Published on: October 23, 2021

ಸ್ವದೇಶಿ ರಾಕೆಟ್ ಪರೀಕ್ಷಾರ್ಥ ಉಡಾವಣೆ ಮಾಡಿದ ದಕ್ಷಿಣ ಕೊರಿಯಾ

ಸ್ವದೇಶಿ ರಾಕೆಟ್ ಪರೀಕ್ಷಾರ್ಥ ಉಡಾವಣೆ ಮಾಡಿದ ದಕ್ಷಿಣ ಕೊರಿಯಾ

ಸುದ್ಧಿಯಲ್ಲಿ ಏಕಿದೆ? ದಕ್ಷಿಣ ಕೊರಿಯಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಪರೀಕ್ಷಾರ್ಥ ಉಡಾವಣೆ ಮಾಡಿತು.

  • ದೇಶದ ಉಪಗ್ರಹ ಉಡಾವಣಾ ಯೋಜನೆಯ ಅನ್ವೇಷಣೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.
  • ಮೂರು-ಹಂತದ ನೂರಿ ರಾಕೆಟ್ 1.5 ಟನ್ ಸ್ಟೇನ್ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂನ ಬ್ಲಾಕ್ ಡಮ್ಮಿ ಪೇಲೋಡ್ ಅನ್ನು ಭೂಮಿಯಿಂದ 600 ರಿಂದ 800 ಕಿ.ಮೀ (372 ರಿಂದ 497 ಮೈಲಿ) ಎತ್ತರದ ಕಕ್ಷೆಗೆ ತಲುಪಿಸುವ ಗುರಿಯನ್ನು ಯಶಸ್ವಿಯಾಗಿ ಪೂರೈಸಿದೆಯೇ ಎಂಬುದು ಖಚಿತವಾಗಿಲ್ಲ.
  • ನೂರಿ ಬಾಹ್ಯಾಕಾಶ ರಾಕೆಟ್‌ನಲ್ಲಿ ನೈಜ ಉಪಗ್ರಹ ಕಳುಹಿಸುವ ಮೊದಲು 2022ರಲ್ಲಿ ಮತ್ತೊಮ್ಮೆ ಈ ರಾಕೆಟ್‌ ಉಡಾವಣೆ ಮಾಡುವ ಜತೆಗೆ ಹಲವು ಬಾರಿ ಇದನ್ನು ಪರೀಕ್ಷೆಗೆ ಒಳಪಡಿಸಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಯೋಜಿಸಿದ್ದಾರೆ.

ಮಹತ್ವ

  • ತನ್ನ ಉಪಗ್ರಹಗಳನ್ನು ಉಡಾಯಿಸಲು ಇತರ ದೇಶಗಳನ್ನು ಅವಲಂಬಿಸಿರುವ ದಕ್ಷಿಣ ಕೊರಿಯಾ ಸ್ವದೇಶಿ ತಂತ್ರಜ್ಞಾನದೊಂದಿಗೆ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ 10ನೇ ರಾಷ್ಟ್ರವೆನಿಸಿಕೊಳ್ಳಲು 1990ರ ದಶಕದ ಆರಂಭದಿಂದಲೂ ಪ್ರಯತ್ನಿಸುತ್ತಿದೆ.
  • ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಇಂತಹ ಪರೀಕ್ಷಾರ್ಥ ಪ್ರಯೋಗ ನಿರ್ಣಾಯಕವಾಗಿದೆ. ಇದರಲ್ಲಿ ಹೆಚ್ಚು ಸುಧಾರಿತ ಸಂವಹನ ಉಪಗ್ರಹಗಳನ್ನು ಕಳುಹಿಸುವ ಮತ್ತು ತನ್ನದೇ ಆದ ಮಿಲಿಟರಿ ಗುಪ್ತಚರ ಉಪಗ್ರಹಗಳನ್ನು ಕಳುಹಿಸುವ ಯೋಜನೆಗಳು ಸೇರಿವೆ. 2030ರ ವೇಳೆಗೆ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಕಳುಹಿಸುವ ವಿಶ್ವಾಸವನ್ನೂ ದೇಶ ಹೊಂದಿದೆ.