Published on: April 6, 2023

ಹಿಂದೂಫೋಬಿಯಾ

ಹಿಂದೂಫೋಬಿಯಾ

ಸುದ್ದಿಯಲ್ಲಿ ಏಕಿದೆ? ಅಮೆರಿಕದ ಜಾರ್ಜಿಯಾ ಅಸೆಂಬ್ಲಿಯಲ್ಲಿ ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಶಾಸನಾತ್ಮಕ ಕ್ರಮವನ್ನು ಕೈಗೊಂಡ ಮೊದಲ ಅಮೆರಿಕನ್ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಖ್ಯಾಂಶಗಳು

  • ಜಾರ್ಜಿಯಾದಲ್ಲಿನ ಅತಿದೊಡ್ಡ ಹಿಂದೂ ಮತ್ತು ಭಾರತೀಯ-ಅಮೆರಿಕನ್ ಸಮುದಾಯಗಳಲ್ಲಿ ಒಂದಾದ, ಅಟ್ಲಾಂಟಾದ ಉಪನಗರದಲ್ಲಿರುವ ಫೋರ್ಸಿತ್ ಕೌಂಟಿಯ ಪ್ರತಿನಿಧಿಗಳಾದ ಲಾರೆನ್ ಮೆಕ್‌ಡೊನಾಲ್ಡ್ ಮತ್ತು ಟಾಡ್ ಜೋನ್ಸ್ ಈ ನಿರ್ಣಯವನ್ನು ಜಾರ್ಜಿಯಾ ಅಸೆಂಬ್ಲಿಯಲ್ಲಿ ಮಂಡಿಸಿದ್ದಾರೆ.
  • ಹಿಂದೂ ವಿರೋಧಿ ಧರ್ಮಾಂಧತೆಯನ್ನು ಖಂಡಿಸಿರುವ ನಿರ್ಣಯವು, ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಪುರಾತನ ಧರ್ಮಗಳಲ್ಲಿ ಒಂದಾಗಿದೆ.

ನಿರ್ಣಯವನ್ನು ಅಂಗೀಕರಿಸಲು  ಕಾರಣಗಳು

  • ನಿರ್ಣಯದ ಪ್ರಕಾರ ಶೈಕ್ಷಣಿಕ ವಲಯದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು “ಹಿಂದೂ ಧರ್ಮದ ಪವಿತ್ರ ಗ್ರಂಥಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ನಿಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಹಿಂದೂಫೋಬಿಯಾವನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ.
  • ಸ್ವೀಕಾರ, ಪರಸ್ಪರ ಗೌರವ ಮತ್ತು ಶಾಂತಿಯ ಮೌಲ್ಯಗಳು, ವೈವಿಧ್ಯಮಯ ಸಂಪ್ರದಾಯಗಳು ಮತ್ತು ನಂಬಿಕೆ ಹಿಂದೂ ಧರ್ಮದ ಮೂಲ ಸಾರವಾಗಿದ್ದು, ಜಾಗತಿಕ ಶಾಂತಿಯನ್ನು ಬಯಸುವ ಅತ್ಯಂತ ಪವಿತ್ರ ಧರ್ಮ ಎಂದು ಜಾರ್ಜಿಯಾ ಅಸೆಂಬ್ಲಿಯ ವರದಿಯಲ್ಲಿ ಹೇಳಲಾಗಿದೆ.

ನಿರ್ಣಯದ ಪ್ರಕಾರ ಹಿಂದೂ ಸಮುದಾಯದ ಕೊಡುಗೆಗಳು            

  • ವೈದ್ಯಕೀಯ, ವಿಜ್ಞಾನ ಮತ್ತು ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಆತಿಥ್ಯ, ಹಣಕಾಸು, ಶಿಕ್ಷಣ, ಇಂಧನ, ಚಿಲ್ಲರೆ ವ್ಯಾಪಾರ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ, ಅಮೆರಿಕನ್-ಹಿಂದೂ ಸಮುದಾಯವು ಪ್ರಮುಖ ಕೊಡುಗೆ ನೀಡಿದೆ.
  • ಅಷ್ಟೇ ಅಲ್ಲದೇ ಹಿಂದೂ ಸಮುದಾಯವು ಯೋಗ, ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆ ಹೀಗೆ ಮುಂತಾದ ಕ್ಷೇತ್ರಗಳಲ್ಲೂ ಸಾಕಷ್ಟು ಕೊಡುಗೆ ನೀಡಿದ್ದು, ಅಮೆರಿಕದ ಸಾಂಸ್ಕೃತಿಕ ವಲಯವನ್ನು ಅತ್ಯಂತ ಶ್ರೀಮಂತಗೊಳಿಸಿದೆ.

ಹಿನ್ನೆಲೆ

  • 2021 ರಲ್ಲಿ 40 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು “ಜಾಗತಿಕ ಹಿಂದುತ್ವವನ್ನು ಕಿತ್ತುಹಾಕುವುದು” ಎಂಬ ಸಮ್ಮೇಳನವನ್ನು ಪ್ರಾಯೋಜಿಸಿದವು, ಇದನ್ನು ಅನೇಕ ಹಿಂದೂ ಸಂಘಟನೆಗಳು ಖಂಡಿಸಿದ್ದವು.
  • ಹಿಂದೂಗಳ ವಿರುದ್ಧ ದ್ವೇಷದ ಅಪರಾಧ ಪ್ರಕರಣಗಳು ಕಳೆದ ಕೆಲವು ದಶಕಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಹಿಂದೂ-ಅಮೆರಿಕನ್ನರ ವಿರುದ್ಧ ದ್ವೇಷದ ಅಪರಾಧಗಳ ದಾಖಲೀಕರಣದ ನಿದರ್ಶನಗಳಿವೆ.

ಹಿಂದೂಫೋಬಿಯಾ ಎಂದರೇನು?

  • ಹಿಂದೂ ಧರ್ಮದ ಮೇಲಿನ ದಾಳಿಗಳನ್ನು ಗುರಿಯಾಗಿಟ್ಟುಕೊಂಡು ನಡೆಯುವ ದಾಳಿ ಮತ್ತು ಹಿಂದೂ ವಿರೋಧಿ ಧರ್ಮಾಂಧತೆ ಮತ್ತು ಅಸಹಿಷ್ಣುತೆ. ಪೂರ್ವಾಗ್ರಹ, ಭಯ ಅಥವಾ ದ್ವೇಷವಾಗಿ ಪ್ರಕಟಗೊಳ್ಳಬಹುದಾದ ಹಿಂದೂ ಧರ್ಮ ಮತ್ತು ಹಿಂದೂಗಳ ಕಡೆಗೆ ವಿರೋಧಾತ್ಮಕ, ವಿನಾಶಕಾರಿ ಮತ್ತು ಅವಹೇಳನಕಾರಿ ವರ್ತನೆಗಳು ಮತ್ತು ನಡವಳಿಕೆಗಳಾಗಿವೆ.

ಜಾರ್ಜಿಯಾ ಕೌಂಟಿ

  • ಜಾರ್ಜಿಯಾ ಕೌಂಟಿಯು ಪೂರ್ವ ಯುರೋಪ್ ಮತ್ತು ಪಶ್ಚಿಮ ಏಷ್ಯಾದ ಛೇದಕದಲ್ಲಿರುವ ಒಂದು ಖಂಡಾಂತರ ದೇಶವಾಗಿದೆ. ಇದು ಕಾಕಸಸ್ ಪ್ರದೇಶದ ಭಾಗವಾಗಿದೆ. ಪಶ್ಚಿಮಕ್ಕೆ ಕಪ್ಪು ಸಮುದ್ರ, ಉತ್ತರ ಮತ್ತು ಈಶಾನ್ಯಕ್ಕೆ ರಷ್ಯಾ, ನೈಋತ್ಯಕ್ಕೆ ಟರ್ಕಿ, ದಕ್ಷಿಣಕ್ಕೆ ಅರ್ಮೇನಿಯಾ ಮತ್ತು ಆಗ್ನೇಯಕ್ಕೆ ಅಜೆರ್ಬೈಜಾನ್ ಪ್ರದೇಗಳಿವೆ. ಕೌಂಟಿಯು 69,700 ಚದರ ಕಿಲೋಮೀಟರ್ (26,900 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿದೆ. ಟಿಬಿಲಿಸಿ ಅದರ ರಾಜಧಾನಿಯಾಗಿದೆ.