Published on: January 14, 2023

‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ)

‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ)


ಸುದ್ದಿಯಲ್ಲಿ ಏಕಿದೆ? ತೆಲಂಗಾಣದಲ್ಲಿ ಶಾಲೆಗೆ ಹೋಗುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ.


ಮುಖ್ಯಾಂಶಗಳು

  • ಆಯೋಜಕರು : ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತೆಲಂಗಾಣ ಮಹಿಳಾ ಪೊಲೀಸ್ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
  • ತೆಲಂಗಾಣ ಪೊಲೀಸರು ತಂತ್ರಜ್ಞಾನ ಮತ್ತು ಸುರಕ್ಷತೆಯ ವಿಷಯದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ.
  • ಉದ್ದೇಶ:  ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್ ಅಗತ್ಯವಾಗಿದೆ.’ ಯುವ ಪೀಳಿಗೆಯು ಸೈಬರ್ ರಾಯಭಾರಿಗಳಾಗಿ, ಸುರಕ್ಷಿತ ಸಮುದಾಯಕ್ಕಾಗಿ ಕೆಲಸ ಮಾಡುವುದು ಜವಾಬ್ದಾರಿಯಾಗಿದೆ. ಮಕ್ಕಳು ಡಿಜಿಟಲ್ ಶಿಷ್ಟಾಚಾರದ ಬಗ್ಗೆ ತಿಳಿದಿರಬೇಕು’.