Published on: March 2, 2023

ಹಿಂದುಸ್ತಾನ್ ಟರ್ಬೋ ಟ್ರೈನರ್ – 40 (ಎಚ್‌ಟಿಟಿ-40)

ಹಿಂದುಸ್ತಾನ್ ಟರ್ಬೋ ಟ್ರೈನರ್ – 40 (ಎಚ್‌ಟಿಟಿ-40)


ಸುದ್ದಿಯಲ್ಲಿ ಏಕಿದೆ? ವಾಯುಪಡೆಗಾಗಿ ಎಚ್‌ಎಎಲ್‌ ನಿರ್ಮಿತ 70 ತರಬೇತಿ ವಿಮಾನಗಳನ್ನು (ಎಚ್‌ಟಿಟಿ–40)  ₹6,828 ಕೋಟಿ ವೆಚ್ಚದಲ್ಲಿ ಖರೀದಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿಯು (ಸಿಸಿಎಸ್‌) ಅನುಮೋದನೆ ನೀಡಿದೆ.


ಮುಖ್ಯಾಂಶಗಳು

  • ‘ಈ ವಿಮಾನಗಳನ್ನು ಮುಂದಿನ ಆರು ವರ್ಷಗಳ ಅವಧಿಯಲ್ಲಿ ಪೂರೈಕೆ ಮಾಡಲಾಗುತ್ತದೆ’.
  • ಎರಡು ಸೀಟುಗಳ ಈ ವಿಮಾನವನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿ ಪಡಿಸಿದೆ.
  • ಈ ವಿಮಾನದ ಅಭಿವೃದ್ಧಿಯನ್ನು ಆಂತರಿಕ ನಿಧಿ 315 ಕೋಟಿ ರೂ. ಬಳಸಿ ಎಚ್‌ಎಎಲ್ ಆಗಸ್ಟ್ 2013ರಲ್ಲಿ ಆರಂಭಿಸಿ, ಮೇ 2015ಕ್ಕೆ ಮುಗಿಸಿದೆ.

ಉದ್ದೇಶ

  • ‘ದೇಶದ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿಸುವ ಹಾಗೂ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಹತ್ವದ ಹೆಜ್ಜೆಯಾಗಿದೆ. ದೇಶದಲ್ಲಿರುವ ನೂರಾರು ಸಣ್ಣ, ಮಧ್ಯಮ ಉದ್ದಿಮೆಗಳಿಗೆ ವಿಪುಲ ಅವಕಾಶಗಳು ತೆರೆದುಕೊಳ್ಳಲಿವೆ’.
  • ಈ ವಿಮಾನಗಳು ಕಡಿಮೆ ವೇಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಹೀಗಾಗಿ, ಇವುಗಳನ್ನು ಬಳಸಿ ಪರಿಣಾಮಕಾರಿ ತರಬೇತಿ ನೀಡಲು ಸಾಧ್ಯ’.

ಎಚ್‌ಟಿಟಿ-40

  • 2016ರ ಜೂ.17ರಂದು ಅಧಿಕೃತ ಹಾರಾಟ
  • ತೂಕ – 2800 ಕೆಜಿ
  • ಎಂಜಿನ್‌- ಹಾನಿವೆಲ್‌ ಗ್ಯಾರೆಟ್‌ ಟರ್ಬೋಪ್ರಾಪ್‌ ಎಂಜಿನ್‌
  • ಗರಿಷ್ಠ ವೇಗ – 400 ಕಿ.ಮೀ ಪ್ರತಿ ಗಂಟೆಗೆ
  • ಹಾರುವ ಸಾಮರ್ಥ್ಯ- 8 ನಿಮಿಷಕ್ಕೆ 10 ಸಾವಿರ ಅಡಿ
  • ಹಾರಾಟ ವ್ಯಾಪ್ತಿ- 1 ಸಾವಿರ ಕಿ.ಮೀ
  • ಶಸ್ತ್ರಾಸ್ತ್ರಗಳು- ಭವಿಷ್ಯದಲ್ಲಿ ತುರ್ತು ಸಂದರ್ಭದಲ್ಲಿ ನಿಂತ ಜಾಗದಲ್ಲೇ ಪೈಲಟ್‌ ಎಸ್ಕೇಪ್‌ ಆಗಬಹುದಾದ ಸೀಟ್‌ಗಳು.
  • ಗ್ಲೈಡಿಂಗ್‌ ರೇಷಿಯೋ 10:1 (ಎಂಜಿನ್‌ ಕೈ ಕೊಟ್ಟ ಸಂದರ್ಭದಲ್ಲಿ ವಿಮಾನ ಮುಂದಕ್ಕೆ ಹಾರಾಟ ಹಾಗೂ ಗುರುತ್ವಾಕರ್ಷಣೆಗೊಳಗಾಗಿ ಅದು ನೆಲದ ಕಡೆ ಇಳಿಯುವ ಪ್ರಮಾಣ)