Published on: December 2, 2022

ಸುದ್ಧಿ ಸಮಾಚಾರ 2 ಡಿಸೆಂಬರ್ 2022

ಸುದ್ಧಿ ಸಮಾಚಾರ 2 ಡಿಸೆಂಬರ್ 2022

  • ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೋರ್ಟಲ್ ಉದ್ಘಾಟನೆ, ಐದು ಸಂಸ್ಥೆಗಳೊಂದಿಗೆ ಉದ್ಯೋಗಸೃಷ್ಟಿಯ ಒಡಂಬಡಿಕೆ ಮತ್ತು ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸುಧಾರಣೆಗಳನ್ನ ಮಾಡಲಾಗುತ್ತದೆ ಎಂಬುದರ ಸಂಕಲ್ಪ ಪತ್ರಗಳ ಬಿಡುಗಡೆಯೊಂದಿಗೆ ತಮ್ಮ ನೇತೃತ್ವದ ಎಲ್ಲ ಇಲಾಖೆಗಳಡಿಯಲ್ಲಿ ಡಿಸೆಂಬರ್ ಪೂರ್ತಿ ನಡೆಯುವ ‘ಸುಶಾಸನ ಮಾಸಾಚರಣೆ’ಗೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಚಾಲನೆ ನೀಡಿದರು.

  • ಜಾನುವಾರುಗಳ ಅನುಕೂಲಕ್ಕಾಗಿ ಈಗಾಗಲೇ ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿ ದನದ ಶೆಡ್, ಗೋಕಟ್ಟೆಯಂಥ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ, ಈಗ ಜಾನುವಾರುಗಳ ಮೇವಿಗೆ ಅನುಕೂಲವಾಗುವಂತೆ ಗೋಮಾಳಗಳ ಅಭಿವೃದ್ಧಿಗೆ ಮುಂದಾಗಿದೆ. ನರೇಗಾ ಜಲಸಂಜೀವಿನಿ ಯೋಜನೆ ಯಡಿ ಉಪಯೋಜನೆಯಾಗಿ ಗ್ರಾಮಗಳಲ್ಲಿರುವ ಗೋಮಾಳಗಳ ಅಭಿವೃದ್ಧಿಗೆ ಇಲಾಖೆ ನಿರ್ಧರಿಸಿದೆ.
  • ಗಂಗಾವತಿ ತಾಲೂಕಿನ ಎಲ್ಲಾ ಸರಕಾರಿ ಶಾಲಾಮಕ್ಕಳನ್ನು ಮೌರ್ಯರ ಬೆಟ್ಟಕ್ಕೆ ಕರೆದೊಯ್ದು ಐತಿಹಾಸಿ ಸ್ಥಳದ ಬಗ್ಗೆ ಪೂರ್ಣ ಮಾಹಿತಿ ನೀಡು ವ ವಿನೂತನ ಯೋಜನೆಯನ್ನು ತಾಲೂಕಿನ ಶ್ರೀ ರಾಮನಗರ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಕಿಕೊಂಡಿದೆ.
  • ಇಡೀ ದೇಶದಲ್ಲಿಯೇ ಏಡ್ಸ್ ಸೋಂಕು ನಿಯಂತ್ರಣಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ಏಡ್ಸ್ ತಡೆಗಟ್ಟುವಿಕೆಗಾಗಿ ಓಂಬಡ್ಸಮನ್ ನೇಮಸಿದ ಎರಡನೇ ರಾಜ್ಯ ಕರ್ನಾಟಕವಾಗಿದೆ.

ಈ ವರ್ಷದ ಘೋಷವಾಕ್ಯ :ಸಮಾನಗೊಳಿಸುವುದು, ಸೋಂಕಿತರನ್ನು ಯಾವುದೇ ತಾರತಮ್ಯದಿಂದ ನೋಡದೆ ಸಮಾನಗೊಳಿಸುವುದು  ಈ ವರ್ಷದ ಘೋಷವಾಕ್ಯವಾಗಿದೆ.

  • 18ನೇ ಭಾರತ-ಅಮೆರಿಕ ಜಂಟಿ ಸೇನಾ ‘ಯುದ್ಧ ಅಭ್ಯಾಸ’ ನಡೆಯುತ್ತಿದೆ. ಉತ್ತರಾಖಂಡದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ)ಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ತಪೋವನ
  • ವಿಶ್ವ ಆರೋಗ್ಯ ಸಂಸ್ಥೆ (WHO) 1988 ರಲ್ಲಿ ಜಗತ್ತಿನಾದ್ಯಂತ ಈ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಮಾಹಿತಿ ವಿನಿಮಯವನ್ನು ಸುಲಭಗೊಳಿಸಲು ಡಿಸೆಂಬರ್ 1 ವಿಶ್ವ ಏಡ್ಸ್ ದಿನವನ್ನು ಸ್ಥಾಪಿಸಿತು. ಸುಮಾರು 180 ವಿಶ್ವ ದೇಶಗಳು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

2022ರ ವಿಷಯ (ಥೀಮ್) :”ನಮ್ಮನ್ನು ಪರೀಕ್ಷೆಗೆ ಒಳಪಡಿಸುವುದು: ಎಚ್ಐವಿಯನ್ನು ಅಂತ್ಯಗೊಳಿಸಲು