Published on: November 30, 2022
ಸುದ್ಧಿ ಸಮಾಚಾರ: 30 ನವೆಂಬರ್ 2022
ಸುದ್ಧಿ ಸಮಾಚಾರ: 30 ನವೆಂಬರ್ 2022
-
ಏಷ್ಯಾದಲ್ಲೇ ಅತ್ಯಂತ ಉದ್ದನೆಯ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಡೆದ ಹುಬ್ಬಳ್ಳಿ ನಗರದ ಶ್ರೀ ಸಿದ್ದಾರೂಢ ರೈಲು ನಿಲ್ದಾಣಇದರ ಜೊತೆಗೆ ನೈಋತ್ಯ ರೈಲ್ವೆ ವಲಯ ಸಹ ಸಾಕಷ್ಟು ಒಳ್ಳೆಯ ಸಾಧನೆ ಮಾಡಿದೆ. ಸಮಯ ಪಾಲನೆಯಲ್ಲಿ (ಶೇ. 94.10 ಆಗಿದ್ದು) ನೈಋುತ್ಯ ರೈಲ್ವೆ 4ನೇ ಸ್ಥಾನ ಪಡೆದುಕೊಂಡಿದೆ.
-
ಕರ್ನಾಟಕದ ಕಲಬುರಗಿ, ತುಮಕೂರು, ವಿಜಯಪುರ ಜಿಲ್ಲೆಗಳಲ್ಲಿ ಮಿತ್ರಾ ಯೋಜನೆಯಡಿ ಸಹಾಯಾನುದಾನ ಪಡೆದು ವಿಶ್ವಮಟ್ಟದ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ.
-
ಹೆಚ್ಚುತ್ತಿರುವ ಮಾನವ-ಹಾವು ಸಂಘರ್ಷದ ಘಟನೆಗಳನ್ನು ನಿಭಾಯಿಸಲು ಮತ್ತು ನಿಗದಿತ ವೈಜ್ಞಾನಿಕ ರೀತಿಯಲ್ಲಿ ಹಾವುಗಳನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಅರಣ್ಯ ಇಲಾಖೆಯು ಹಾವು ರಕ್ಷಕರಿಗಾಗಿ ಇದೇ ಮೊದಲ ಬಾರಿಗೆ ಕಾರ್ಯಾಚರಣಾ ಕೈಪಿಡಿಯೊಂದನ್ನು ಬಿಡುಗಡೆಗೊಳಿಸಿದೆ.
-
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಪೋಕ್ಸೋ – 2012 ಅನ್ನು ರಾಜ್ಯದ ಎಲ್ಲ ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಟಾನಗೊಳಿಸಲು ಎಸ ಓ ಪಿ ಮತ್ತು ಮಾರ್ಗಸೂಚಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
-
ಮೂಗಿನ ಮೂಲಕ ಹನಿಗಳ ರೂಪದಲ್ಲಿ ನೀಡಬಹುದಾದ ಇನ್ ಕೋವ್ಯಾಕ್ ಕೋವಿಡ್ ಲಸಿಕೆಗೆ ತುರ್ತು ಸಂದರ್ಭದಲ್ಲಿ ಬಳಸಲು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ. ವಿಶ್ವದ ಮೊದಲ ಸೂಜಿ ರಹಿತ ಇಂಟ್ರಾನೇಸಲ್ ಲಸಿಕೆಯಾಗಿದೆ. 18 ವರ್ಷ ಮೀರಿದವರಿಗೆ ಬೂಸ್ಟರ್ ಲಸಿಕೆಯಾಗಿ ಬಳಸಲು ಅನುಮತಿ ನೀಡಲಾಗಿದೆ.
-
259 ಹೆಕ್ಟೇರ್ ಧರಾವಿ ಮರು ಅಭಿವೃದ್ಧಿ ಯೋಜನೆಯ ಬಿಡ್ ನ್ನು ಅದಾನಿ ಸಮೂಹ ಪಡೆದಿದೆ. ಈಗ 2.5 ಚದರ ಕಿ.ಮೀ ನಷ್ಟು ವ್ಯಾಪ್ತಿಯಲ್ಲಿ ಹರಡಿಕೊಂಡಿರುವ 6.5 ಲಕ್ಷ ಸ್ಲಮ್ ಮಂದಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಇದಾಗಿದೆ. ಧಾರಾವಿ, ಜಗತ್ತಿನ ಅತಿ ದೊಡ್ಡ ಕೊಳೆಗೇರಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
-
ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ವಿವಾದವನ್ನು ಮಾತುಕತೆ (ಸಂಧಾನ) ಮೂಲಕ ಬಗೆಹರಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿನ್ನೆಲೆ: ಪೆನ್ನಾರ್ ನದಿಯ ನೀರು ಬಳಸಿಕೊಳ್ಳುವ ಕರ್ನಾಟಕದ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ 2018ರಲ್ಲಿ ದಾವೆ ಹೂಡಿತ್ತು.