Published on: October 28, 2021

‘ಸ್ಕೂಲ್ ಆನ್ ವೀಲ್ಸ್’ ಯೋಜನೆ

‘ಸ್ಕೂಲ್ ಆನ್ ವೀಲ್ಸ್’ ಯೋಜನೆ

ಸುದ್ಧಿಯಲ್ಲಿ ಏಕಿದೆ?  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಕೂಲ್ ಆನ್ ವೀಲ್ಸ್ ಯೋಜನೆ ಆರಂಭವಾಗಿದೆ. ಯೋಜನೆ ಅಡಿಯಲ್ಲಿ ನಗರದ ಎಂಟು ಬಿಬಿಎಂಪಿ ವಲಯಗಳಿಗೆ ತಲಾ 10 ಬಸ್‌ಗಳು ಭೇಟಿ ನೀಡಲಿವೆ

  • 1 ರಿಂದ 5 ನೇ ತರಗತಿಗಳು ತೆರೆದ ನಂತರ ಯೋಜನೆಯನ್ನು ಆರಂಭಿಸಲಾಗಿದೆ. ಭಿಕ್ಷಾಟನೆ ಹಾಗೂ ಶಾಲೆಗಳ ಬಿಡ್ಡು ಕಟ್ಟಡ ನಿರ್ಮಾಣ ಕಾರ್ಯದ ವೇಳೆ ಸ್ಥಳಗಳಲ್ಲಿ ಓಡಾಡಿಕೊಂಡಿರುವ ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ.
  • ಯೋಜನೆಯು ದೊಡ್ಡಗೊಲ್ಲರಹಟ್ಟಿ, ಹೊಸಕೆರೆಹಳ್ಳಿಯನ್ನೂ ಒಳಗೊಂಡಿದೆ
  • ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿಯೇ ಈ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗಿತ್ತು. ಆದರೆ, ಕೊರೋನಾ ಸಾಂಕ್ರಾಮಿಕ ರೋಗ 2ನೇ ಅಲೆ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಬಸ್ ಗಳಲ್ಲಿ ಬಿಬಿಎಂಪಿ ಶಿಕ್ಷಕರನ್ನು ನಿಯೋಜಿಸಲಿದೆ. 18 ವರ್ಷದೊಳಗಿನ ಮಕ್ಕಳ ಶೈಕ್ಷಣಿಕ ಸ್ಥಿತಿಯನ್ನು ಅರಿತು ಬೋಧನೆಗಳನ್ನು ಮಾಡಲಾಗುತ್ತದೆ