Published on: January 6, 2022

ಸೌರ ವಿದ್ಯುತ್ ಸುಗ್ಗಿ!

ಸೌರ ವಿದ್ಯುತ್ ಸುಗ್ಗಿ!

ಸುದ್ಧಿಯಲ್ಲಿ ಏಕಿದೆ ? ಭಾರತ ಕಳೆದ 2014 ಮತ್ತು 2021ರ ಅವಧಿಯಲ್ಲಿ ತನ್ನ ಸೌರ ವಿದ್ಯುತ್‌ ಉತ್ಪಾದನೆಯನ್ನು 18 ಪಟ್ಟು ವೃದ್ಧಿಸಿದೆ ಎಂದು ಸರಕಾರ ತಿಳಿಸಿದೆ.

18 ಪಟ್ಟು ಹೆಚ್ಚಳ ಹೇಗೆ?

  • 63 ಗಿಗಾವ್ಯಾಟ್‌ನಿಂದ 47.66 ಗಿಗಾವ್ಯಾಟ್‌ಗೆ ಹೆಚ್ಚಳವಾಗಿದೆ. ಇದರ ಪರಿಣಾಮ ಒಟ್ಟು ವಿದ್ಯುತ್‌ ಉತ್ಪಾದನೆಯಲ್ಲಿ, ಪಳೆಯುಳಿಕೆ ರಹಿತ ಮೂಲಗಳು ಅಥವಾ ಅಸಾಂಪ್ರದಾಯಿಕ ಮೂಲಗಳಿಂದ ಪಡೆಯುವ ವಿದ್ಯುತ್‌ನ ಪ್ರಮಾಣವು ಶೇ.40ಕ್ಕೂ ಹೆಚ್ಚಿನ ಮಟ್ಟಕ್ಕೆ ವೃದ್ಧಿಸಿದೆ.
  • ಎಲ್‌ಇಡಿ ವಿತರಣೆ: ದೇಶಾದ್ಯಂತ ಗ್ರಾಮ ಉಜ್ವಲ ಯೋಜನೆಯ ಅಡಿಯಲ್ಲಿ ಗ್ರಾಮೀಣ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸಲಾಗುತ್ತಿದೆ. ಇದುವರೆಗೆ 36.78 ಕೋಟಿ ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ. ವಿದ್ಯುತ್‌ ಬಳಕೆಯ ದಕ್ಷತೆಯನ್ನು ಇದು ಸುಧಾರಿಸುತ್ತದೆ.
  • ಪರ್‌ಫೋರ್ಮ್‌ ಅಚೀವ್‌ ಆ್ಯಂಡ್‌ ಟ್ರೇಡ್‌ (ಪಿಎಟಿ) : ಕೈಗಾರಿಕಾ ವಲಯದಲ್ಲಿ ಇಂಧನ ದಕ್ಷತೆ ಹೆಚ್ಚಿಸಲು ಪರ್‌ಫೋರ್ಮ್‌ ಅಚೀವ್‌ ಆ್ಯಂಡ್‌ ಟ್ರೇಡ್‌ (ಪಿಎಟಿ) ಯೋಜನೆ ಹಮ್ಮಿಕೊಳ್ಳಲಾಗಿದೆ. 13.28 ದಶಲಕ್ಷ ಟನ್‌ ತೈಲಕ್ಕೆ ಸಮನಾದ ಉಳಿತಾಯ ಮಾಡಲಾಗಿದೆ. ಪರಿಸರ ಮಾಲಿನ್ಯ ತಡೆಗೂ ಸೌರ ವಿದ್ಯುತ್‌ ಸಹಕಾರಿಯಾಗಿದೆ.
  • ಕಾಲುವೆಗಳ ಮೇಲೆ ಸೌರಫಲಕ: ಗುಜರಾತ್‌ನಲ್ಲಿ ನೀರಾವರಿ ಕಾಲುವೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇದರಿಂದ ಸೌರ ವಿದ್ಯುತ್‌ ಯೋಜನೆಗೆ ಭೂ ಸ್ವಾಧೀನದ ಅವಶ್ಯಕತೆ ಉಂಟಾಗುವುದಿಲ್ಲ. ನೀರಿನ ಸಾಗಣೆಗೆ ಅಡಚಣೆಯಾಗದಂತೆ ಕಾಲುವೆಗಳ ಮೇಲೆ ಅಳವಡಿಸಬಹುದು.
  • ಕಲ್ಲಿದ್ದಲಿಗೆ ಪರ್ಯಾಯ ಸೌರ: ಭಾರತ ಸಾಂಪ್ರದಾಯಿಕವಾಗಿ ವಿದ್ಯುತ್‌ ಉತ್ಪಾದನೆಗೆ ಇಂಧನವಾಗಿ ಕಲ್ಲಿದ್ದಲನ್ನು ಬಳಸುತ್ತಿದೆ. ಆದರೆ, ಕ್ರಮೇಣ ಸೌರ ವಿದ್ಯುತ್‌ಗೆ ಬದಲಾಗುತ್ತಿದೆ. ಕೋವಿಡ್‌-19 ಬಿಕ್ಕಟ್ಟಿನ ಸಂದರ್ಭ ಇದಕ್ಕೆ ಆದ್ಯತೆ ನೀಡಲಾಗಿದೆ. ಪ್ರಯಾಣ ನಿರ್ಬಂಧಗಳು ವ್ಯಾಪಕವಾಗಿದ್ದರಿಂದ ಸೋಲಾರ್‌ ವಿದ್ಯುತ್‌ ಉತ್ಪಾದನೆ ಚುರುಕಾಗಿದೆ.
  • ಸೌರ ಫಲಕ ವೆಚ್ಚ ಇಳಿಕೆ: ಭಾರತದಲ್ಲಿ ಕಳೆದ 2010ರಿಂದ 2018ರ ಅವಧಿಯಲ್ಲಿ ಸೌರ ವಿದ್ಯುತ್‌ ಫಲಕಗಳ ಅಳವಡಿಕೆಯ ಯೋಜನೆಗಳ ವೆಚ್ಚದಲ್ಲಿ ಶೇ.80 ಇಳಿಕೆಯಾಗಿದೆ ಎಂದು ಐಆರ್‌ಎನ್‌ಎ ಸಮೀಕ್ಷೆ ತಿಳಿಸಿದೆ. ಸರಕಾರ ನಾನಾ ನೀತಿಗಳ ಮೂಲಕ ಉತ್ತೇಜಿಸುತ್ತಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ.