್ ಪಥ್ ಮಾರ್ಗವನ್ನು ಸೆಂಟ್ರಲ್ ವಿಸ್ತಾ ಲಾನ್ಸ್ ಯೋಜನೆ ಅಡಿ ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿ ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು.
- ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ತ್ವರಿತ ಪ್ರತಿಕ್ರಿಯೆಯ ಕ್ಷಿಪಣಿ ವ್ಯವಸ್ಥೆಯನ್ನು ಭಾರತ ಯಶಸ್ವಿಯಾಗಿ ಉಡಾಯಿಸಿದೆ. ಒಡಿಶಾದ ಕಡಲ ತೀರದಿಂದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಉಡಾವಣೆ ಮಾಡಲಾಗಿದ್ದು, ಸೇನೆ ಹಾಗೂ ಡಿಆರ್ ಡಿಒ ಮೌಲ್ಯಮಾಪನ ಪ್ರಯೋಗಗಳ ಭಾಗವಾಗಿ ಈ ಪ್ರಯೋಗ ನಡೆದಿದೆ.
- ವಿಶ್ವ ಡೈರಿ ಶೃಂಗಸಭೆ: ಸುಮಾರು 48 ವರ್ಷಗಳ ನಂತರ ವಿಶ್ವ ಡೈರಿ ಶೃಂಗಸಭೆಯನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಹಲವು ವಿಚಾರಗಳಿಂದ ವಿಶೇಷವಾಗಿರುವ ಈ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗುಜರಾತ್ನ ‘ಬನ್ನಿ’ ಎಮ್ಮೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ.
- ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2021ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 191 ರಾಷ್ಟ್ರಗಳ ಪೈಕಿ ಭಾರತ 132 ನೇ ಸ್ಥಾನ ಪಡೆದುಕೊಂಡಿದೆ. 2020ರಲ್ಲಿ ಭಾರತ 189 ರಾಷ್ಟ್ರಗಳ ಪೈಕಿ 131ನೇ ಸ್ಥಾನ ಪಡೆದಿತ್ತು.
-
ಇಂಗ್ಲೆಂಡ್ ರಾಣಿ ಎಲಿಜಬೆತ್ II ವಯೋಸಹಜ ಖಾಯಿಲೆಯಿಂದ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸ್ಕಾಟ್ ಲ್ಯಾಂಡ್ ನ ಬಲ್ಮೊರಲ್ ನಿವಾಸದಲ್ಲಿ ತಮ್ಮ ತಾಯಿ 2ನೇ ಎಲಿಜಬೆತ್ ನಿಧನ ನಂತರ 73 ವರ್ಷದ ಚಾರ್ಲ್ಸ್ ಇಂಗ್ಲೆಂಡ್ ರಾಜರಾಗಿದ್ದಾರೆ. 70 ವರ್ಷಕ್ಕೂ ಅಧಿಕ ಕಾಲ ಇಂಗ್ಲೆಂಡ್ ನ ಮಹಾರಾಣಿಯಾಗಿ ಮೆರೆದ ಎಲಿಜಬೆತ್ ಗೆ ಪ್ರಪಂಚದ ಮೂಲೆಮೂಲೆಯಿಂದ ಗೌರವ ಸಲ್ಲಿಕೆಯಾಗುತ್ತಿದೆ.