Published on: December 25, 2021
ಹ್ಯಾಂಡ್ ಫಿಶ್
ಹ್ಯಾಂಡ್ ಫಿಶ್
ಸುದ್ಧಿಯಲ್ಲಿ ಏಕಿದೆ ? ಬಲು ಅಪರೂಪದ ‘ನಡೆದಾಡುವ’ ಮೀನು ಸುಮಾರು 22 ವರ್ಷಗಳ ಬಳಿಕ ತಾಸ್ಮೇನಿಯಾ ಕರಾವಳಿಯಲ್ಲಿ ಪತ್ತೆಯಾಗಿದೆ. ಅಪರೂಪದ ಗುಲಾಬಿ ಬಣ್ಣದ ಹ್ಯಾಂಡ್ ಫಿಶ್ 1999ರಲ್ಲಿ ಕಡೆಯ ಬಾರಿ ಕಂಡುಬಂದಿತ್ತು ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ವಿಜ್ಞಾನ ಸಂಸ್ಥೆ ಕಾಮನ್ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ (ಸಿಎಸ್ಐಆರ್ಒ) ತಿಳಿಸಿದೆ.
ಹ್ಯಾಂಡ್ ಫಿಶ್ ಎಂದು ಏಕೆ ಹೆಸರಿಸಲಾಗಿದೆ?
- ಈ ಮೀನು ಸಣ್ಣ ಕೈಯಂತಹ ರಚನೆ ಹೊಂದಿದ್ದು, ಸೀ ಬೆಡ್ನಲ್ಲಿ ನಡೆಯಲು ಅದನ್ನು ಬಳಸುತ್ತದೆ. ಹೀಗಾಗಿ ಅದಕ್ಕೆ ಹ್ಯಾಂಡ್ ಫಿಶ್ ಎಂಬ ಹೆಸರಿದೆ.
ಹ್ಯಾಂಡ್ಫಿಶ್ ಬಗ್ಗೆ
- ಇದು ಆಂಗ್ಲೆರ್ಫಿಶ್ ಕುಟುಂಬದ ಜಲವಾಸಿ ಜೀವಿಯಾಗಿದ್ದು, ಬಹಳ ಅಪರೂಪಕ್ಕೆ ಕಾಣಿಸುತ್ತದೆ. ನಡೆಯುವ ಮೀನು ತಳಿ ಅಪಾಯದಲ್ಲಿ ಇದೆ ಎಂದು ವಿಜ್ಞಾನಿಗಳು ಭಾವಿಸಿದ್ದು, ಇದನ್ನು ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಗುರುತಿಸಿದ್ದಾರೆ.
- ಪಿಂಕ್ ಹ್ಯಾಂಡ್ಫಿಶ್ ಬಹಳ ಆಳದ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದು ಊಹಿಸಲಾಗಿತ್ತು. ಆದರೆ ಇದು 150 ಮೀಟರ್ ಆಳದಲ್ಲಿಯೇ ಕಂಡುಬಂದಿರುವುದು ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ.
- ತಸ್ಮನ್ ಫ್ರಾಕ್ಚರ್ ಮರೈನ್ ಪಾರ್ಕ್, ಭೂಮಿ ಆಳದ ಒಳಗಿನ ಬಿರುಕುಗಳಿಗೆ ಹೆಸರಾಗಿದೆ. ಹೀಗಾಗಿ ಸುಮಾರು 4,000 ಮೀಟರ್ ಆಳದವರೆಗಿನ ಸಮುದ್ರದ ಜೀವಿಗಳನ್ನು ಪತ್ತೆಹಚ್ಚಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿದೆ