Published on: March 28, 2023

ಸುರಕ್ಷ 75 ಮಿಷನ್ 2023

ಸುರಕ್ಷ 75 ಮಿಷನ್ 2023


ಸುದ್ಧಿಯಲ್ಲಿ ಏಕಿದೆ? ಬೆಂಗಳೂರು ನಗರದ ಜಂಕ್ಷನ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿರಿಸಲು ಬಿಬಿಎಂಪಿ ರೂಪಿಸಿರುವ ‘ಸುರಕ್ಷ 75 ಮಿಷನ್ 2023’ ಯೋಜನೆಯ ಕಾಫಿ ಟೇಬಲ್‌ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.


ಮುಖ್ಯಾಂಶಗಳು

  • ರೇಸ್‌ಕೋರ್ಸ್ ರಸ್ತೆಗೆ ‘ರೆಬಲ್ ಸ್ಟಾರ್ ಡಾ. ಎಂ.ಎಚ್. ಅಂಬರೀಶ್ ರಸ್ತೆ’ ಎಂದು ಹೆಸರಿಸಿದ ಕಾರ್ಯಕ್ರಮದಲ್ಲಿ ಯೋಜನೆಯ ವಿವರಗಳನ್ನು ಬಿಡುಗಡೆ ಮಾಡಲಾಯಿತು.
  • ಬೆಂಗಳೂರಿನ 75 ಜಂಕ್ಷನ್‌ಗಳನ್ನು ಮರುವಿನ್ಯಾಸಗೊಳಿಸುವ ಯೋಜನೆ ಇದಾಗಿದೆ.
  • ಹೆಚ್ಚು ಅಪಘಾತಗಳಾಗುವ ಜಂಕ್ಷನ್‌ಗಳನ್ನು ಸುರಕ್ಷಿತವಾಗಿರಿಸುವ ಗುರಿಯನ್ನು ಹೊಂದಿರುವ ‘ಸುರಕ್ಷ 75 ಮಿಷನ್ 2023’ ಬಿಬಿಎಂಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ವಿಶ್ವ ಸಂಪನ್ಮೂಲ ಸಂಸ್ಥೆ ಭಾರತ (ಡಬ್ಲ್ಯೂಆರ್‌ಐ) ಸಹಯೋಗದೊಂದಿಗೆ, ಬ್ಲೂಮ್‌ಬರ್ಗ್‌ ಫಿಲಾಂತ್ರೊಪಿಸ್‌ ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ (ಬಿಜಿಆರ್‌ಎಸ್‌) ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ.
  • ಬಿಬಿಎಂಪಿಯು ಕಳೆದ ಎರಡು ವರ್ಷಗಳಲ್ಲಿ ಟೌನ್‌ಹಾಲ್ ಜಂಕ್ಷನ್, ಮೌರ್ಯ ಜಂಕ್ಷನ್ ಮತ್ತು ಬಾಳೇಕುಂದ್ರಿ ವೃತ್ತ ಸೇರಿದಂತೆ ಹಲವಾರು ಜಂಕ್ಷನ್‌ಗಳನ್ನು ಪಾದಚಾರಿ ಪ್ರವೇಶ ಮತ್ತು ಸ್ಪಷ್ಟವಾದ ವಾಕ್‌ವೇಗಳನ್ನು ನಿರ್ಮಿಸುವ ಮೂಲಕ ಸುಧಾರಿಸಿದೆ. ಇದೇ ರೀತಿಯ ಅಭಿವೃದ್ಧಿ ಎಂಟೂ ವಲಯದಲ್ಲಿ ಆಯ್ದ 75 ಜಂಕ್ಷನ್‌ಗಳಲ್ಲಿ ‘ಸುರಕ್ಷಿತ’ ಅಭಿವೃದ್ಧಿಯಾಗಲಿದೆ
  • ಸುರಕ್ಷಿತ, ಪರಿಣಾಮಕಾರಿ, ಅಂತರ್ಗತ ಮತ್ತು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಜನ-ಸ್ನೇಹಿ ಮತ್ತು ಸಮಗ್ರ ಛೇದಕ ರೂಪಾಂತರಗಳನ್ನು ರಚಿಸಲಾಗುತ್ತದೆ.
  • ‘ಸುರಕ್ಷ 75 ಮಿಷನ್ 2023’ ಅಡಿಯಲ್ಲಿ ಬಿಬಿಎಂಪಿಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ಜೊತೆಗೆ ಡಬ್ಲ್ಯೂಆರ್‌ಐ ‘ಜ್ಞಾನ ಪಾಲುದಾರರಾಗಿ’ ರಸ್ತೆ ಸುರಕ್ಷತಾ ಕೋಶವನ್ನು ಸ್ಥಾಪಿಸುತ್ತದೆ. ಸುರಕ್ಷಿತ ಜಂಕ್ಷನ್ ಮಾರ್ಗಸೂಚಿ ಮತ್ತು ಸಂವಾದಾತ್ಮಕ ನಕ್ಷೆಯೊಂದಿಗೆ ನೈಜ-ಸಮಯದ ಮೇಲ್ವಿಚಾರಣೆಯ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲಾಗುತ್ತದೆ

ಉದ್ದೇಶ

  • ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಸೇರಿದಂತೆ ರಸ್ತೆ ಅಪಘಾತಗಳಿಂದ ಸುರಕ್ಷಿತಗೊಳಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಜಂಕ್ಷನ್‌ಗಳನ್ನು ಹೇಗೆ ಗುರುತಿಸಲಾಗಿದೆ?

  • ನಗರದಾದ್ಯಂತ 75 ಜಂಕ್ಷನ್‌ಗಳನ್ನು ಬಿಬಿಎಂಪಿ ಮತ್ತು ಬೆಂಗಳೂರು ಸಂಚಾರ ಪೊಲೀಸರು ನಾಲ್ಕು ವರ್ಷಗಳಲ್ಲಿ ಅಪಘಾತಗಳಿಂದ ವಿಶ್ಲೇಷಿಸಿದ ಪಾದಚಾರಿಗಳ ಸಾವಿನ ಆಧಾರ, ಸಂಚಾರ ದಟ್ಟಣೆ ಮೇಲೆ ಗುರುತಿಸಲಾಗಿದೆ