Published on: November 24, 2021
ಸುದ್ಧಿ ಸಮಾಚಾರ 24 ನವೆಂಬರ್ 2021
ಸುದ್ಧಿ ಸಮಾಚಾರ 24 ನವೆಂಬರ್ 2021
- ಅಟಲ್ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಹಾಲಯವನ್ನು ಬಳ್ಳಾರಿಯಿಂದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಬಿಳಿಕಲ್ಲು ಮೀಸಲು ಅರಣ್ಯಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಅನುಮತಿಸಿದೆ.
- ಭಾರತ ತನ್ನ ಸಂಗ್ರಹಾಗಾರಗಳಿಂದ 50 ಲಕ್ಷ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ.
- ವಿಶ್ವದಲ್ಲೇ ಬೃಹತ್ ಸಾರ್ವತ್ರಿಕ ಆರೋಗ್ಯ ಯೋಜನೆ ಎಂಬ ಹಿರಿಮೆಗೆ ಪಾತ್ರವಾಗಿರುವ ‘ಆಯುಷ್ಮಾನ್ ಭಾರತ್’ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ಇನ್ಮುಂದೆ ಚಿಕಿತ್ಸಾ ವೆಚ್ಚ 10 ದಿನಗಳಲ್ಲಿಯೇ ಮರುಪಾವತಿ ಆಗಲಿದೆ.
- ನಮ್ಮ ಸೌರ ಮಂಡಲದ ರಚನೆಯ ಸಂದರ್ಭದಲ್ಲಿ ಗ್ರಹಕಾಯಗಳಾಗದೇ ಉಳಿದ ಕ್ಷುದ್ರಗ್ರಹಗಳೆಂಬ ಆಕಾಶಕಾಯಗಳಿಂದ ನಮ್ಮ ಭೂಮಿಗೆ ನಿರಂತರ ಬೆದರಿಕೆ ಇದ್ದೇ ಇರುತ್ತದೆ. ಕ್ಷುದ್ರಗ್ರಹಗಳು ತಮ್ಮ ಪಥ ಬದಲಿಸಿ ಭೂಮಿಯತ್ತ ಧಾವಿಸಿ ಬಂದು ಅಪ್ಪಳಿಸಿದರೆ ಉಂಟಾಗುವ ಅನಾಹುತ ಊಹಿಸಲೂ ಅಸಾಧ್ಯ. ಇದೇ ಕಾರಣಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರೀ ಸಾಹಸವೊಂದಕ್ಕೆ ಅಮೆರಿಕದ ಖಗೋಳ ವಿಜ್ಞಾನ ಸಂಸ್ಥೆ ನಾಸಾ ಕೈ ಹಾಕಿದೆ.