Published on: December 23, 2021
ಸುದ್ಧಿ ಸಮಾಚಾರ 23 ಡಿಸೆಂಬರ್ 2021
ಸುದ್ಧಿ ಸಮಾಚಾರ 23 ಡಿಸೆಂಬರ್ 2021
- ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ಗರಿಷ್ಠ ಪ್ರಕರಣಗಳನ್ನು ಕರ್ನಾಟಕವು ವಿಲೇವಾರಿ ಮಾಡಿದೆ ಎಂದು ಸರ್ಕಾರ ನೀಡಿದ ಅಂಕಿ ಅಂಶಗಳು ಹೇಳಿವೆ. ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ವಿಲೇವಾರಿ ಪ್ರಮಾಣವು ಶೇ 89ರಷ್ಟು ಇದೆ. 2020–21ರಲ್ಲಿ ಕರ್ನಾಟಕದಲ್ಲಿ ಅಧಿಕಾರಿಗಳ ವಿರುದ್ಧ 56 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 50 ಪ್ರಕರಣಗಳು ವಿಲೇವಾರಿ ಆಗಿವೆ
- ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಆರು ಸೂಪರ್ ಪರಿಣಾಮಕಾರಿ ಮತ್ತು ಅಸಾಧಾರಣ ಬುದ್ಧಿವಂತ ಶ್ವಾನಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆಗಳಲ್ಲಿ ಒಂದಾದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸೇರಲು ಸಜ್ಜಾಗಿವೆ. ದೇಶದಲ್ಲಿ ಈ ತಳಿಯ ಶ್ವಾನಗಳನ್ನು ಭದ್ರತೆಗಾಗಿ ಆಯೋಜಿಸಿರುವ ಮೊದಲ ವಿಮಾನ ನಿಲ್ದಾಣ ಬೆಂಗಳೂರು ಆಗಲಿದೆ.
- ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ ಸಿಕ್ಕಿರುವ ರ್ಯಾಂಕ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಮಾಧ್ಯಮ ಸ್ವಾತಂತ್ರ್ಯ ವಿಚಾರದಲ್ಲಿ ವಿಶ್ವದ 180 ರಾಷ್ಟ್ರಗಳ ಪೈಕಿ ಭಾರತಕ್ಕೆ 142ನೇ ಸ್ಥಾನ ದೊರೆಕಿತ್ತು
- ಒಡಿಶಾ ಕರಾವಳಿ ಬಾಲಸೋರ್ನಿಂದ ಕಿರು ಶ್ರೇಣಿಯ, ಮೇಲ್ಮೈನಿಂದ ಮೇಲ್ಮೈಗೆ ಸಾಗುವ ಖಂಡಾಂತರ ಕ್ಷಿಪಣಿ ‘ಪ್ರಳಯ್’ ಅನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ
- ಚೀನಾದ ದಕ್ಷಿಣ ಭಾಗದಲ್ಲಿರುವ ಗಂಝೌ ಪ್ರಾಂತ್ಯದ ಕಲ್ಲುಬಂಡೆಗಳ ನಡುವೆ ದೊರೆತ ಡೈನೋಸಾರ್ ಮೊಟ್ಟೆಯ ಒಳಗೆ ಭ್ರೂಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದು, ವಿಜ್ಞಾನ ಲೋಕದಲ್ಲಿ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
- ಕ್ರೀಡಾಕ್ಷೇತ್ರದಲ್ಲಿ ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಯಲ್ಲಿ ಭಾರತವು ಮೂರನೇ ಸ್ಥಾನಕ್ಕೇರಿದೆ.
- ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್ನಲ್ಲಿ ಮೂರನೇ-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗಳಿಸಿದೆ.
- ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರು ಜಗತ್ತಿನ ಜನಮೆಚ್ಚಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಟಾಪ್ 3 ರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯ ಟಾಪ್ 3ರಲ್ಲಿ ಸ್ಥಾನ ಪಡೆದ ಇತರೆ ಇಬ್ಬರೆಂದರೆ ಜಗತ್ಪ್ರಸಿದ್ಧ ಫುಟ್ಬಾಲಿಗರಾದ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ.
- ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ‘ರಾಷ್ಟ್ರೀಯ ಗಣಿತ ದಿನ’ ಎಂದು ಆಚರಣೆ ಮಾಡಲಾಗುತ್ತದೆ.
- ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.