Published on: October 28, 2021
ಸುದ್ಧಿ ಸಮಾಚಾರ 28 ಅಕ್ಟೋಬರ್ 2021
ಸುದ್ಧಿ ಸಮಾಚಾರ 28 ಅಕ್ಟೋಬರ್ 2021
- ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು(ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಸಹಿ ಹಾಕಿದೆ.
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್ಗಳು ಭೇಟಿ ನೀಡಲಿವೆ
- ಶಾಲಾ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ನೀಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬಿಸಿಯೂಟದಲ್ಲಿ ‘ಸಾರವರ್ಧಿತ ಅಕ್ಕಿ ಸೇರ್ಪಡೆಗೊಳಿಸಿ ವಿತರಣೆ ಆರಂಭಿಸಿದೆ.
- ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಕ್ಷಿಪಣಿ ಅಗ್ನಿ-5 ರ ಪರೀಕ್ಷಾರ್ಥ ಉಡಾವಣೆಯನ್ನು ಡಿ ಆರ್ ಡಿ ಒ ಯಶಸ್ವಿಯಾಗಿ ನೆರವೇರಿಸಿದೆ.
- ಖಗೋಳಶಾಸ್ತ್ರಜ್ಞರು ಇದೇ ಮೊದಲ ಬಾರಿಗೆ ನಮ್ಮ ಕ್ಷಿರಪಥ(ಮಿಲ್ಕಿ ವೇ) ನಕ್ಷತ್ರ ಪುಂಜದ ಹೊರಗೆ ಅಸ್ತಿತ್ವದಲ್ಲಿರಬಹುದಾದ ಸಂಭವನೀಯ ಗ್ರಹವನ್ನು ಪತ್ತೆ ಹಚ್ಚಿದ್ದಾರೆ. ನಾಸಾದ ಚಂದ್ರ ಎಕ್ಸ್-ರೇ ಖಗೋಳ ವೀಕ್ಷಣಾಲಯದ ಖಗೋಳ ವಿಜ್ಞಾನಿಗಳು, M51 ಅಥವಾ ‘ವರ್ಲ್ಪೂಲ್’ ಗ್ಯಾಲಕ್ಸಿಯಲ್ಲಿ ಅಸ್ತಿತ್ವದಲ್ಲಿರುವ ಸೂರ್ಯನ ಗಾತ್ರದ M51-ULS-1 ಹೆಸರಿನ ನಕ್ಷತ್ರವನ್ನು ಈ ಸಂಭವನೀಯ ಗ್ರಹ ಸುತ್ತುತ್ತಿದೆ ಎಂದು ಅಂದಾಜಿಸಿದ್ದಾರೆ
- ಆನ್ಲೈನ್ ನಡವಳಿಕೆಯನ್ನು ಮರುರೂಪಿಸುವ ದೃಷ್ಟಿಯಿಂದ, ‘ನಾಗರಿಕ ಅಂತರ್ಜಾಲ’ ನೀತಿಯನ್ನು ಜಾರಿಗೊಳಿಸಲು ಚೀನಾ ಮುಂದಾಗಿದೆ. ಸಮಾಜವಾದಿ ಮೌಲ್ಯಗಳನ್ನು ಉತ್ತೇಜಿಸಲು ಅಂತರ್ಜಾಲವನ್ನು ಒಂದು ವೇದಿಕೆಯಾಗಿ ಬಳಸಿಕೊಳ್ಳುವುದು ಚೀನಾದ ಉದ್ದೇಶ ಎನ್ನಲಾಗಿದೆ.
- ಜಿ 20 ಶೃಂಗಸಭೆಯು ಇಟಲಿಯ ರೋಮ್ನಲ್ಲಿ ಅಕ್ಟೋಬರ್ 30 ಮತ್ತು 31 ರಂದು ನಡೆಯಲಿದೆ ಮತ್ತು ಹವಾಮಾನ ಬದಲಾವಣೆ, ಅಫ್ಘಾನಿಸ್ತಾನ ಮತ್ತು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ