Published on: November 27, 2021

ಸುದ್ಧಿ ಸಮಾಚಾರ 27 ನವೆಂಬರ್ 2021

ಸುದ್ಧಿ ಸಮಾಚಾರ 27 ನವೆಂಬರ್ 2021

  • ಶೀಘ್ರವೇ ಕರ್ನಾಟಕ ತನ್ನದೇ ಆದ ರಾಜ್ಯ ಕಪ್ಪೆಯೊಂದನ್ನು ಹೊಂದಲಿದೆ ಹಾಗೂ ಈ ರೀತಿ ರಾಜ್ಯ ಕಪ್ಪೆಯೊಂದು ಹೊಂದಿದ ಭಾರತದ ಮೊದಲ ರಾಜ್ಯವಾಗಲಿದೆ. ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ, ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಹೇಳಿದ್ದಾರೆ.
  • ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.
  • ಜಾರ್ಖಡ್ ನ ಧನ್ಬಾದ್ ನಲ್ಲಿನ ಕೇಂದ್ರೀಯ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ಸಂಸ್ಥೆಯಲ್ಲಿನ ಸಂಶೋಧಕರು ಕಲ್ಲಿದ್ದಲಿನಿಂದ ಆಭರಣಗಳನ್ನು ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದಾರೆ.
  • ದಕ್ಷಿಣ ಆಫ್ರಿಕಾದಲ್ಲಿ ಕಾಣಿಸೊಂಡಿರುವ ಹೊಸ ರೂಪಾಂತರ ವಿಶ್ವಕ್ಕೆ ಮತ್ತೊಮ್ಮೆ ಬೆದರಿಕೆವೊಡ್ಡುತ್ತಿದೆ. ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದ್ದು, ಕಳೆದ ಒಂದು ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೊಸ ಪ್ರಕರಣಗಳು ಶೇಕಡ 200 ರಷ್ಟು ಹೆಚ್ಚಾಗಿದೆ. ಈ ಹೊಸ ರೂಪಾಂತರವನ್ನು ಓಮಿಕ್ರಾನ್  (B.1.1.529) ಎಂದು ಹೆಸರಿಸಲಾಗಿದೆ.
  • ಭಾರತ ಮತ್ತು ಫ್ರೆಂಚ್ ಸೇನಾ ಪಡೆಗಳ ಜಂಟಿ ಸಮಾರಾಭ್ಯಾಸ ‘ಎಕ್ಸ್ ಶಕ್ತಿ’. ಫ್ರಾನ್ಸ್ನ ಮಿಲಿಟರಿ ಶಾಲೆಯಲ್ಲಿ ಕಾರ್ಯಾಚರಣೆಯ ಅಭ್ಯಾಸ ನಡೆದಿದ್ದು, ಭಾರತದ 3 ಅಧಿಕಾರಿಗಳು, 3 ಜೂನಿಯರ್ ಕಮಿಷನ್ಡ್ ಅಧಿಕಾರಿಗಳು, 37 ಸೈನಿಕರು ಭಾಗಿಯಾಗಿದ್ದಾರೆ.