Published on: June 22, 2023

ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿ

ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿ

ಸುದ್ದಿಯಲ್ಲಿ ಏಕಿದೆ?ಧ್ರುವ ಪ್ರದೇಶ ಹೊರತುಪಡಿಸಿ ಅತಿ ಹೆಚ್ಚು ಹಿಮಾಚ್ಛಾದಿತ ಪ್ರದೇಶವಾಗಿರುವ ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿಯಲ್ಲಿ 2100ರ ಹೊತ್ತಿಗೆ ಶೇ. 80ರಷ್ಟು ನೀರ್ಗಲ್ಲುಗಳು ಕರಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.

ಮುಖ್ಯಾಂಶಗಳು

  • ನೇಪಾಳದ ಕಟ್ಮಂಡು ಮೂಲದ ಪರ್ವತ ಶ್ರೇಣಿಗಳ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರ ನಡೆಸಿದ ಅಧ್ಯಯನದ ಪ್ರಕಾರ, 2000ದಿಂ ದ 2009ರವರೆಗಿನ ಅವಧಿಯನ್ನು ಹೋಲಿಸಿದಲ್ಲಿ 2010ರಿಂ ದ 2019ರವರೆಗೆ ನೀರ್ಗಲ್ಲುಗಳು ಕರಗುವ ಪ್ರಮಾಣ ಶೇ 65ರಷ್ಟು ವೇಗವಾಗಿದೆ.
  • ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿಯು ಸುಮಾರು 12 ನದಿಗಳ ಜಲಮೂಲವಾಗಿದೆ. ಸುಮಾರು 24 ಕೋಟಿ ಜನರು ಇದನ್ನು ಅವಲಂಬಿಸಿದ್ದಾರೆ.

ವರದಿಯಲ್ಲಿರುವ  ಅಂಶಗಳು

ಪರಿಣಾಮಗಳು

  • ಪ್ರಕೃತಿಯಲ್ಲಿ ಮಾನವನ ಅನಗತ್ಯ ಹಸ್ತಕ್ಷೇಪದಿಂದಾಗಿ ಪರ್ವತದಲ್ಲಿನ ನೀರ್ಗಲ್ಲುಗಳು ವೇಗವಾಗಿ ಕರಗುತ್ತಿವೆ. ಇದರ ಪರಿಣಾಮ ಪ್ರವಾಹಗಳು ಉಂಟಾಗಲಿವೆ. ಅದು ನೇರವಾಗಿ ಜನರ  ಮೇಲೆ ಪರಿಣಾಮ ಬೀರಲಿದೆ.
  • ನೀರಾವರಿ ವ್ಯವಸ್ಥೆ ಹಾಗೂ ಕೃಷಿ ಮೇಲೆ ಪರಿಣಾಮ ಬೀರಲಿದೆ.
  • ಹಿಮಾಲಯ ಪರ್ವತಶ್ರೇಣಿಯಲ್ಲಿನ ನೀರ್ಗಲ್ಲುಗಳ ಕರಗುವಿಕೆಯಿಂದ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಭಾರತ,ಮ್ಯಾನ್ಮಾರ್ ಹಾಗೂ ಪಾಕಿಸ್ತಾನ ರಾಷ್ಟ್ರ ಗಳು ಹೆಚ್ಚು ಸಮಸ್ಯೆ ಎದುರಿಸಲಿವೆ. ಹೀಗಾಗಿ ಪರ್ವತಶ್ರೇಣಿ ಉಳಿಸಲು ಈ ರಾಷ್ಟ್ರಗಳು ಇನ್ನಷ್ಟು ಪ್ರಯತ್ನ ನಡೆಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಾರಣ

  • ಭೂಮಿಯ ಮೇಲ್ಮೈ ತಾಪಮಾನ 1.15 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಳವಾಗಿದೆ. ಈ ಶತಮಾನದ ಅಂತ್ಯದ ಹೊತ್ತಿಗೆ 3 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
  • ಉಪಾಯ :ಮಾಲಿನ್ಯ ನಿಯಂತ್ರಣವೊಂದೇ ಇದನ್ನು ತಡೆಯಲು ಇರುವ ಏಕೈ ಕಮಾರ್ಗ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಂದುಕುಶ್

  • ಹಿಂದುಕುಶ್ 4.2 ದಶಲಕ್ಷ ಚದರ ಕಿಲೋ ಮೀಟರ್ನಷ್ಟು ವಿಸ್ತೀರ್ಣ ಹೊಂದಿದೆ. ಧ್ರುವ ಪ್ರದೇಶ ಹೊರತುಪಡಿಸಿ ಹಿಂದೂ ಕುಶ್-ಹಿಮಾಲಯನ್ (HKH) ಪ್ರದೇಶವು ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಭಾರತ, ಮ್ಯಾನ್ಮಾರ್, ನೇಪಾಳ ಮತ್ತು ಪಾಕಿಸ್ತಾನದ ಎಂಟು ದೇಶಗಳಲ್ಲಿ ಪರ್ವತಗಳ ಪ್ರದೇಶವನ್ನು ಒಳಗೊಂಡಿದೆ.
  • ಉದ್ದ: 800 ಕಿಲೋಮೀಟರ್ (500 ಮೈಲುಗಳು)
  • ವಿಸ್ತೀರ್ಣ:ಸರಿಸುಮಾರು 152,800 ಚದರ ಕಿಲೋಮೀಟರ್ (59,000 ಚದರ ಮೀಟರ್)
  • ಅತ್ಯುನ್ನತ ಶಿಖರ: ತಿರಿಚ್ ಮಿರ್(ಪಾಕಿಸ್ತಾನ)