Published on: October 16, 2021

ಸೇಲಾ ಸುರಂಗ ಮಾರ್ಗ

ಸೇಲಾ ಸುರಂಗ ಮಾರ್ಗ

ಸುದ್ಧಿಯಲ್ಲಿ ಏಕಿದೆ? ಅರುಣಾಚಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸೇಲಾ ಸುರಂಗ ಮಾರ್ಗ ಅಂತಿಮ ಹಂತಕ್ಕೆ ಬಂದಿದೆ

  • ಈ ಸುರಂಗ ಮಾರ್ಗ ಇನ್ನೇನು ಪೂರ್ಣಗೊಳ್ಳಲಿದ್ದು, ಚೀನಾದ ವೆಸ್ಟರ್ನ್‌ ಥಿಯೇಟರ್‌ ಕಮಾಂಡ್‌ನ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಸೇನೆಗೆ ಭಾರಿ ಸಹಾಯ ಮಾಡಲಿದೆ.
  • ಸೇಲಾ ಪಾಸ್‌ ಅರುಣಾಚಲ ಪ್ರದೇಶದ ತವಾಂಗ್‌ ಮತ್ತು ವೆಸ್ಟ್‌ ಕಮೆಂಗ್‌ ಜಿಲ್ಲೆಗಳ ನಡುವೆ ಇದೆ. ರಕ್ಷಣಾ ಕಾರ್ಯತಂತ್ರಗಳ ದೃಷ್ಟಿಯಿಂದ ಈ ಸುರಂಗ ಮಾರ್ಗ ತುಂಬಾ ನಿರ್ಣಾಯಕ ಎಂದು ಪರಿಗಣಿಸಲಾಗಿದೆ.
  • ಇದನ್ನು ಬಾರ್ಡರ್‌ ರೋಡ್ಸ್‌ ಆರ್ಗನೈಸೇಷನ್‌ (ಬಿಆರ್‌ಒ) ನಿರ್ಮಾಣ ಮಾಡಿದೆ. ಈ ಸುರಂಗ ಮಾರ್ಗ ಉದ್ಘಾಟನೆಯಾಗುತ್ತಿದ್ದಂತೆ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಅತೀ ಉದ್ದದ ದ್ವಿಪಥದ ಸುರಂಗ ಮಾರ್ಗ ಎಂಬ ವಿಶ್ವದಾಖಲೆಗೆ ಪಾತ್ರವಾಗಲಿದೆ.
  • ನ್ಯೂ ಆಸ್ಟ್ರಿಯನ್‌ ಟನೆಲಿಂಗ್‌ ಮೆಥಡ್‌ (ಎನ್‌ಎಟಿಎಂ) ಉಪಯೋಗಿಸಿ ಇದನ್ನು ನಿರ್ಮಾಣ ಮಾಡಲಾಗಿದೆ. ಇದು ಸ್ನೋ ಲೈನ್‌ಗಿಂತ ಕೆಳಗಿದ್ದು ಎಲ್ಲಾ ಋತುಮಾನದಲ್ಲೂ ಬಳಕೆ ಮಾಡಬಹುದಾದ ಸುರಂಗ ಮಾರ್ಗವಾಗಿದೆ.
  • ಈ ಸುರಂಗ ಮಾರ್ಗದ ನಿರ್ಮಾಣದಿಂದಾಗಿ ತವಾಂಗ್‌ನಿಂದ ಚೀನಾದ ಗಡಿಯನ್ನು ಸಂಪರ್ಕಿಸುವ ರಸ್ತೆ ಮಾರ್ಗದ ಪ್ರಯಾಣ ದೂರ 10 ಕಿಲೋ ಮೀಟರ್‌ ಕಡಿಮೆಯಾಗಲಿದ್ದು, ಅಸ್ಸಾಂನ ತೇಜ್‌ಪುರ್‌ನಲ್ಲಿರುವ ಸೇನೆಯ 4 ಕಾರ್ಪ್ಸ್‌ ಪ್ರಧಾನ ಕಚೇರಿ ಮತ್ತು ತವಾಂಗ್‌ ನಡುವಿನ ಪ್ರಯಾಣದ ಅವಧಿ ಕನಿಷ್ಠ ಒಂದು ಗಂಟೆ ಕಡಿಮೆಯಾಗಲಿದೆ.
  • ಈ ಸುರಂಗ ನಿರ್ಮಾಣದಿಂದ ತವಾಂಗ್‌ನ ಪ್ರವಾಸಿ ಸ್ಥಳಗಳ ಪಟ್ಟಿಗೆ ಮತ್ತೊಂದು ಸ್ಥಳ ಸೇರ್ಪಡೆಯಾಗಲಿದೆ. ಇದರಿಂದ ಮತ್ತಷ್ಟು ಹೆಚ್ಚಿನ ಪ್ರವಾಸಿಗರು ಇತ್ತ ಬರುವ ಸಾಧ್ಯತೆ ಇದೆ. ಈ ಮೂಲಕ ಈಶಾನ್ಯ ರಾಜ್ಯಗಳಲ್ಲೇ ತವಾಂಗ್ ಭಾರಿ ಜನಪ್ರಿಯ ಪ್ರವಾಸಿ ತಾಣವಾಗಲಿದೆ. ಭದ್ರತೆ ಮಾತ್ರವಲ್ಲದೆ ಇಲ್ಲಿನ ಸಾಮಾಜಿಕ-ಆರ್ಥಿಕ ಪ್ರಗತಿಗೂ ಇದು ಪ್ರಮುಖ ಕೊಡುಗೆ ನೀಡಲಿದೆ ಎಂದು ಭಾವಿಸಲಾಗಿದೆ.