Published on: January 26, 2023

ಹುಲಿ ಸಂತತಿ ನಿಯಂತ್ರಣ

ಹುಲಿ ಸಂತತಿ ನಿಯಂತ್ರಣ


ಸುದ್ದಿಯಲ್ಲಿ ಏಕಿದೆ? ಹುಲಿಗಳೂ ಸೇರಿದಂತೆ ಹಲವು ವನ್ಯಜೀವಿಗಳ ಸಂತತಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇರಳ ಸರ್ಕಾರದ ನಡೆಗೆ ಪರಿಸರವಾದಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. 


ಉದ್ದೇಶ: ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ, ಹೆಚ್ಚುತ್ತಿರುವ ಮಾನವ–ಪ್ರಾಣಿ ಸಂಘರ್ಷದ ಘಟನೆಗಳನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇ ಶವಾಗಿದೆ.

ಮುಖ್ಯಾಂಶಗಳು

  • ವಯನಾಡ್ನಲ್ಲಿ ಇತ್ತೀ ಚಿನ ದಿನಗಳಲ್ಲಿ ಒಂದಾದ ಮೇಲೊಂದು ಹುಲಿ ದಾಳಿ ಘಟನೆಗಳು ವರದಿಯಾಗಿವೆ.
  • ಹುಲಿ ಸಂರಕ್ಷಣೆ ಬಗ್ಗೆ ನಡೆಸಿದ್ದ ವ್ಯಾಪಕ ಅಭಿಯಾನದಿಂದಾಗಿ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2006ರಲ್ಲಿ 46 ಹುಲಿಗಳು ರಾಜ್ಯದಲ್ಲಿದ್ದವು. 2018ರಲ್ಲಿ ಇವುಗಳ ಸಂಖ್ಯೆ 190ಕ್ಕೆ ಏರಿಕೆಯಾಗಿದೆ.
  • 344 ಚದರ ಕಿಲೋಮೀಟರ್ ವ್ಯಾಪ್ತಿಯ ವಯನಾಡ್ ಅಭಯಾರಣ್ಯದಲ್ಲಿ 120 ಹುಲಿಗಳಿವೆ. ರಾಜ್ಯದ ಅರಣ್ಯಾಧಿಕಾರಿಗಳ ಪ್ರಕಾರ, ವಯನಾಡ್ನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಹೆಚ್ಚಳ ಆಗಿಲ್ಲದಿದ್ದರೂ, ಸ್ಥಳಾಂತರ ಅಥವಾ ಕೊಲ್ಲುವ ಮೂಲಕ ಅವುಗಳ ಸಂಖ್ಯೆ ನಿಯಂತ್ರಿಸಲು ಸರ್ಕಾರ ಮುಂದಾಗಿದೆ.
  • ಹುಲಿಗಳ ಸಂಖ್ಯೆ ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಅರಣ್ಯಾಧಿಕಾರಿಗಳ ಸಭೆ ನಡೆಸಲಾಗಿದೆ.

ಪರಿಸರವಾದಿಗಳಾ ಆರೋಪ

  • ಆದರೆ, ವಯನಾಡ್ ಅಥವಾ ಇತರೆ ಅರಣ್ಯದಲ್ಲಿ ಹುಲಿಗಳು ಅಥವಾ ಇತರೆ ವನ್ಯಜೀವಿಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿರುವ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ನಡೆದಿಲ್ಲ ಎಂದು ಪರಿಸರವಾದಿಗಳು ಹೇಳಿದ್ದಾರೆ.
  • ನೈಜ ಕಾರಣಗಳನ್ನು ಮುಚ್ಚಿಹಾಕಲು, ಮಾನವ–ಪ್ರಾಣಿ ಸಂಘರ್ಷವನ್ನು ಮುಂದಿಟ್ಟುಕೊಂಡು ಹುಲಿ ಸಂತತಿ ನಿಯಂತ್ರಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಪರಿಸರವಾದಿಗಳಾ ಆರೋಪಿಸಿದ್ದಾರೆ.

‘ವಯನಾಡ್ ಅಭಯಾರಣ್ಯ’

  • ‘ವಯನಾಡ್ ಅಭಯಾರಣ್ಯವು ಹುಲಿ ಸಂರಕ್ಷಿತ ಅರಣ್ಯಗಳನ್ನು ಸಂಪರ್ಕಿಸುತ್ತದೆ.
  • ಕೇರಳದ ಎರಡನೆ ಪ್ರಮುಖ ವನ್ಯಜೀವಿ ಧಾಮವಾಗಿದೆ.
  • ಈ ಧಾಮದಲ್ಲಿ, ಜಿಂಕೆ, ಆನೆ, ಇಂಡಿಯನ್ ಬೈಸನ್, ಹುಲಿಯಂತಹ ಪ್ರಾಣಿಗಳು ಮತ್ತು ನವಿಲು, ಪೀ ಫಾವ್ಲ್ಸ್ ನಂತಹ ಪಕ್ಷಿಗಳನ್ನು ಕಾಣಬಹುದಾಗಿದೆ.
  • ಕೇರಳ ಅರಣ್ಯ ಇಲಾಖೆಯಿಂದ ನಿಯಂತ್ರಿಸಲ್ಪಡುವ ಈ ಧಾಮವು ಒಟ್ಟಾರೆಯಾಗಿ 344 ಚಕಿಮೀ ಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ
  • ನೀಲ್ಗಿರಿ ಜೈವಿಕ ಮಂಡಳದ ಭಾಗವಾಗಿರುವ ಈ ಧಾಮವು ಸುತ್ತಲು ಕರ್ನಾಟಕದ ನಾಗರಹೊಳೆ, ಬಂಡೀಪುರ ಅಭಯಾರಣ್ಯ ಹಾಗೂ ತಮಿಳುನಾಡಿನ ಮುದುಮಲೈ ಅಭಯಾರಣ್ಯ ಗಳಿಂದ ಸುತ್ತುವರೆದಿದೆ.