Published on: December 23, 2022
ಹೊಸ ಅರಿಸಿನ ತಳಿ ಅಭಿವೃದ್ಧಿ
ಹೊಸ ಅರಿಸಿನ ತಳಿ ಅಭಿವೃದ್ಧಿ
ಸುದ್ದಿಯಲ್ಲಿ ಏಕಿದೆ? ರೋಗ ನಿರೋಧಕ ಔಷಧಯುಕ್ತ ಕರ್ಕ್ಯುಮಿನ್ ಅಂಶ ಶೇ 7ರಷ್ಟಿರುವ ಮೇಘಾಲಯದ ಲಕಾಡಾಂಗ್ ಅರಿಸಿನ ತಳಿಯನ್ನು ಕೇಂದ್ರ ತಂಬಾಕು ಸಂಶೋಧನಾಲಯದಲ್ಲಿ ‘ಪ್ರತಿಭಾ ಮತ್ತು ಪ್ರಗತಿ’ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಮುಖ್ಯಾಂಶಗಳು
- ರೈತರಿಗೆ ಬಿತ್ತನೆ ಬೀಜ ವಿತರಿಸುವ ಸಿದ್ಧತೆಯೂ ನಡೆದಿದೆ.
- ಅತಿ ಹೆಚ್ಚು ಅರಿಸಿನ ಬೆಳೆಯುವ ರಾಜ್ಯಗಳು : ಮೇಘಾಲಯದಲ್ಲಿ ಅತಿ ಹೆಚ್ಚು ಅರಿಸಿನ ಬೆಳೆಯುತ್ತಿದ್ದು, ನಂತರದಲ್ಲಿ ತಮಿಳುನಾಡು, ಕರ್ನಾಟಕವಿದೆ.
- ಸದ್ಯ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲವೆಡೆ ಬೆಳೆಯಲಾಗುತ್ತಿರುವ ಪಾರಂಪರಿಕ ಸೇಲಂ ತಳಿ ಅರಿಸಿನದಲ್ಲಿ ಕರ್ಕ್ಯುಮಿನ್ ಅಂಶ ಕಡಿಮೆ ಇದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇಲ್ಲ ಎನ್ನಲಾಗಿದೆ.
- ಇದರಿಂದ ಹುಣಸೂರು(ಮೈಸೂರು ಜಿಲ್ಲೆ): ವರ್ಜೀನಿಯ ತಂಬಾಕು ಬೆಳೆಗೆ ಹೆಸರುವಾಸಿಯಾದ ಹುಣಸೂರು ಉಪ ವಿಭಾಗದಲ್ಲಿ ಅರಿಸಿನ ಬೆಳೆಯು ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗುವ ಸೂಚನೆಗಳು ಕಂಡು ಬಂದಿವೆ.
ಹೊಸ ತಳಿಯ ಪರಿಚಯ
- ‘ಹೊಸ ತಳಿಗಳಲ್ಲಿ ಕರ್ಕ್ಯುಮಿನ್ ಅಂಶ ಹೆಚ್ಚಿರುವುದರಿಂದ ಕ್ಯಾನ್ಸರ್ ರೋಗ ನಿವಾರಕ ಔಷಧ ಉತ್ಪಾದಿಸುವ ಕಂಪನಿಗಳಿಂದ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ’.
- ಹೊಸ ತಳಿಗಳ ಅವಧಿ 6–7 ತಿಂಗಳಷ್ಟೇ. ಹನಿ ನೀರಾವರಿಯಲ್ಲೂ ಬೆಳೆಯಬಹುದು. ಇಳುವರಿ 80ರಿಂದ 90 ಕ್ವಿಂಟಲ್ ಬರಲಿದೆ. ಉತ್ಪಾದನಾ ವೆಚ್ಚ ಎಕರೆಗೆ ರೂ. 40ಸಾವಿರದಿಂದ ರೂ. 50 ಸಾವಿರ ಆಗಲಿದೆ’.
- (ಈಗ ಬೆಳೆಯುತ್ತಿರುವ 10ರಿಂದ 11 ತಿಂಗಳ ಅವಧಿಯ, ಹೆಚ್ಚು ನೀರು ಬೇಡುವ ಸೇಲಂ ಅರಿಸಿನದ ಇಳುವರಿ ಪ್ರತಿ ಎಕರೆಗೆ 30ರಿಂದ 40 ಕ್ವಿಂಟಲ್ ದೊರಕುತ್ತದೆ.)