Published on: December 27, 2021
ಸುದ್ಧಿ ಸಮಾಚಾರ 27 ಡಿಸೆಂಬರ್ 2021
ಸುದ್ಧಿ ಸಮಾಚಾರ 27 ಡಿಸೆಂಬರ್ 2021
- ರಾಜ್ಯಾದ್ಯಂತ ಮಣ್ಣಿನಲ್ಲಿ ಅಡಗಿರುವ, ಅಳಿವಿನಂಚಿಗೆ ತಲುಪುತ್ತಿರುವ 25ರಿಂದ 30ಸಾವಿರ ಸ್ಮಾರಕಗಳಿದ್ದರೂ, ಸರಕಾರದಿಂದ ಸಂರಕ್ಷಣೆ ಕಾರ್ಯ ಮಾತ್ರ ಮಂದಗತಿಯಲ್ಲಿ ನಡೆಯುತ್ತಿದೆ. ಈವರೆಗೆ ಕೇವಲ 844 ಸ್ಮಾರಕಗಳನ್ನು ಮಾತ್ರ ರಾಜ್ಯ ಪುರಾತತ್ವ ಇಲಾಖೆಯಿಂದ ಸಮೀಕ್ಷೆಯಿಂದ ಪತ್ತೆ ಮಾಡಿ ಸಂರಕ್ಷಿಸಲಾಗಿದೆ. 2020-21ರ ಬಜೆಟ್ನಲ್ಲಿ ಐತಿಹಾಸಿಕ ದೇಗುಲ, ಪ್ರಾಚೀನ ಸ್ಥಳ, ಸ್ಮಾರಕಗಳ ಪುನರುಜ್ಜೀವನಗೊಳಿಸಲು ಸಂರಕ್ಷಣಾ ಯೋಜನೆ ಘೋಷಣೆಗೊಂಡಿತ್ತು.
- ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳ ಆಡಳಿತ ವ್ಯವಸ್ಥೆ, ವ್ಯವಸ್ಥೆಯಲ್ಲಿನ ಸುಧಾರಣೆಗಳ ಮೇಲೆ ಬೆಳಕು ಚೆಲ್ಲುವ ಉತ್ತಮ ಆಡಳಿತ ಸೂಚ್ಯಂಕ 2021 ವರದಿಯನ್ನು ಕೇಂದ್ರ ಸರ್ಕಾರವು ಉತ್ತಮ ಆಡಳಿತ ದಿನವಾದ ಡಿ.25 ಬಿಡುಗಡೆ ಮಾಡಿದೆ. ಸಮಗ್ರ ಪಟ್ಟಿಯಲ್ಲಿ, ಕಳೆದ ವರ್ಷ 3ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ 5.109 ಅಂಕಗಳೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್ (5.662), ಮಹಾರಾಷ್ಟ್ರ(5.425) ಹಾಗೂ ಗೋವಾ(5.348) ರಾಜ್ಯಗಳು ಮೊದಲ 3 ಸ್ಥಾನ ಪಡೆದುಕೊಂಡಿವೆ.
- ಬ್ರಹ್ಮಾಂಡ ಸೃಷ್ಟಿಯ ರಹಸ್ಯ ಭೇದಿಸಲು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಅಭಿವೃದ್ಧಿಪಡಿಸಿರುವ ವಿಶ್ವದ ಬೃಹತ್ ಹಾಗೂ ಬಲಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ ‘ಜೇಮ್ಸ್ ವೆಬ್’ ಅನ್ನು ಉಡಾವಣೆ ಮಾಡಲಾಗಿದೆ.
- ಖಗೋಳಶಾಸ್ತ್ರಜ್ಞರ ತಂಡವೊಂದು ಸುಮಾರು 70 ಹೊಸ ರೋಗ್ ಪ್ಲ್ಯಾನೆಟ್ಗಳ ಗುಚ್ಛವೊಂದನ್ನು ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೋಗ್ ಪ್ಲ್ಯಾನೆಟ್ಗಳ ಗುಚ್ಛ ಭೂಮಿಯಿಂದ ಸುಮಾರು 420 ಜ್ಯೋತಿರ್ವರ್ಷ ದೂರದಲ್ಲಿದ್ದು, ಯಾವ ನಕ್ಷತ್ರಗಳ ಗುರುತ್ವ ಬಲಕ್ಕೂ ಒಳಪಡದೇ ಸ್ವತಂತ್ರ್ಯವಾಗಿ ಚಲಿಸುತ್ತಿವೆ.
- ಐದು ಮೀಟರ್ ರೆಸಲ್ಯೂಶನ್ವುಳ್ಳ ಭೂಮಿಯ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾವನ್ನು ಹೊಂದಿರುವ ಹೊಸ ಉಪಗ್ರಹ ‘ಝಿಯುವಾನ್–1 02ಇ’ವನ್ನು ಚೀನಾವು ಉಡಾವಣೆ ಮಾಡಿದೆ
- ರೈಲ್ವೆ ಹಳಿ ಮತ್ತು ರಸ್ತೆ ಮೇಲೆ ಚಲಿಸಬಲ್ಲಂತಹ ವಿಶ್ವದ ಮೊದಲ ದ್ವಿ ಮಾದರಿಯ ವಾಹನವನ್ನು ಜಪಾನ್ ಪರಿಚಯಿಸಿದೆ. ಈ ವಾಹನ ನೋಡಲು ಮಿನಿಬಸ್ ನಂತೆ ಕಾಣುತ್ತದೆ ಮತ್ತು ರಸ್ತೆ ಮೇಲೆ ಸಾಮಾನ್ಯ ರಬ್ಬರ್ ಟೈರ್ಗಳಲ್ಲಿ ಚಲಿಸುತ್ತದೆ. ಈ ವಾಹನ ಕೆಳಭಾಗದಲ್ಲಿ ಉಕ್ಕಿನ ಚಕ್ರಗಳನ್ನು ಹೊಂದಿದ್ದು ಅದು ರೈಲು ಹಳಿಗಳನ್ನು ಹೊಡೆದಾಗ ಇಳಿಯುತ್ತದೆ. ಇದೇ ಈ ವಾಹನದ ವೈಶಿಷ್ಟವಾಗಿದೆ.
- ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿದ ಅಗ್ರಗಣ್ಯರಲ್ಲಿ ಒಬ್ಬರಾದ, ನೊಬೆಲ್ ಶಾಂತಿ ಪುರಸ್ಕೃತ ಡೆಸ್ಮಂಡ್ ಟುಟು ನಿಧನರಾಗಿದ್ದಾರೆ.