Published on: August 20, 2022

ಹರಿಯಾಣ 2ಜಿ ಎಥೆನಾಲ್ ಸ್ಥಾವರ (ಪ್ಲಾಂಟ್)

ಹರಿಯಾಣ 2ಜಿ ಎಥೆನಾಲ್ ಸ್ಥಾವರ (ಪ್ಲಾಂಟ್)

ಸುದ್ದಿಯಲ್ಲಿ ಏಕಿದೆ?  

2 ನೇ ತಲೆಮಾರಿನ ಎಥೆನಾಲ್ ಸ್ಥಾವರವನ್ನು ಆಗಸ್ಟ್ 10, 2022 ರಂದು ಹರಿಯಾಣದಲ್ಲಿ ವಿಶ್ವ ಜೈವಿಕ ಇಂಧನ ದಿನದ ಸಂದರ್ಭದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ.

  • ಈ ಸ್ಥಾವರವು ಹರಿಯಾಣ ಮತ್ತು ಪಕ್ಕದ ಪ್ರದೇಶದಲ್ಲಿ ಭತ್ತದ ಹುಲ್ಲು ಸುಡುವ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ‘ತ್ಯಾಜ್ಯದಿಂದ ಸಂಪತ್ತು’ ಉಪಕ್ರಮದ ಹೊಸ ಅಧ್ಯಾಯ ಇದರಿಂದ ಆರಂಭವಾಗಲಿದೆ.
  • ಇದನ್ನು ವರ್ಚುವಲ್ ಮೋಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

2G ಎಥೆನಾಲ್ ಪ್ಲಾಂಟ್ ಬಗ್ಗೆ:

  • ಎರಡನೇ ತಲೆಮಾರಿನ (2G) ಎಥೆನಾಲ್ ಸ್ಥಾವರವನ್ನು ಪಾಣಿಪತ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ (PRPC) ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಸ್ಥಾಪಿಸಿದೆ.
  • 999 ಕೋಟಿ ಮೌಲ್ಯದ ಸ್ಥಾವರವನ್ನು 35 ಎಕರೆ ಜಾಗದಲ್ಲಿ ಸ್ಥಾಪಿಸಲಾಗಿದೆ.
  • ಸ್ಥಾವರವು ದಿನಕ್ಕೆ 100 ಕಿಲೋಲೀಟರ್ ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಇದು ಭತ್ತ ಕೃಷಿಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹುಲ್ಲು ಸುಡುವ ಮೂಲಕ ಆಗುವ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಸ್ಥಾವರದ ಮಹತ್ವ

  • 2G ಎಥೆನಾಲ್ ಜೈವಿಕ ಸಂಸ್ಕರಣಾಗಾರವು ಭತ್ತದ ಹುಲ್ಲು (ಪರಾಲಿ) ಅನ್ನು ಪೂರಕ ವಸ್ತು ಆಗಿ ಬಳಸುತ್ತದೆ.
  • ಒಂದು ದಿನದಲ್ಲಿ 750 ಟನ್ ಭತ್ತದ ಒಣಹುಲ್ಲಿನ ಸಂಸ್ಕರಿಸಿದ ನಂತರ ಇದು ದಿನಕ್ಕೆ 100 ಕಿಲೋಲೀಟರ್ ಎಥೆನಾಲ್ ಅನ್ನು ಉತ್ಪಾದಿಸುತ್ತದೆ.
  • ವಾಣಿಜ್ಯ ಆಧಾರದ ಮೇಲೆ 2G ಎಥೆನಾಲ್ ಉತ್ಪಾದನೆಯು 90 ದಿನಗಳಲ್ಲಿ ಪ್ರಾರಂಭವಾಗುತ್ತದೆ.
  • ಈ ಸ್ಥಾವರವು ಸುಮಾರು 250 ಜನರಿಗೆ ನೇರವಾಗಿ ಉದ್ಯೋಗವನ್ನು ನೀಡುತ್ತದೆ. ಇದರಿಂದ ಪರೋಕ್ಷವಾಗಿ 1000 ಮಂದಿಗೆ ಉದ್ಯೋಗ ದೊರೆಯಲಿದೆ.
  • ಸ್ಥಾವರವು ಪಾಣಿಪತ್, ಕರ್ನಾಲ್, ಸೋನೆಪತ್, ಜಿಂದ್, ಕುರುಕ್ಷೇತ್ರ, ಅಂಬಾಲಾ ಮತ್ತು ಯಮುನಾನಗರದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ.
  • ಎಥೆನಾಲ್ ಉತ್ಪಾದನೆಗೆ ರೈತರಿಂದ ಭತ್ತದ ಹುಲ್ಲನ್ನು ಖರೀದಿಸಲಾಗುವುದು. ಈ ಉದ್ದೇಶಕ್ಕಾಗಿ ಪಾಣಿಪತ್ ಮತ್ತು ಕರ್ನಾಲ್ ನಲ್ಲಿ 12 ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ವಿಶ್ವ ಜೈವಿಕ ಇಂಧನ ದಿನ

  • ಪ್ರತಿ ವರ್ಷ ಆಗಸ್ಟ್ 10ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿತ್ಯಾಜ್ಯ, ಪಾಚಿ (ಆಲ್ಗೆ), ಕೈಗಾರಿಕೆ ಮತ್ತು ಕೃಷಿ ತ್ಯಾಜ್ಯಗಳಿಂದ ಜೈವಿಕ ಇಂಧನವನ್ನು ಉತ್ಪಾದಿಸಲಾಗುತ್ತದೆ. ಪಳೆಯುಳಿಕೆ ಇಂಧನಗಳಿಗೆ (Fossil Fuels) ಹೋಲಿಸಿದರೆ ಜೈವಿಕ ಇಂಧನವನ್ನು ಅತಿ ಕಡಿಮೆ ಸಮಯದಲ್ಲಿ ದ್ರವ ಅಥವಾ ಅನಿಲ ರೂಪದಲ್ಲಿ ಉತ್ಪಾದಿಸಲಾಗುತ್ತದೆ. ಇವು ಪರಿಸರ ಸ್ನೇಹಿ, ಸುಸ್ಥಿರ, ನವೀಕರಿಸಬಲ್ಲ ಹಾಗೂ ಕೊಳೆಯಬಲ್ಲ ಇಂಧನವಾಗಿರುತ್ತದೆ.

ಜೈವಿಕ ಇಂಧನ ದಿನದ ಇತಿಹಾಸ

  • ಭಾರತದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಇಲಾಖೆಗಳು 2015ರಿಂದ ಜೈವಿಕ ಇಂಧನ ದಿನದ ಆಚರಣೆಗೆ ಚಾಲನೆ ನಡಿದವು.
  • ಆಗಸ್ಟ್ 10ರಂದೇ ಏಕೆ ಜೈವಿಕ ಇಂಧನ ದಿನವನ್ನು ಆಚರಿಸಲಾಗುತ್ತದೆ ಎನ್ನುವುದಕ್ಕೂ ಒಂದು ಕಾರಣವಿದೆ. ಜರ್ಮನಿಯ ಸಂಶೋಧಕ ಸರ್ ರುಡಾಲ್ಫ್​ ಡೀಸೆಲ್ (Sir Rudolf Diesel) ಆಗಸ್ಟ್ 10, 1893ರಂದು ಮೊದಲ ಬಾರಿಗೆ ಕಡ್ಲೆಕಾಯಿ ಎಣ್ಣೆಯಿಂದ ಡೀಸೆಲ್ ಎಂಜಿನ್​ನ ಕಾರ್ಯಾಚರಣೆ ಮಾಡಿದ. ಇದು ಪಳೆಯುಳಿಕೆ ಇಂಧನಗಳಿಗೆ ಬದಲಿಯಾಗಿ ಬಳಸಬಲ್ಲ ಸುರಕ್ಷಿತ, ಸುಸ್ಥಿರ ಮತ್ತು ನವೀಕರಿಸಲು ಸಾಧ್ಯವಿರುವ ಪರ್ಯಾಯವನ್ನು ಒದಗಿಸಿಕೊಡುವ ಮಹತ್ವದ ಸಂಶೋಧನೆ ಎನಿಸಿತು.