Published on: February 10, 2024
ಹಕ್ಕಿ ಉತ್ಸವ 2024
ಹಕ್ಕಿ ಉತ್ಸವ 2024
ಸುದ್ದಿಯಲ್ಲಿ ಏಕಿದೆ? ಜನೇವರಿಯಲ್ಲಿ ಬಾಗಲಕೋಟ ಜಿಲ್ಲೆಯ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ 10 ನೇ ಆವೃತ್ತಿಯ ಹಕ್ಕಿ ಉತ್ಸವ ನಡೆಯಿತು.
ಮುಖ್ಯಾಂಶಗಳು
- ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸಹಯಯೋಗದಲ್ಲಿ ನಡೆಯಿತು.
- ಈ ಉತ್ಸವದ ಮ್ಯಾಸ್ಕಾಟ್: ಗ್ರೇಟರ್ ಫ್ಲೆಮಿಂಗೋ (ರಾಜಹಂಸ)
- ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶ ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ.
- ಪ್ರತಿ ವರ್ಷ ಆಸ್ಪ್ರೇಲಿಯಾ, ಸೈಬಿರಿಯಾ, ಮಂಗೋಲಿಯಾ, ಗುಜರಾತ್ ಸೇರಿದಂತೆ ದೇಶ ವಿದೇಶದ 150ಕ್ಕೂ ಅಧಿಕ ಪ್ರಭೇದದ ಸಹಸ್ರಾರು ಸಂಖ್ಯೆಯ ಹಕ್ಕಿಗಳು ಇಲ್ಲಿಗೆ ಆಗಮಿಸುತ್ತವೆ.
- ನವೆಂಬರ್‌ನಿಂದ ಬಂದು ಮೇ ವರೆಗೆ ಇಲ್ಲಿ ಆಶ್ರಯ ಪಡೆದು ಸಂತಾನೋತ್ಪತ್ತಿ ನಡೆಸಿ ಸ್ವದೇಶಕ್ಕೆ ಮರಳುತ್ತವೆ. ಇವುಗಳಲ್ಲಿ ಗ್ರೇಟರ್ ಫ್ಲೆಮಿಂಗೋ (ರಾಜಹಂಸ) ಪ್ರಮುಖವಾಗಿದೆ.
ಆಲಮಟ್ಟಿ ಅಣೆಕಟ್ಟು
- ಜುಲೈ 2005 ರಲ್ಲಿ ಪೂರ್ಣಗೊಂಡಿರುವ ಉತ್ತರ ಕರ್ನಾಟಕ, ಕೃಷ್ಣ ನದಿಯ ಮೇಲೆ ಆಲಮಟ್ಟಿ ಅಣೆಕಟ್ಟು ಒಂದು ಜಲವಿದ್ಯುತ್ ಯೋಜನೆಯಾಗಿದೆ. ಅಣೆಕಟ್ಟಿನ ವಾರ್ಷಿಕ ವಿದ್ಯುತ್ ಉತ್ಪಾದನೆಯು 560 MU (ಅಥವಾ GWh) ಆಗಿದೆ.
- ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ.
ನಿಮಗಿದು ತಿಳಿದಿರಲಿ
2023 ರ ಹಕ್ಕಿ ಉತ್ಸವ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ನಡೆಯಿತು