Published on: September 16, 2023
‘ಸ್ಕ್ರಬ್ ಟೈಫಸ್’ ಜ್ವರ
‘ಸ್ಕ್ರಬ್ ಟೈಫಸ್’ ಜ್ವರ
ಸುದ್ದಿಯಲ್ಲಿ ಏಕಿದೆ? ಒಡಿಶಾದಲ್ಲಿ ‘ಸ್ಕ್ರಬ್ ಟೈಫಸ್’ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.
ಮುಖ್ಯಾಂಶಗಳು
- ಬರ್ಗಢ್ ಜಿಲ್ಲೆಯಲ್ಲಿ ಐದು ಮಂದಿ ಮತ್ತು ಸುಂದರ್ಗಢ್ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸ್ಕ್ರಬ್ ಟೈಫಸ್ ರೋಗ ಹರಡುವ ವಿಧಾನ
- ವ್ಯಕ್ತಿಗಳಿಗೆ ಚಿಗಟ ಕಚ್ಚಿದರೆ ಸ್ಕ್ರಬ್ ಟೈಫಸ್ ಜ್ವರ ಹರಡುತ್ತದೆ. ಕೃಷಿ ಭೂಮಿ ಅಥವಾ ಕಾಡು ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಚಿಗಟ ಕಚ್ಚುವ ಸಾಧ್ಯತೆ ಇದ್ದು, ಸೋಂಕಿಗೆ ಒಳಗಾಗುತ್ತಾರೆ.
ರೋಗಲಕ್ಷಣಗಳು
- ಜ್ವರ, ತಲೆನೋವು, ಸ್ನಾಯು ನೋವು, ಕೆಮ್ಮು, ಎದೆಯುರಿ, ಅಜೀರ್ಣ ಮತ್ತು ಮಲಬದ್ಧತೆ ರೋಗಲಕ್ಷಣಗಳನ್ನು ಒಳಗೊಂಡಿರುತ್ತದೆ
ಪತ್ತೆ ಹಚ್ಚುವುದು ಹೇಗೆ?
- ಹಲವು ದಿನಗಳವರೆಗೆ ಜ್ವರ ಕಾಣಿಸಿಕೊಂಡಾಗ ರೋಗಿ ಸ್ಕ್ರಬ್ ಟೈಫಸ್ನಿಂದ ಬಳುತ್ತಿದ್ದಾರೆಯೇ ಎಂದು ಕಂಡುಹಿಡಿಯಲು ELISA ಪರೀಕ್ಷೆ ನಡೆಸಬೇಕಾಗುತ್ತದೆ.