Published on: January 11, 2023

ಸ್ಕ್ರ್ಯಾ ಪ್ ನೀತಿ 2022

ಸ್ಕ್ರ್ಯಾ ಪ್ ನೀತಿ 2022


ಸುದ್ದಿಯಲ್ಲಿ ಏಕಿದೆ? “ಅವಧಿ ಮೀರಿದ ನೋಂದಾಯಿತ ವಾಹನಗಳ ನಾಶ ಪಡಿಸುವ ನೀತಿ’ (ಗುಜರಿ ನೀತಿ) ಗೆ ಕರ್ನಾಟಕ ರಾಜ್ಯ  ಸಚಿವ ಸಂಪುಟ ಅನುಮೋದಿಸಿತು.


ಮುಖ್ಯಾಂಶಗಳು

  • ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗುತ್ತಿದೆ. ಅದರಂತೆ 15 ವರ್ಷ ಹಳೆಯದಾದ ವಾಹನಗಳನ್ನು ನಾಶ ಪಡಿಸುವ ನೀತಿ ಇದಾಗಿದೆ. 2021ರ ಎಪ್ರಿಲ್ನಲ್ಲೇ ಕೇಂದ್ರ ಸರಕಾರವು ವಾಹನಗಳ ಗುಜರಿ ನೀತಿ ಘೋಷಿ ಸಿತ್ತು. ಅದಕ್ಕೆ ಪೂರಕವಾಗಿ ರಾಜ್ಯ ಸರ ಕಾರವು ನೀತಿ ರೂಪಿಸಿದ್ದು, ಸಾರಿಗೆ ಇಲಾಖೆಯು ನೀತಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ.
  • ಪ್ರಸ್ತುತ ರಾಜ್ಯದಲ್ಲಿ 15 ವರ್ಷ ಮೀರಿದ 14.3 ಲಕ್ಷ ದೇಶಾದ್ಯಂತ ಸುಮಾರು 1.2 ಕೋಟಿ ಹಳೆ ಯ ವಾಹನಗಳು ಗುಜರಿ ಸೇರಲಿವೆ ಎಂದು ಹೇಳಲಾಗಿದೆ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡಲು ನೋಂದಣಿ ಶುಲ್ಕ ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ನೀತಿಯಲ್ಲಿರುವ ಅಂಶಗಳು

  • ಅನುಮೋದಿತ ನೀತಿಯಂತೆ ಅವಧಿ ಮೀರಿದ ಯಾವುದೇ ವಾಹನಗಳನ್ನು ಒತ್ತಾಯ ಪೂರ್ವಕವಾಗಿ ಗುಜರಿಗೆ ಹಾಕುವು ದಿಲ್ಲ.
  • ಸ್ವಯಂಪ್ರೇ ರಿತವಾಗಿ ವಾಹನ ಮಾಲೀಕರು ಗುಜರಿ ಕೇಂದ್ರಕ್ಕೆ ಒಪ್ಪಿಸಿ ದರೆ ಮಾತ್ರ ನಾಶಪಡಿಸಲಾಗುವುದು.
  • ಇದಕ್ಕೆ ಪ್ರತಿಯಾಗಿ ವಾಹನ ಸವಾರರಿಗೆ ಠೇವಣಿ ಪ್ರಮಾಣಪತ್ರ (ಸಿಒಡಿ) ನೀಡಲಾಗುತ್ತದೆ.
  • ಅದನ್ನು ಮಾಲೀಕರು ಹೊಸ ವಾಹನ ಖರೀದಿಸುವಾಗ ಪ್ರಸ್ತುತಪಡಿಸಿದರೆ, ನಾಶ ಪಡಿಸಿದ ವಾಹನದ ತೆರಿಗೆಯಲ್ಲಿನ ಶೇ. 25ರಷ್ಟು ವಿನಾಯಿತಿ ದೊರೆಯಲಿದೆ. (ಅಂದರೆ ಗುಜರಿಗೆ ಹಾಕಿದ ವಾಹನಕ್ಕೆ ಒಂದು ಲಕ್ಷ ರೂ. ತೆರಿಗೆ ಪಾವತಿಸಿದ್ದರೆ ಆ ಪೈಕಿ 25 ಸಾವಿರ ರೂ. ಹೊಸ ವಾಹನ ಖರೀದಿಸುವಾಗ ತೆರಿಗೆ ವಿನಾಯಿತಿ ಸಿಗಲಿದೆ).
  • ಸಾರಿಗೆ ವಾಹನಕ್ಕೆ ಶೇಕಡ 15 ರಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ವಿನಾಯಿತಿ ಸಾರಿಗೇತರ ವಾಹನಕ್ಕೆ 15 ವರ್ಷದವರೆಗೆ, ಸಾರಿಗೆ ವಾಹನಕ್ಕೆ 8 ವರ್ಷದವರೆಗೆ ಇರಲಿದೆ.
  • ಇನ್ನು ಅವಧಿ ಮೀರಿದ ವಾಹನಗಳನ್ನು ಫಿಟ್ನೆಸ್ ಸರ್ಟಿಫಿಕೇಟ್ಗಾಗಿ ನೀಡುವ ಸಂದರ್ಭದಲ್ಲಿ ಯಾವುದೇ ವಾಹನ ಸತತ ಎರಡು ಬಾರಿ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುವಲ್ಲಿ ವಿಫಲವಾದರೆ, ಆ ವಾಹನವನ್ನು ಗುಜರಿಗೆ ಹಾಕಲೇಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ ರೆ

15 ವರ್ಷ ಮೇಲ್ಪಟ್ಟ ವಾಹನಗಳಿಗೆ ಹಸಿರು ತೆರಿಗೆ.

  • 15 ವರ್ಷ ಮೇಲ್ಪಟ್ಟ ಸಾರಿಗೇತರ ವಾಹನಗಳಿಗೆ, 7 ವರ್ಷ ಪೂರ್ಣಗೊಳಿಸಿದ ಸಾರಿಗೆ ವಾಹನಗಳಿಗೆ ಆರ್ಸಿ ನವೀಕರಣದ ಸಂದರ್ಭದಲ್ಲಿಕರ್ನಾಟಕ ಮೋಟಾರ್ ವಾಹನ ತೆರಿಗೆ ಕಾಯ್ದೆಅನ್ವಯ ಗ್ರೀನ್ ಟ್ಯಾಕ್ಸ್ ವಿಧಿಸಲಾಗುವುದು.

ಏನಿದು ಹಸಿರು ತೆರಿಗೆ?: 

  • ಮಾಲಿನ್ಯಕಾರಕ ಹಳೆಯ ವಾಹನಗಳ ಮೇಲೆ ವಿಧಿಸುವ ತೆರಿಗೆಗೆ ಗ್ರೀನ್‌ ಟ್ಯಾಕ್ಸ್‌ ಅಥವಾ ಹಸಿರು ತೆರಿಗೆ ಎನ್ನಲಾಗುತ್ತಿದೆ.
  • ವಾಹನ ಸ್ಕ್ರ್ಯಾ ಪೇಜ್ ನೀತಿ (V-VMP): ಏಪ್ರಿಲ್ 1, 2022 ರಿಂದ ಜಾರಿಗೆ ಬಂದಿದೆ. ಇದನ್ನು 2021-22ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಈ ನೀತಿ ಅಡಿ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ನಂತರ ಫಿಟ್ನೆಸ್ ಪರೀಕ್ಷೆಗಳನ್ನು ಒದಗಿಸುತ್ತದೆ, ಆದರೆ ವಾಣಿಜ್ಯ ವಾಹನಗಳಿಗೆ 15 ವರ್ಷಗಳು ಪೂರ್ಣಗೊಂಡ ನಂತರ ಇದು ಅಗತ್ಯವಿರುತ್ತದೆ.
  • ಏಕಗವಾಕ್ಷಿ ಯೋಜನೆ: ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಸ್ವಯಂ ಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ (ವಿ-ವಿಎಂಪಿ) ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ 11 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಪಡಿಸಲಾಗಿದೆ.
  • ಏಕಗವಾಕ್ಷಿ ಯೋಜನೆಗೆ ಕರ್ನಾಟಕ ಸೇರಿದಂತೆ 11 ರಾಜ್ಯಗಳು ಸೇರ್ಪಡೆಯಾಗಿವೆ. ರಾಜ್ಯಗಳ ಗುಜರಿ ಉದ್ಯಮಿಗಳು ಏಕಗವಾಕ್ಷಿ ವ್ಯವಸ್ಥೆಗೆ ಅರ್ಜಿ ಸಲ್ಲಿಸಿ ಕೇಂದ್ರ ಮತ್ತುರಾಜ್ಯ ಸರ್ಕಾರಗಳ ಅನುಮೋದನೆ ಪಡೆಯಲು ಅನುಕೂಲವಾಗಲಿದ ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ಆಂ ಧ್ರಪ್ರದೇಶ, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಅಸ್ಸಾಂ, ಗೋವಾ, ಉತ್ತರಾಖಂಡ ಮತ್ತುಚಂಡೀಗಢವನ್ನು ವಿ-ವಿಎಂಪಿಗಾಗಿ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ ಒಳಪಡಿಸಲಾಗಿದೆ.

ನೀತಿಯ ಪ್ರಯೋಜನಗಳು ಮತ್ತು ಉದ್ದೇಶ

  • ಪರಿಸರ ಮಾಲಿನ್ಯವನ್ನು ತಪ್ಪಿಸುವುದು ಮಾತ್ರವಲ್ಲದೇ ಪರ್ಯಾಯ ಇಂಧನ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ.
  • ಜಾಗತಿಕವಾಗಿ ದೇಶದ ಆಟೋಮೊಬೈಲ್‌ ಕ್ಷೇತ್ರವನ್ನು ಬಲಪಡಿಸಲು ಸಾಧ್ಯವಾಗುತ್ತದೆ. ಈಗಾಗಲೇ ಡಿಸೇಲ್‌ ಎಂಜಿನ್‌ ಪ್ರಯಾಣಿಕ ವಾಹನಗಳ ಉತ್ಪಾದನೆಯನ್ನು ಕೈಬಿಡಲಾಗಿದೆ.
  • ಭವಿಷ್ಯದ ವಾಹನಗಳು ಎನಿಸಿಕೊಂಡಿರುವ ಎಲೆಕ್ಟ್ರಿಕಲ್‌ ವಾಹನಗಳನ್ನು ಜನಪ್ರಿಯಗೊಳಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.