Published on: July 27, 2023
ಹಿಮಾಲಯದ ಶಿಲಾಪದರುಗಳಲ್ಲಿ ಸಮುದ್ರದ ನೀರು ಪತ್ತೆ
ಹಿಮಾಲಯದ ಶಿಲಾಪದರುಗಳಲ್ಲಿ ಸಮುದ್ರದ ನೀರು ಪತ್ತೆ
ಸುದ್ದಿಯಲ್ಲಿ ಏಕಿದೆ? ಹಿಮಾಲಯದ ಶಿಲಾಪದರುಗಳಲ್ಲಿ 60 ಕೋಟಿ ವರ್ಷಗಳಷ್ಟು ಹಿಂದಿನ ಸಮುದ್ರದ ನೀರನ್ನು ಬೆಂಗಳೂರು ಮೂಲದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
ಮುಖ್ಯಾಂಶಗಳು
- ಈ ಸಂಶೋಧನೆಯು ಭೂಮಿಯ ಮೇಲೆ ಜೀವರಾಶಿಗಳ ಉಗಮದಂತಹ ಸಂಕೀರ್ಣ ವಿಷಯದ ಮೇಲೆ ಹೊಸ ಸುಳಿವುಗಳನ್ನು ನೀಡಲಿದೆ.
- ಭಾರತೀಯ ವಿಜ್ಞಾನ ಸಂಸ್ಥೆಯ ಭೂವಿಜ್ಞಾನಗಳ ಕೇಂದ್ರದ ಪ್ರಾಧ್ಯಾಪಕ ಸಜೀವ್ ಕೃಷ್ಣನ್ ನೇತೃತ್ವದ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ‘ಪ್ರಿಕ್ಯಾಂಬ್ರಿಯನ್ ರಿಸರ್ಚ್’ ಎಂಬ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದೆ.
ಸಂಶೋಧನೆಯಿಂದ ತಿಳಿದು ಬಂದಿರುವ ಅಂಶಗಳು
- ಹಿಮಾಲಯದ ಖನಿಜಗಳಲ್ಲಿ ನೀರಿನ ಹನಿಗಳಿರುವುದನ್ನು ಕೂಡ ಪತ್ತೆ ಹಚ್ಚಿದ್ದಾರೆ. ಭೂಮಿ ಮೇಲೆ ಜೀವರಾಶಿ ವಿಕಾಸಗೊಂಡಿದ್ದ ಆರಂಭಿಕ ಅವಧಿಯಲ್ಲಿ ಅಗತ್ಯದಷ್ಟು ಪ್ರಮಾಣದ ಆಮ್ಲಜನಕ ಹೇಗೆ ಉತ್ಪತ್ತಿಯಾಗಿತ್ತು ಎಂಬ ಪ್ರಶ್ನೆಗೆ ಈ ಸಂಶೋಧನೆಯಿಂದ ತಿಳಿದು ಬಂದಿದೆ.
- ನೀರಿನ ಹನಿಗಳಿದ್ದ ಖನಿಜಗಳನ್ನು ಹೊಂದಿದ್ದ ಶಿಲೆಗಳಯುಗವನ್ನು ಪತ್ತೆ ಮಾಡುವ ಮೂಲಕ ನೀರು ರೂಪುಗೊಂಡ ಕಾಲಾವಧಿಯನ್ನು ನಿರ್ಧರಿಸಿಲಾಗಿದೆ.
- ಹಿಮಾಲಯದ ಶಿಲಾಪದರುಗಳಲ್ಲಿ ಪತ್ತೆಯಾಗಿರುವ ನೀರಿನ ಹನಿಗಳನ್ನು ಪ್ರಸ್ತುತ ಕಡಲ ನೀರಿನೊಂದಿಗೆ ಹೋಲಿಕೆಯಾಗುವುದನ್ನು ಕೂಡ ಅಧ್ಯಯನ ದೃಢಪಡಿಸಿದೆ.
- ಕೆಲ ನಿರ್ದಿಷ್ಟ ಬಗೆಯ ಸೂಕ್ಷ್ಮಾಣುಜೀವಿಗಳ ಬೆಳವಣಿಗೆಗೆ ಆಗಿನ ವಾತಾವರಣ ಪೂರಕವಾಗಿತ್ತು. ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಅಗತ್ಯವಿಲ್ಲದಿದ್ದರೂ ಈ ಸೂಕ್ಷ್ಮಾಣುಜೀವಿಗಳು ವಾತಾವರಣಕ್ಕೆ ಅಪಾರ ಪ್ರಮಾಣದ ಆಮ್ಲಜನಕ ಬಿಡುಗಡೆಮಾಡುತ್ತಿದ್ದವು.
- ಖನಿಜಗಳು ರಾಸಾಯನಿಕವಾಗಿ ಮೂಲರೂಪದಲ್ಲಿದಲ್ಲಿವೆ
ಅಧ್ಯಯನದ ಉದ್ದೇಶ :ಭೂಗೋಳವಿಜ್ಞಾನದ ಈ ರಹಸ್ಯಗಳನ್ನು ಬಿಚ್ಚಿಡುವ ಸಲುವಾಗಿ ಹಿಮಾಲಯದ ಪಶ್ಚಿಮ ಭಾಗದಲ್ಲಿ ವಿಜ್ಞಾನಿಗಳ ತಂಡ ಮೂರು ತಿಂಗಳ ಕಾಲ ಕ್ಷೇತ್ರ ಅಧ್ಯಯನ ಕೈಗೊಂಡಿತ್ತು.