Published on: January 10, 2023
ಹಸಿರು ಜಲಜನಕ ಮಿಷನ್ ಸ್ಥಾಪನೆ
ಹಸಿರು ಜಲಜನಕ ಮಿಷನ್ ಸ್ಥಾಪನೆ
ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯ ಹಸಿರು ಜಲಜನಕ (ಹೈಡ್ರೋ ಜನ್) ಮಿಷನ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- ಮಿಷನ್ನ ಆರಂಭಿಕ ವೆಚ್ಚವು 19,744 ಕೋಟಿ ರೂಪಾಯಿಗಳಾಗಿರುತ್ತದೆ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 400 ಕೋಟಿ ರೂಪಾಯಿಗಳು ಮತ್ತು ಇತರ ಮಿಷನ್ ಘಟಕಗಳಿಗೆ 388 ಕೋಟಿ ರೂಪಾಯಿಗಳು.
- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು (ಎಂಎನ್ಆರ್ ಇ) ಆಯಾ ಘಟಕಗಳ ಅನುಷ್ಠಾನಕ್ಕಾಗಿ ಯೋಜನೆಯ ಮಾರ್ಗಸೂಚಿಗಳನ್ನು ರೂಪಿಸುತ್ತದೆ.
ಉದ್ದೇಶ :
- 2050ರ ಹೊತ್ತಿಗೆ ಭೂಮಿಯನ್ನು ಇಂಗಾಲ ಮುಕ್ತಗೊಳಿಸುವ ಗುರಿಯನ್ನು ಜಗತ್ತಿನ ಎಲ್ಲರಾಷ್ಟ್ರಗಳು ಹಾಕಿಕೊಂಡಿವೆ. ಈ ನಿಟ್ಟಿನಲ್ಲಿಜಲಜನಕ ತಯಾರಿಕೆ ಕಾರ್ಯಯೋಜನೆಯು ಪ್ರಮುಖ ಹೆಜ್ಜೆಯಾಗಿದೆ. ಭಾರತವನ್ನು ಇಂಧನ ಭದ್ರತೆಯುಳ್ಳ ರಾಷ್ಟ್ರವಾಗಿ ರೂಪಿಸಬಲ್ಲಹಾಗೂ ಸ್ವಚ್ಛಇಂಧನ ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಯುಳ್ಳ ದೂರದೃಷ್ಟಿಯ ಕ್ರಮವಾಗಿದೆ.
2030 ರ ವೇಳೆಗೆ ಮಿಷನ್ನ ಫಲಿತಾಂಶಗಳು
- ದೇಶದಲ್ಲಿ ಸುಮಾರು 125 ಗಿಗಾವ್ಯಾಟ್ ನಷ್ಟು ಸಂಬಂಧಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಜೊತೆಗೆ ವಾರ್ಷಿಕ ಕನಿಷ್ಠ 5 ಎಂಎಂಟಿ (ಮಿಲಿಯನ್ ಮೆಟ್ರಿಕ್ ಟನ್) ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯದ ಅಭಿವೃದ್ಧಿ
- ಒಂದು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಪಳೆಯುಳಿಕೆ ಇಂಧನ ಆಮದುಗಳಲ್ಲಿ ಒಟ್ಟುಗೂಡಿದ ಕಡಿತ.
- ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಸುಮಾರು 50 ಎಂಎಂಟಿ ಕಡಿತ
ಪ್ರಯೋಜನಗಳು
- ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳಿಗೆ ರಫ್ತು ಅವಕಾಶಗಳ ಸೃಷ್ಟಿ
- ಕೈಗಾರಿಕಾ, ಚಲನಶೀಲತೆ ಮತ್ತು ಶಕ್ತಿ ವಲಯಗಳ ಡಿಕಾರ್ಬೊನೈಸೇಶನ್ (ಇಂಗಾಲ ಹೊರಸೂಸುವಿಕೆಯ ಕಡಿತ) ಆಮದು ಮಾಡಿದ ಪಳೆಯುಳಿಕೆ ಇಂಧನಗಳು ಮತ್ತು ಫೀಡ್ಸ್ಟಾಕ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು
- ಸ್ಥಳೀಯ ಉತ್ಪಾದನಾ ಸಾಮರ್ಥ್ಯಗಳ ಅಭಿವೃದ್ಧಿ
- 2030ರ ವೇಳೆಗೆ ಈ ಗುರಿಗಳು ರೂ. 8 ಲಕ್ಷ ಕೋಟಿ ಹೂಡಿಕೆ ಮತ್ತು 6 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿ.
- 2030ರ ವೇಳೆಗೆ ಸುಮಾರು 50 ಎಂಎಂಟಿ ವಾರ್ಷಿಕ ಇಂಗಾಲ ಹೊರಸೂಸುವಿಕೆಯನ್ನು ತಡೆಯುವ ನಿರೀಕ್ಷೆಯಿದೆ.
ಯೋಜನೆ
- ಹಸಿರು ಜಲಜನಕದ ಬೇಡಿಕೆ ಸೃಷ್ಟಿ, ಉತ್ಪಾದನೆ, ಬಳಕೆ ಮತ್ತು ರಫ್ತಿಗೆ ಮಿಷನ್ ಅನುಕೂಲ ಮಾಡುತ್ತದೆ. ಗ್ರೀನ್ ಹೈಡ್ರೋಜನ್ ಪರಿವರ್ತನೆ ಕಾರ್ಯಕ್ರಮದ (ಎಸ್ಐಜಿಎಚ್ ಟಿ – ಸೈಟ್) ಕಾರ್ಯತಂತ್ರದ ಮಧ್ಯಸ್ಥಿಕೆಗಳ ಅಡಿಯಲ್ಲಿ, ಎರಡು ವಿಭಿನ್ನ ಆರ್ಥಿಕ ಪ್ರೋತ್ಸಾಹ ಕಾರ್ಯವಿಧಾನಗಳನ್ನು – ಎಲೆಕ್ಟ್ರೋಲೈಸರ್ಗಳ ದೇಶೀಯ ಉತ್ಪಾದನೆ ಮತ್ತು ಹಸಿರು ಜಲಜನಕದ ಉತ್ಪಾದನೆಯನ್ನು ಗುರಿಯಾಗಿಟ್ಟುಕೊಂಡು ಮಿಷನ್ ಅಡಿಯಲ್ಲಿ ಒದಗಿಸಲಾಗುತ್ತದೆ.
- ಮಿಷನ್ ಉದಯೋನ್ಮುಖ ಬಳಕೆದಾರರ ವಲಯಗಳು ಮತ್ತು ಉತ್ಪಾದನಾ ಮಾರ್ಗಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಸಹ ಬೆಂಬಲಿಸುತ್ತದೆ.
- ದೊಡ್ಡ ಪ್ರಮಾಣದ ಉತ್ಪಾದನೆ ಮತ್ತು/ಅಥವಾ ಜಲಜನಕದ ಬಳಕೆಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಪ್ರದೇಶಗಳನ್ನು ಗ್ರೀನ್ ಹೈಡ್ರೋಜನ್ ಹಬ್ಸ್ ಎಂದು ಗುರುತಿಸಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುತ್ತದೆ.
- ಹಸಿರು ಜಲಜನಕ ಪರಿಸರ ವ್ಯವಸ್ಥೆಯ ಸ್ಥಾಪನೆಯನ್ನು ಬೆಂಬಲಿಸಲು ಸಕ್ರಿಯಗೊಳಿಸುವ ನೀತಿ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗುವುದು.
- ದೃಢವಾದ ಮಾನದಂಡಗಳು ಮತ್ತು ನಿಯಮಾವಳಿಗಳ ಚೌಕಟ್ಟನ್ನು ಸಹ ಅಭಿವೃದ್ಧಿಪಡಿಸಲಾಗುವುದು. ಸಂಶೋಧನೆ ಮತ್ತು ಅಭಿವೃದ್ಧಿ (ಸ್ಟ್ರಾಟೆಜಿಕ್ ಹೈಡ್ರೋಜನ್ ಇನ್ನೋವೇಶನ್ ಪಾಲುದಾರಿಕೆ – ಎಸ್ಎಚ್ಐಪಿ)ಗಾಗಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಚೌಕಟ್ಟನ್ನು ಮಿಷನ್ ಅಡಿಯಲ್ಲಿ ಸುಗಮಗೊಳಿಸಲಾಗುತ್ತದೆ
- ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಗುರಿ ಆಧಾರಿತ, ಸಮಯ ಬದ್ಧವಾಗಿದ್ದು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸೂಕ್ತವಾಗಿ ಹೆಚ್ಚಿಸಲಾಗುತ್ತದೆ.
- ಮಿಷನ್ ಅಡಿಯಲ್ಲಿ ಒಂದು ಸಂಘಟಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸಹ ಕೈಗೊಳ್ಳಲಾಗುವುದು.
- ಮಿಷನ್ ನ ಸಮನ್ವಯ ಮತ್ತು ಅನುಷ್ಠಾನ: ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
- ಉತ್ಪಾದನೆಯಲ್ಲಿ ಮೊದಲ ಸ್ಥಾನ: ಪ್ರಸ್ತುತ ಹಸಿರು ಜಲಜನಕ ಉತ್ಪಾದನೆಯಲ್ಲಿಚೀನಾ ಮುಂಚೂಣಿಯಲ್ಲಿದ್ದುಜಾಗತಿಕವಾಗಿ ಒಟ್ಟು ಉತ್ಪಾದನೆಯ ಮೂರನೇ ಒಂದರಷ್ಟನ್ನು ಈ ದೇಶವೇ ತಯಾರಿಸುತ್ತದೆ.
ಜಲಜನಕ ಮತ್ತು ಅದರ ಪ್ರಯೋಜನಗಳು
- ಒಂದು ರಾಸಾಯನಿಕ ಮೂಲಧಾತು ಆಗಿದ್ದು, ವಿಶ್ವದಲ್ಲಿ ಹೇರಳವಾಗಿ ಲಭಿಸುತ್ತದೆ. ಇದು ಅತ್ಯಂತ ಹಗುರವಾದ ಮೂಲಧಾತು. ಇದಕ್ಕೆ ಬಣ್ಣ, ರುಚಿ, ವಾಸನೆ ಇಲ್ಲ. ಇದರಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ. ಇದಕ್ಕೆ ಪಿರಿಯಾಡಿಕ್ ಪಟ್ಟಿಯಲ್ಲಿ ಮೊದಲ ಸ್ಥಾನ ದಲ್ಲಿದೆ.
- ತೈಲ ಹಾಗೂ ಕಲ್ಲಿದ್ದಲು ಬಳಕೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾದರೆ, ಜಲಜನಕ ಇಂಧನವು ಪರಿಸರಸ್ನೇಹಿಯಾಗಿದೆ.
- ಹಸಿರು ಜಲಜನಕವನ್ನು ನೀರಿನಿಂದ ತಯಾರಿಸುವುದರಿಂದ ಇದು ಆಮ್ಲಜನಕದ ಆವಿಯನ್ನು ಮಾತ್ರ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಉತ್ಪಾದಿಸುವಾಗ ಮಾತ್ರವಲ್ಲದೆ, ಬಳಸುವಾಗಲೂ ಮಾಲಿನ್ಯಕಾರಕ ಅನಿಲಗಳನ್ನು ಇದು ಹೊರಸೂಸುವುದಿಲ್ಲ.
- ಇತರ ಇಂಧನಗಳಿಗೆ ಹೋಲಿಸಿದರೆ ಹಸಿರು ಜಲಜನಕವು ಹೆಚ್ಚು ಸಮರ್ಥ ಹಾಗೂ ದಕ್ಷತೆಯುಳ್ಳದ್ದಾಗಿದೆ. ತುಂಬಾ ಹಗುರವಾಗಿರುವುದರಿಂದ ಇದರ ಸಂಗ್ರಹಣೆ ಕೂಡ ಸುಲಭದ್ದಾಗಿದೆ.
- ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗೆ ಮಾತ್ರವಲ್ಲದೆ, ಗೃಹ ಬಳಕೆಗೂ ಉಪಯೋಗಿಸಬಹುದಾಗಿದೆ.
- ಪ್ರಸ್ತುತ ಮನೆಗಳಲ್ಲಿಬಳಸುವ ನೈಸರ್ಗಿಕ ಅನಿಲ ಪೂರೈಸುವ ಪೈಪ್ಲೈನ್ಗಳ ಮೂಲಕವೇ ಇದನ್ನು ಪೂರೈಸಲು ಅವಕಾಶವಿದೆ.
- ವಾಹನಗಳಲ್ಲೂಇಂಧನವಾಗಿ ಬಳಸುವುದಕ್ಕೆ ಭಾರತದಲ್ಲಿಈಗಾಗಲೇ ಚಾಲನೆ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ಗೆ ಹೋಲಿಸಿದರೆ ಇದು ಅಗ್ಗದ್ದಾಗಿದ್ದು, ದೇಶೀಯವಾಗಿ ಹೆಚ್ಚಿನ ಪ್ರಮಾಣದಲ್ಲಿತಯಾರಿಕೆ ಹಾಗೂ ಬಳಕೆ ಸಾಧ್ಯವಾದರೆ ಇನ್ನಷ್ಟು ವೆಚ್ಚ ತಗ್ಗಲಿದೆ.