Published on: October 21, 2022

ಸುದ್ಧಿ ಸಮಾಚಾರ – 21 ಅಕ್ಟೋಬರ್ 2022

ಸುದ್ಧಿ ಸಮಾಚಾರ – 21 ಅಕ್ಟೋಬರ್ 2022

  • ಆಧುನಿಕ ಭಗೀರಥ ಖ್ಯಾತಿಯ, 16 ಕೆರೆಗಳನ್ನು ನಿರ್ಮಿಸಿದ್ದ ಕುರಿಗಾಯಿ ಕಾಮೇಗೌಡರು ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ದಾಸನದೊಡ್ಡಿಯ ಕಾಮೇಗೌಡರು ತಮ್ಮೂರಿನಲ್ಲಿ ಬೆಟ್ಟ ಗುಡ್ಡ ಅಗೆದು ಪ್ರಾಣಿ ಪಕ್ಷಿಗಳಿಗಾಗಿ 16 ಕೆರೆಗಳನ್ನು ನಿರ್ಮಿಸಿ ನೀರು ಹರಿಸಿ ಆಧುನಿಕ ಭಗೀರಥ ಎಂದು ಜನಪ್ರಿಯತೆ ಗಳಿಸಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಕುರಿ ಕಾಯುವ ಕೆಲಸವನ್ನು ಹವ್ಯಾಸವಾಗಿ ಮಾಡುತ್ತಿದ್ದರು. ಕಾಮೇಗೌಡರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅವರ ಬಗ್ಗೆ ಪ್ರಧಾನಿ ಮೋದಿಯವರು ಕೂಡ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದರು.
  • ಕರ್ನಾಟಕದಲ್ಲಿ ಅಸಂಘಟಿತ ವಲಯದ ಶೇ.37.5ರಷ್ಟು ಕಾರ್ಮಿಕರು ಮಾತ್ರ ಇ-ಶ್ರಮ್ ರಾಷ್ಟ್ರೀಯ ಡೇಟಾಬೇಸ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ 2021 ರಲ್ಲಿ ನೋಂದಣಿಗಳನ್ನು ತೆರೆಯಲಾಗಿದೆ.
  • ಎಚ್ ಸಿಎಲ್ ಸಂಸ್ಥಾಪಕ ಶಿವ ನಾಡಾರ್ ವಾರ್ಷಿಕ 1,161 ಕೋಟಿ ರೂ. ದಾನ ಮಾಡುವ ಮೂಲಕ ದೇಶದ ಅತ್ಯಂತ ಉದಾರಿ ಉದ್ಯಮಿಯಾಗಿದ್ದಾರೆ ಎಂದು ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ತಿಳಿಸಿದೆ. ವಿಪ್ರೋ ಸಂಸ್ಥೆಯ ಅಜಿಂ ಪ್ರೇಮ್ ಜಿ ವಾರ್ಷಿಕವಾಗಿ ರೂ. 484 ಕೋಟಿ ದಾನ ನೀಡುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
  • ಸ್ಯಾಂಡಲ್ವುಡ್ ಪವರ್ ಸ್ಟಾರ್, ದಿ. ಪುನೀತ್ ರಾಜ್​ಕುಮಾರ್ ಗೆ ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
  • ಗುಜರಾತ್ನ ಗಾಂಧಿನಗರದಲ್ಲಿರುವ ಸಬರಮತಿ ನದಿ ದಂಡೆಯಲ್ಲಿ ನಡೆಯುತ್ತಿರುವ ಅತಿದೊಡ್ಡ ಡಿಫೆನ್ಸ್ ಎಕ್ಸ್ಪೋ (ರಕ್ಷಣಾ ಪ್ರದರ್ಶನ) 2022 ರ 12 ನೇ ಆವೃತ್ತಿಯ ಎಕ್ಸ್ಪೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
  • ಗುಜರಾತ್‌ನ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವನ್ನು ಮರುಪರಿಶೀಲಿಸುವ ಉದ್ದೇಶದಿಂದ ಗಾಂಧಿನಗರ ಜಿಲ್ಲೆಯ ಅದಾಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
  • ಉತ್ತರ ಗುಜರಾತ್‌ನ ಬನಾಸಕಾಂಠಾ ಜಿಲ್ಲೆಯ ಡೀಸಾದಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಥಾಪನೆಯಾಗಲಿರುವ ನೂತನ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.ನೆಲೆಗೊಳ್ಳಲಿರುವ ನೂತನ ವಾಯುನೆಲೆ ದೇಶದ ಭದ್ರತೆಗೆ ಅತ್ಯಂತ ಪ್ರಭಾವಶಾಲಿ ಕೇಂದ್ರವಾಗಿ ಹೊರಹೊಮ್ಮಲಿದೆ.