Published on: August 10, 2021
ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್
ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್
ಸುದ್ಧಿಯಲ್ಲಿ ಏಕಿದೆ ? ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸತತ ಮೂರನೇ ವರ್ಷವೂ ‘ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ’ ವಿಮಾನ ನಿಲ್ದಾಣ ಎಂಬ ಗೌರವಕ್ಕೆ ಪಾತ್ರವಾಗಿದೆ.
- ಏರ್ಪೋರ್ಟ್ ಉದ್ಯಮಕ್ಕೆ ಸಂಬಂಧಿಸಿದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ ನಡೆಸಿದ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ ಭಾರತದ ದೆಹಲಿ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ.
- ನಗರದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಐಜಿಐಎ) ನಿರ್ವಹಿಸುತ್ತಿರುವ ಜಿಎಂಆರ್ ನೇತೃತ್ವದ ಒಕ್ಕೂಟ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(ಡಿಐಎಎಲ್) ಈ ಘೋಷಣೆಯನ್ನು ಮಾಡಿದೆ.
- 2021 ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್ನಲ್ಲಿ ಸತತ ಮೂರನೇ ವರ್ಷ ಐಜಿಐಎ ‘ಭಾರತ ಮತ್ತು ಮಧ್ಯ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ ಮತ್ತು ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಮಾದರಿ ಸುರಕ್ಷತಾ ಪ್ರೋಟೋಕಾಲ್ಗಳನ್ನು ಒದಗಿಸಿದ್ದಕ್ಕಾಗಿ ವಿಮಾನ ನಿಲ್ದಾಣಕ್ಕೆ ‘ಕೋವಿಡ್ -19 ಏರ್ಪೋರ್ಟ್ ಎಕ್ಸಲೆನ್ಸ್ ಅವಾರ್ಡ್’ ನೀಡಲಾಗಿದೆ.
- ದೆಹಲಿ ವಿಮಾನ ನಿಲ್ದಾಣವು 2020ರಲ್ಲಿ 50ನೇ ಸ್ಥಾನ ಪಡೆದಿತ್ತು. 2021 ರಲ್ಲಿ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳಲ್ಲಿ 45 ನೇ ಸ್ಥಾನ ಪಡೆದಿದೆ.