Published on: December 6, 2022

ಸುದ್ಧಿ ಸಮಾಚಾರ: 6 ಡಿಸೆಂಬರ್ 2022

ಸುದ್ಧಿ ಸಮಾಚಾರ: 6 ಡಿಸೆಂಬರ್ 2022

  • ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಜೆಇ ಮೆದುಳು ಜ್ವರ (ಜಪಾನೀಸ್ ಎನ್ ಸೆಫಲೈಟಿಸ್) ನಿಯಂತ್ರಣಕ್ಕಾಗಿ ಡಿಸೆಂಬರ್ 5 ರಿಂದ ವಿಶೇಷ ಲಸಿಕಾ ಅಭಿಯಾನ ಆರಂಭವಾಗಲಿದೆ. ಈ ಅಭಿಯಾನದಡಿ 1 – 15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ.

  • ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಹಾರ್ನ್ ಬಿಲ್ (ಮಂಗಟ್ಟೆ)  ಫೆಸ್ಟಿವಲ್ ನಾಗಾಲ್ಯಾಂಡ್ ನ ಅತೀ ದೊಡ್ಡ ವಾರ್ಷಿಕ ಹಬ್ಬವಾಗಿದೆ. ಆಯೋಜಕರು : ಪ್ರವಾಸೋದ್ಯಮ, ಕಲಾ ಮತ್ತು ಸಂಸ್ಕೃತಿ ಇಲಾಖೆ
  •   ಸ್ಥಳ : ಕೊಹಿಮಾದಿಂದ 12 ಕಿ.ಮೀ. ದೂರದಲ್ಲಿರುವ ನಾಗಾ ಹೆರಿಟೇಜ್ ವಿಲೇಜ್

  • 2014-16ರಲ್ಲಿ 130 ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು 2018-20 ರಲ್ಲಿ 97ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಭಾರತೀಯ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವಿಶೇಷ ವರದಿಯಲ್ಲಿ ತಿಳಿಸಿದೆ.
  • ಅಂಗವಿಕಲರಿಗೆ ನ್ಯಾಯಾಂಗ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವ ಗುರಿಯೊಂದಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸುಪ್ರೀಂ ಕೋರ್ಟ್‌ ಕಮಿಟಿ ಆನ್‌ ಆ್ಯಕ್ಸೆಸಿಬಿಲಿಟಿ’ ಹೆಸರಿನ ಸಮಿತಿಯೊಂದನ್ನು ರಚಿಸಿದ್ದಾರೆ.
  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್‌ (ಐಐಟಿ–ಎಂ) ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಸಿಂಧುಜಾ- ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಯೋಜನೆಗೆ ಐಐಟಿ–ಎಂನ ‘ಇನ್ನೋವೇಟಿವ್ ರಿಸರ್ಚ್ ಪ್ರಾಜೆಕ್ಟ್ ’ ಡಿಎಸ್‌ಟಿ ನಿಧಿ- ಪ್ರಯಾಸ್‌ ಯೋಜನೆಯ ಅಡಿಯಲ್ಲಿ ಟಿಬಿಐ-ಕೆಐಇಟಿ, ಆಸ್ಟ್ರೇಲಿಯಾ ಸರ್ಕಾರದ  ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ, ಆಸ್ಟ್ರೇಲಿಯಾ ಹಳೆಯ ವಿದ್ಯಾರ್ಥಿಗಳ ಅನುದಾನ ಯೋಜನೆ 2022 ಮೂಲಕ ಧನಸಹಾಯ ಲಭಿಸಿದೆ.