Published on: May 26, 2023

’ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಹಂತ II

’ಸ್ವಚ್ಛ ಭಾರತ ಮಿಷನ್ ಗ್ರಾಮೀಣ ಹಂತ II

ಸುದ್ದಿಯಲ್ಲಿಏಕಿದೆ? ’ಸ್ವಚ್ಛಭಾರತ ಮಿಷನ್ ಗ್ರಾಮೀಣ್ ಅಡಿಯಲ್ಲಿದೇಶವು ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಮಿಷನ್ನ ಎರಡನೇ ಹಂತದ ಯೋಜನೆಯಲ್ಲಿದೇಶದ ಶೇ 50ರಷ್ಟು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಸ್ಥಾನಮಾನ ಪಡೆದಿವೆ’ ಎಂದು ಕೇಂದ್ರ ಜಲಶಕ್ತಿಸಚಿವಾಲಯ ಪ್ರಕಟಿಸಿದೆ.

ಮುಖ್ಯಾಂಶಗಳು

  • ಈ ಗ್ರಾಮಗಳು ಘನ ಅಥವಾ ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ. ಇಲ್ಲಿಯವರೆಗೆ 2.96 ಲಕ್ಷ ಹಳ್ಳಿಗಳು ಬಯಲು ಬಹಿರ್ದಸೆ ಮುಕ್ತಪ್ಲಸ್ ಎಂದು ಘೋಷಿಸಿಕೊಂಡಿವೆ.
  • ಇದು 2024–25ರ ವೇಳೆ ಗೆ ಸ್ವಚ್ಛಭಾರತ ಮಿಷನ್ ಗ್ರಾಮೀಣ್ ಎರಡನೇ ಹಂತದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿಮಹತ್ವದ ಹೆಜ್ಜೆ ಎಂದು ಸಚಿವಾಲಯ ಹೇಳಿಕೊಂಡಿದೆ.
  • ಒಡಿಎಫ್ ಪ್ಲಸ್ ಗ್ರಾಮಗಳ ಶೇಕಡಾವಾರು ಪ್ರಮಾಣದಲ್ಲಿತೆಲಂಗಾಣ (ಶೇ 100), ಕರ್ನಾಟಕ (ಶೇ 99.5), ತಮಿಳುನಾಡು (ಶೇ 97.8) ಮತ್ತು ಉತ್ತರ ಪ್ರದೇಶ (ಶೇ 95.2) ಉನ್ನತ ಸಾಧನೆ ಮಾಡಿವೆ.
  • ಸ್ವಚ್ಛಭಾರತ ಮಿಷನ್ ಗ್ರಾಮೀಣ್ ಯೋಜನೆಗೆ ಕೇಂದ್ರ ಸರ್ಕಾರವು 2014–15 ಹಾಗೂ 2021–22 ರ ಅವಧಿಯಲ್ಲಿ 83,938 ಕೋಟಿ ಹಂಚಿಕೆ ಮಾಡಿತ್ತು. 2023–24ನೇ ಸಾಲಿಗೆ 52,138 ಕೋಟಿ ಮೀಸಲಿಡಲಾಗಿದೆ. ಜತೆಗೆ, 15ನೇ ಹಣಕಾಸು ಆಯೋಗವು ನೈರ್ಮಲೀಕರಣಕ್ಕೆ ಅನುದಾನ ಹಂಚಿಕೆ ಮಾಡಿದೆ.

ಸಾಧನೆಗಳು

  • ಎಲ್ಲಾ ಗ್ರಾಮಸ್ಥರಿಗೆ ಶೌಚಾಲಯ ಸೌಲಭ್ಯಗಳ ಲಭ್ಯತೆ ಮತ್ತು ಶೌಚಾಲಯಗಳನ್ನು ಬಳಸಲು ಅವರ ಪ್ರೇರಣೆಯಿಂದಾಗಿ ಸುಮಾರು 100% ಗ್ರಾಮೀಣ ನೈರ್ಮಲ್ಯ ವ್ಯಾಪ್ತಿಯನ್ನು ಸಾಧಿಸಲಾಗಿದೆ.
  • ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಎಲ್ಲಾ ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ.

ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ)

  • 31 ಡಿಸೆಂಬರ್ 2030 ರ ಯುಎನ್‌ನ ಎಸ್‌ಡಿಜಿ ಗುರಿಗಿಂತ ಹನ್ನೊಂದು ವರ್ಷಗಳ ಮೊದಲು ಭಾರತವು ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) 6.2-ನೈರ್ಮಲ್ಯವನ್ನು ಸಾಧಿಸಿದೆ.

ಪರಿಣಾಮ:

  • ಸ್ವಚ್ಛ ಭಾರತ್ ಮಿಷನ್ ಪರಿಣಾಮವಾಗಿ, 55 ಕೋಟಿ ಜನರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡರು ಮತ್ತು ಶೌಚಾಲಯಗಳನ್ನು ಬಳಸಲು ಪ್ರಾರಂಭಿಸಿದರು.
  • ಸ್ವಚ್ಛ ಭಾರತವನ್ನು ಸಾಧಿಸುವುದರೊಂದಿಗೆ, ನೀರು ಮತ್ತು ನೈರ್ಮಲ್ಯ ಸಂಬಂಧಿತ ಕಾಯಿಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಸ್ವಚ್ಛ ಭಾರತ್ ಮಿಷನ್ ವಾರ್ಷಿಕವಾಗಿ ಗ್ರಾಮೀಣ ಭಾರತದಲ್ಲಿ ಪ್ರತಿ ಮನೆಗೆ ರೂ. 50,000ಗೂ ಹೆಚ್ಚು ಲಾಭ ಗಳಿಸಿದೆ. .
  • ಬಯಲು ಶೌಚ ಮುಕ್ತ (ಒಡಿಎಫ್) ಆದ ನಂತರ ಹಲವು ಗ್ರಾಮಗಳು ಅತಿಸಾರ, ಮಲೇರಿಯಾ ಮುಂತಾದ ಕಾಯಿಲೆಗಳಿಂದ ಸಾಯುವವರ ಸಂಖ್ಯೆಯಲ್ಲಿ ಇಳಿಕೆ ಕಂಡಿವೆ. ಮಕ್ಕಳ ಆರೋಗ್ಯ ಮತ್ತು ಪೋಷಣೆಯೂ ಸುಧಾರಿಸಿದೆ.
  • ಭಾರತದಲ್ಲಿನ ಎಲ್ಲಾ ಶಾಲೆಗಳು ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯಗಳ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು, 2014 ರಲ್ಲಿ, ಭಾರತ ಸರ್ಕಾರವು ‘ಸ್ವಚ್ಛ ಭಾರತ್ ಸ್ವಚ್ಛ ವಿದ್ಯಾಲಯ’ (SBSV) ಉಪಕ್ರಮವನ್ನು ಪ್ರಾರಂಭಿಸಿತು.

 ಸ್ವಚ್ಛ ಭಾರತ್ ಮಿಷನ್ 

  • ಸ್ವಚ್ಛ ಭಾರತ್ ಮಿಷನ್ ಸ್ವತಂತ್ರ ಭಾರತದ ಬೃಹತ್ ಸಾಮೂಹಿಕ ಚಳುವಳಿ ಅಥವಾ ಜನ ಆಂದೋಲನ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
  • 02 ಅಕ್ಟೋಬರ್, 2014 ರಂದು ಘೋಷಿಸಿದ ಸ್ವಚ್ಛ ಭಾರತ್ ಮಿಷನ್ (SBM) ಸಾಮೂಹಿಕ ನಡವಳಿಕೆಯ ಬದಲಾವಣೆಯ ಮೂಲಕ ಗ್ರಾಮೀಣ ಭಾರತದ ಚಿತ್ರಣವನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ.
  • ಸ್ವಚ್ಛ ಭಾರತ್ ಮಿಷನ್ ಭಾರತ ಸರ್ಕಾರದ ರಾಷ್ಟ್ರವ್ಯಾಪಿ ಅಭಿಯಾನವಾಗಿದ್ದು, ಮನೆಯ ಮಾಲೀಕತ್ವದ ಮತ್ತು ಸಮುದಾಯ ಸ್ವಾಮ್ಯದ ಶೌಚಾಲಯಗಳ ನಿರ್ಮಾಣ, ಅವುಗಳ ಬಳಕೆ ಮತ್ತು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (SLWM) ಆ ಮೂಲಕ ಬಯಲು ಮಲವಿಸರ್ಜನೆ ಮುಕ್ತ ತೆಯನ್ನು (ODF) ಸಾಧಿಸಲು ಜವಾಬ್ದಾರಿಯುತ ಕಾರ್ಯವಿಧಾನವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.