Published on: December 25, 2021
ಸುದ್ಧಿ ಸಮಾಚಾರ 25 ಡಿಸೆಂಬರ್ 2021
ಸುದ್ಧಿ ಸಮಾಚಾರ 25 ಡಿಸೆಂಬರ್ 2021
- ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ಸೇರಿಸುವ ದೂರದೃಷ್ಟಿಯೊಂದಿಗೆ, ರಾಜ್ಯ ಸರ್ಕಾರ ಶಿವಮೊಗ್ಗ ನಗರದ ಸಮೀಪದ ಸೋಗಾನೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಆಯುಷ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಯೋಜಿಸಿದೆ.
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)ನಲ್ಲಿ ವಿಶ್ವದ ಅಗ್ರ ಐದು ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನ ಪಡೆದಿದೆ. ಮೊದಲ ನಾಲ್ಕು ಯುಎಸಎಯ ನಗರಗಳಾಗಿವೆ. ಶ್ರೇಯಾಂಕ ನೀಡಿಕೆ ಅಗ್ರ 50 AI ನಗರಗಳಲ್ಲಿ ಒಂದಾಗಿದೆ, ಇದನ್ನು ಟೈಡ್ ಫ್ರೇಮ್ವರ್ಕ್ನಿಂದ ಅಳೆಯಲಾಗಿದ್ದು, ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂ (HBR)ನಲ್ಲಿ ಪಟ್ಟಿಮಾಡಲಾಗಿದೆ.
- ಬಹುನಿರೀಕ್ಷಿತ ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ಬುಲೆಟ್ ಟ್ರೈನ್ ಯೋಜನೆ ತಯಾರಿ ಇನ್ನಷ್ಟು ಚುರುಕುಗೊಂಡಿದೆ. ದೇಶದ ಪ್ರಮುಖ ಏಳು ಪ್ರಮುಖ ಹೈಸ್ಪೀಡ್ ಯೋಜನೆಯಲ್ಲಿ ದಕ್ಷಿಣ ಭಾರತದ ಏಕೈಕ ಯೋಜನೆಯಾಗಿದೆ.
- ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದಿಂದ ನಾನಾ ಉತ್ಪನ್ನ ರಫ್ತು ಮಾಡುವ ದೇಶದ 30 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಒಂದಾಗಿದೆ. ರಾಜ್ಯ ಮಾತ್ರವಲ್ಲದೇ ಅಂತಾರಾಜ್ಯ, ರಾಷ್ಟ್ರಗಳಿಗೆ ಸ್ಥಳೀಯ ಗಣಿನಾಡಿನ ಉತ್ಪನ್ನ ಪೂರೈಕೆ ಮಾಡುವಲ್ಲಿ ಗಣಿ ಜಿಲ್ಲೆ ಮುಂಚೂಣಿಯಲ್ಲಿದೆ.
- ಭಾರತೀಯ ಸೇನೆಯು ವಾಟ್ಸಾಪ್ ನಂತಹ ಅಥವಾ ಅದಕ್ಕಿತಂಲೂ ಸುರಕ್ಷಿತವಾದ ASIGMA (ಆರ್ಮಿ ಸೆಕ್ಯೂರ್ ಇಂಡಿಜಿನಿಯಸ್ ಮೆಸೇಜಿಂಗ್ ಅಪ್ಲಿಕೇಶನ್) ಎಂದು ಕರೆಯಲ್ಪಡುವ ಆಂತರಿಕ ಸಂದೇಶ ಕಳುಹಿಸುವ ಅಪ್ಲಿಕೇಶನ್ ಅನ್ನು ಬಳಕೆಗೆ ತರುತ್ತಿರುವುದಾಗಿ ತಿಳಿಸಿದೆ.
- ಬಲು ಅಪರೂಪದ ‘ನಡೆದಾಡುವ’ ಮೀನು ಸುಮಾರು 22 ವರ್ಷಗಳ ಬಳಿಕ ತಾಸ್ಮೇನಿಯಾ ಕರಾವಳಿಯಲ್ಲಿ ಪತ್ತೆಯಾಗಿದೆ. ಅಪರೂಪದ ಗುಲಾಬಿ ಬಣ್ಣದ ಹ್ಯಾಂಡ್ ಫಿಶ್ 1999ರಲ್ಲಿ ಕಡೆಯ ಬಾರಿ ಕಂಡುಬಂದಿತ್ತು ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್ಐಆರ್ಒ) ತಿಳಿಸಿದೆ.