Published on: November 5, 2022

ಸೇನಾ ಸಮವಸ್ತ್ರಕ್ಕೆ ಪೇಟೆಂಟ್

ಸೇನಾ ಸಮವಸ್ತ್ರಕ್ಕೆ ಪೇಟೆಂಟ್

ಸುದ್ದಿಯಲ್ಲಿ ಏಕಿದೆ?

ಭಾರತೀಯ ಸೇನೆಯು ಹೊಸ ವಿನ್ಯಾಸದ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದೆ. ಹೀಗಾಗಿ ಇನ್ನು ಮುಂದೆ ಅದೇ ಮಾದರಿಯ ಸೇನಾ ಸಮವಸ್ತ್ರದ ವಿನ್ಯಾಸವನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಮುಖ್ಯಾಂಶಗಳು

  • ಕೋಲ್ಕತದಲ್ಲಿರುವ ಇರುವ ವಿನ್ಯಾಸ ಮತ್ತು ಟ್ರೇಡ್ ಮಾರ್ಕ್ನ ಮಹಾ ನಿರ್ದೇಶನಾಲಯ ಕಚೇರಿಯಲ್ಲಿನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದೆ.
  • ಹೊಸ ಸಮವಸ್ತ್ರವು ಸಮಕಾಲೀನ ನೋಟ ಮತ್ತು ಕ್ರಿಯಾತ್ಮಕ ವಿನ್ಯಾಸ ಹೊಂದಿದೆ. ಹಗುರವಾಗಿದ್ದು, ತ್ವರಿತವಾಗಿ ಒಣಗುವ ರೀತಿಯಲ್ಲಿ ವಿನ್ಯಾ ಸ ಮಾಡಲಾಗಿದೆ. ಮಹಿಳಾ ಸೈನಿಕರ ಸಮವಸ್ತ್ರಕ್ಕೆ ಲಿಂಗ ನಿರ್ದಿಷ್ಟ ಮಾರ್ಪಾಡುಗಳನ್ನು ಮಾಡಲಾಗಿದೆ.
  • ಉದ್ದೇಶ: ಸೇನಾ ಸಮವಸ್ತ್ರದ ಹೊಸ ವಿನ್ಯಾಸವನ್ನು ನಕಲು ಮಾಡಬಾರದೆಂದು ಬೌದ್ಧಿಕ ಆಸ್ತಿ ಹಕ್ಕನ್ನು (ಐಪಿಆರ್) ನೋಂದಾಯಿಸಿಕೊಂಡಿದೆ.
  • ವಿನ್ಯಾಸಕರು: ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್‌ಟಿ) ಸಹಯೋಗದಲ್ಲಿ ಭಾರತ ಸೇನಾಪಡೆಯು ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ.

ಏನಿದರ ವಿಶೇಷತೆ?

  • ಸೇನೆಗಾಗಿ ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಬ್ರಿಟಿಷ್‌ ಸೈನ್ಯವು ಬಳಸುವ ಮಾದರಿಯಂತೆ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ದೇಶಗಳ ಸೇನಾ ಸಮವಸ್ತ್ರಗಳ ವಿಶ್ಲೇಷಣೆ ಮತ್ತು ವಿಸ್ತೃತ ಚರ್ಚೆ ನಂತರ ಈ ಸಮವಸ್ತ್ರವನ್ನು ಅಂತಿಮಗೊಳಿಸಲಾಗಿದೆ
  • ಹವಾಮಾನ ಏರಿಳಿತ ಎದುರಿಸಲು ಪೂರಕ: ಸೇನಾ ಸಿಬ್ಬಂದಿ ಬಿಸಿಲು, ಚಳಿ, ಮಳೆ-ರಾತ್ರಿ, ಹಗಲೆನ್ನದೇ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಹವಾಮಾನ ಏರಿಳಿತವನ್ನು ಎದುರಿಸಲು ಪೂರಕವಾದ ಸಮವಸ್ತ್ರ ಇದಾಗಿದೆ. ಸಿಬ್ಬಂದಿ ಕಾರ್ಯಕ್ಷೇತ್ರದ ಭೌಗೋಳಿಕ ಸ್ವರೂಪ ಹಾಗೂ ಹವಾಮಾನ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ.
  • ಮಣ್ಣು ಮತ್ತು ಹಸಿರು ಬಣ್ಣ ಮಿಶ್ರಣ: ಹೊಸ ಸಮವಸ್ತ್ರವು ಮಣ್ಣು ಮತ್ತು ಹಸಿರು ಬಣ್ಣದ ಮಿಶ್ರಣದಿಂದ ಕೂಡಿದೆ. ಹಳೆಯ ಸಮವಸ್ತ್ರಕ್ಕೆ ಹೋಲಿಸಿದರೆ ವಿಭಿನ್ನವಾಗಿದೆ. ಸೇನಾ ಸಿಬ್ಬಂದಿ ಧರಿಸಲು ತುಂಬಾ ಕಂಫರ್ಟ್‌ ಆಗಿರುವಂತೆ ವಿನ್ಯಾಸಗೊಳಿಸಲಾಗಿದೆ.
  • ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕಲ್ಲ: ನೂತನ ಸಮವಸ್ತ್ರವು ಡಿಜಿಟಲ್‌ ಕಣ್ಗಾವಲಿಗೂ ಸುಲಭವಾಗಿ ನಿಲುಕುವುದಿಲ್ಲ. ಮೇಲ್ನೋಟಕ್ಕೆ ಸಿಬ್ಬಂದಿ ಇರುವಿಕೆಯನ್ನು ಗುರುತಿಸಲಾಗದ ಸಮವಸ್ತ್ರ ಇದಾಗಿದೆ.
  • ಮುಕ್ತ ಮಾರುಕಟ್ಟೆಯಲ್ಲಿ ಸಿಗಲ್ಲ: ಸಮವಸ್ತ್ರ ಮುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ಲಭ್ಯವಿರುವುದಿಲ್ಲ ಎಂಬ ವಿಚಾರವನ್ನು ಮೂಲಗಳು ಸ್ಪಷ್ಟಪಡಿಸಿವೆ.

ಪೇಟೆಂಟ್ ಎಂದರೇನು? 

  • ಹಕ್ಕು ಸ್ವಾಮ್ಯದ ಆವಿಷ್ಕಾರಕ್ಕೆ ಅದರ ಮಾಲೀಕರಿಗೆ ನೀಡುವ ವಿಶೇಷ ಅಧಿಕಾರವನ್ನು ಪೇಟೆಂಟ್ ಅಥವಾ ಭೌದ್ದಿಕ ಹಕ್ಕು ಸ್ವಾಮ್ಯ ಎನ್ನುತ್ತಾರೆ. ಇನ್ನೂ ಸುಲಭವಾಗಿ ಹೇಳುವುದಾದರೆ ಒಂದು ವಸ್ತುವಿನ ಮೇಲೆ ಅದರ ನಿಜವಾದ ವಾರಸುದಾರರಿಗೆ ನೀಡಲಾಗುವ ಹಕ್ಕು. ಉದಾಹರಣೆಗೆ ಓರ್ವ ವ್ಯಕ್ತಿ ಅಥವಾ ಒಂದು ಕಂಪೆನಿ ಲೋಗೋವನ್ನು ತಯಾರಿಸಿದರೆ ಅದನ್ನು ಬಳಸುವ, ಇತರೆಡೆಗಳಲ್ಲಿ ಉಪಯೋಗಿಸುವ ಹಕ್ಕು ಕೇವಲ ಅವರದ್ದು ಮಾತ್ರ ಆಗಿರುತ್ತದ
  • ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಕಂಪೆನಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಇಂತಿಷ್ಟು ವರ್ಷದ ವರೆಗೆ ಪೇಟೆಂಟ್ ಅಧಿಕಾರವನ್ನು ನೀಡಲಾಗುತ್ತದೆ. ಇದರ ಬಳಿಕ ಅವರ ಅನುಮತಿಯಲ್ಲದೆ ಇತರರು ಬಳಸಿದರೆ ಕೇಸ್ ದಾಖಲಿಸಬಹುದಾಗಿದೆ.
  • ಭಾರತದಲ್ಲಿ ಸಾಮಾನ್ಯ ಪೇಟೆಂಟ್, ಸಾಂಪ್ರದಾಯಿಕ ಪೇಟೆಂಟ್, ಪಿಸಿಟಿ ರಾಷ್ಟ್ರೀ ಯ ಹಂತದ ಪೇಟೆಂಟ್ ಎಂಬ ಮೂರು ವಿಧಗಳಿವೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಹೊಸ ಆವಿಷ್ಕಾರಗಳು ದುರುಪಯೋಗವಾಗದಿರಲು ಪೇಟೆಂಟ್ ನಿಯಮಗಳು ಸಹಾಯಕ್ಕೆ ಬರುತ್ತವೆ.
  • ಇದರಿಂದ ಪ್ರತಿಭೆಗೆ ಯಾವುದೇ ಮೋಸವಾಗುವುದಿಲ್ಲ. ಜತೆಗೆ ಕೆಲವೊಂದು ಬಾರಿ ಪೇಟೆಂಟ್ಗಳು ಕೆಲವು ವಸ್ತುಗಳನ್ನು ಉಪಯೋಗಿಸುವ ನಮ್ಮ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಯಾವುದೇ ಮಲ್ಟಿ ನ್ಯಾಷನಲ್ ಕಂಪೆನಿಗಳ ಹೆಸರಿನಲ್ಲಿರುವ ಪೇಟೆಂಟ್ ವಸ್ತು (ಸಸ್ಯ, ಔಷಧ)ಗಳನ್ನು ನಮಗೆ ಅಧಿಕಾರಯುತವಾಗಿ ಉಪಯೋಗಿಸಲಾಗುವುದಿಲ್ಲ.