Published on: November 3, 2022

ಹಂಪಿ ಬೈ ನೈಟ್’ಯೋಜನೆ

ಹಂಪಿ ಬೈ ನೈಟ್’ಯೋಜನೆ

ಸುದ್ದಿಯಲ್ಲಿ ಏಕಿದೆ?

ವಿಶ್ವವಿಖ್ಯಾತ ಹಂಪಿಯಲ್ಲಿ ಕನ್ನಡ ರಾಜ್ಯಾತ್ಸವದ ನಿಮಿತ್ತ ರಾತ್ರಿ ಹಂಪಿ ಬೈ ನೈಟ್ ವಿನೂತನ ಯೋಜನೆಯ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಚಾಲನೆ ನೀಡಿದರು.

ಮುಖ್ಯಾಂಶಗಳು

  • ಇನ್ನು ಮುಂದೆ  ಹಂಪಿಯಲ್ಲಿರುವ 18 ಸ್ಮಾರಕಗಳನ್ನು ಪ್ರವಾಸಿಗರು ಸಂಜೆ ವೇಳೆ ಬೆಳಕು ಮತ್ತು ಧ್ವನಿ ಕಾರ್ಯಕ್ರಮದ ಮೂಲಕ ವೀಕ್ಷಿಸಬಹುದು.
  • ತಾಂತ್ರಿಕ ಕಾರಣಗಳಿಂದ ಒಂದು ವರ್ಷದಿಂದ ‘ಹಂಪಿ ಬೈ ನೈಟ್’ ಯೋಜನೆ ಸ್ಥಗಿತಗೊಂಡಿತ್ತು. ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್‌ಮೆಂಟ್ ಅಥಾರಿಟಿ ಮತ್ತು ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾಯಿಂದ ಅನುಮತಿಯ ದೊರೆಯದ ಹಿನ್ನೆಲೆಯಲ್ಲಿ ಯೋಜನೆಯನ್ನು ತಡೆಹಿಡಿಯಲಾಗಿತ್ತು.
  • ಹಂಪಿ ಸ್ಥಳದ ಮಹಿಮೆ ಸಾರುವ ಕಥನ, ಶ್ರೀವಿರೂಪಾಕ್ಷೇಶ್ವರ ಮತ್ತು ಶ್ರೀ ಪಂಪಾಂಬಿಕೆ ದೇವಿ ಕಥನ ಮತ್ತು ವಾಲಿ ಮತ್ತು ಸುಗ್ರೀವ ಕಥನವುಳ್ಳ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.
  • ಜಿಲ್ಲಾಡಳಿತ ಮತ್ತು ಹಂಪಿ ವರ್ಲ್ಡ್ ಹೆರಿಟೇಜ್ ಏರಿಯಾ ಮ್ಯಾನೇಜ್‌ಮೆಂಟ್ ಅಥಾರಿಟಿ ಮೇಲ್ವಿಚಾರಣೆಯಲ್ಲಿ ಖಾಸಗಿ ಕಂಪನಿಯೊಂದು ಹಂಪಿ ಬೈ ನೈಟ್ ಕಾರ್ಯಕ್ರಮದ ಗುತ್ತಿಗೆಯನ್ನು ಪಡೆದುಕೊಂಡಿದೆ.

ಹಂಪಿಯ ಬಗ್ಗೆ   ವಿವರಣೆ

  • ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (1336-1565) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
  • ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು ‘ವಿಜಯನಗರ’ ಮತ್ತು ‘ವಿರುಪಾಕ್ಷಪುರ’ ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.
  • ಚಂಪೊಲಿಥಿಕ್ ಮತ್ತು ನವಶಿಲಾಯುಗದ ಯುಗದ ಹೊರತಾಗಿ ಹಂಪಿಯ ಇತಿಹಾಸವು 3 ನೇ ಶತಮಾನದ ಅಶೋಕ ಸಾಮ್ರಾಜ್ಯದ ಶಾಸನಗಳನ್ನು ಸಹ ನಮಗೆ ತಿಳಿಸುತ್ತದೆ.
  • ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
  • ಕೃಷ್ಣ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆ ಸ್ಮಾರಕಗಳ ಪಟ್ಟಿ ಮಾಡಲಾಗಿದೆ. ಕೃಷ್ಣ ದೇವಾಲಯವನ್ನು ಕ್ರಿ.ಶ 1513 ರಲ್ಲಿ ಕೃಷ್ಣದೇವರಾಯ ನಿರ್ಮಾಣ ಮಾಡಿದ್ದಾನೆ.