Published on: September 30, 2021
ಸ್ತನ್ಯಪಾನವು ತಾಯಿ ಮತ್ತು ಶಿಶುವಿನ ಮೂಲಭೂತ ಹಕ್ಕು
ಸ್ತನ್ಯಪಾನವು ತಾಯಿ ಮತ್ತು ಶಿಶುವಿನ ಮೂಲಭೂತ ಹಕ್ಕು
ಸುದ್ಧಿಯಲ್ಲಿ ಏಕಿದೆ? ತಾಯಿಯು ತಾನು ಹೆತ್ತ ಮಗುವಿಗೆ ಸ್ತನ್ಯಪಾನ ಮಾಡಿಸುವ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ತಾಯಿ ಮತ್ತು ಮಗು ಇಬ್ಬರ ಮೂಲಭೂತ ಹಕ್ಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯದ ತೀರ್ಪು ಏನು?
- ದೇಶೀಯ ಕಾನೂನು ಮತ್ತು ಅಂತರಾಷ್ಟ್ರೀಯ ಕಾನೂನಿನಡಿ ಸ್ತನ್ಯಪಾನವು ತಾಯಿಯಿಂದ ಬೇರ್ಪಡಿಸಲಾಗದ ಹಕ್ಕು ಎಂದು ಗುರುತಿಸಲಾಗಿದೆ. ಅದೇ ರೀತಿ, ಎದೆಹಾಲುಣಿಸುವ ಶಿಶುವಿನ ಹಕ್ಕನ್ನು ಕೂಡ ತಾಯಿಯ ಹಕ್ಕಿನ ಜತೆಗೇ ವಿಲೀನಗೊಳಿಸಲಾಗಿದೆ. ಇದು ಏಕಕಾಲಿಕ ಹಕ್ಕುಗಳ ಪ್ರಕರಣವಾಗಿದ್ದು, ಮಾತೃತ್ವದ ಈ ಪ್ರಮುಖ ಲಕ್ಷಣವು ಭಾರತ ಸಂವಿಧಾನದ 21ನೇ ವಿಧಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕಿನಡಿ ರಕ್ಷಿಸಲ್ಪಟ್ಟಿದೆ
- ಆನುವಂಶಿಕ ತಾಯಿ ಮತ್ತು ಸಾಕು ತಾಯಿಯ ನಡುವೆ ಯಾರು ಹೆಚ್ಚು ಎಂಬ ವಾದ ಬಂದಾಗ ಅನುವಂಶಿಕ ತಾಯಿಗೇ ಆದ್ಯತೆ ನೀಡಬೇಕು ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
- ಆನುವಂಶಿಕ ತಾಯಿ ಮತ್ತು ಸಾಕು ತಾಯಿ ಈ ಇಬ್ಬರಲ್ಲಿ ಅನುವಂಶಿಕ ತಾಯಿಗೆ ಆದ್ಯತೆ ನೀಡಬೇಕಾಗುತ್ತದೆ. ಆದರೆ, ಸಾಕು ತಾಯಿಯ ಪ್ರಾಮುಖ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದನ್ನು ಸರಿಯಾದ ಕಾರಣಗಳು, ಕಾನೂನು ಮತ್ತು ನ್ಯಾಯಗಳನ್ನು ಪರಿಶೀಲಿಸಿ ನಿರ್ಧರಿಸಬೇಕು
ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಹಲವು ಕಾನೂನುಗಳನ್ನು ಪರಿಶೀಲಿಸಿ ತೀರ್ಪುನೀಡಿದೆ
- ಮಕ್ಕಳ ಹಕ್ಕುಗಳ ಕುರಿತ ಅಂತರಾಷ್ಟ್ರೀಯ ಸಮಾವೇಶ, 1989ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅನುಚ್ಛೇದ 25 (2), ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದ (ಐಸಿಸಿಪಿಆರ್, 1966) ದ ಅನುಚ್ಛೇದ 24 (1), ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯಿದೆ 2015 ರ ಸೆಕ್ಷನ್ 2 (9) ಮೊದಲಾದ ಕಾನೂನುಗಳನ್ನು ಪರಿಶೀಲಿಸಿ ತಾಯಿಯ ಸ್ತನ್ಯಪಾನದ ಹಕ್ಕನ್ನು ಎತ್ತಿಹಿಡಿದಿದೆ.