Published on: November 8, 2021

2022ರಿಂದ ಹೊಸ ಪ್ಯಾಕೇಜಿಂಗ್ ನಿಯಮ

2022ರಿಂದ ಹೊಸ ಪ್ಯಾಕೇಜಿಂಗ್ ನಿಯಮ

ಸುದ್ಧಿಯಲ್ಲಿ ಏಕಿದೆ?  ಮುಂದಿನ ವರ್ಷ (2022) ಏಪ್ರಿಲ್‌ನಿಂದ ಪ್ಯಾಕೇಜಿಂಗ್‌ ಕುರಿತ ಹೊಸ ನಿಯಮಾವಳಿಗಳು ಜಾರಿಯಾಗಲಿದ್ದು, ದರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಬೇಕಾಗುತ್ತದೆ.

ಹೊಸ ನಿಯಮದಲ್ಲಿ ಏನಿದೆ ?

  • ಉತ್ಪಾದಕರು ವಸ್ತುವಿನ ಎಂಆರ್‌ಪಿ ದರವನ್ನು ನಮೂದಿಸುವಾಗ ಹೆಚ್ಚುವರಿ ವಿವರಗಳನ್ನು ನೀಡಬೇಕಾಗುತ್ತದೆ. ಅಂದರೆ ವಸ್ತುವಿನ ಯುನಿಟ್‌ ದರದ ವಿವರ ಕೊಡಬೇಕಾಗುತ್ತದೆ.
  • ಪ್ರತಿ ಕೆ.ಜಿ, ಅಥವಾ ಲೀಟರ್‌ನಲ್ಲಿ 1 ಕೆ.ಜಿ ಅಥವಾ ಲೀಟರ್‌, ಪ್ರತಿ ಗ್ರಾಮ್‌ ಅಥವಾ ಪ್ರತಿ ಮಿಲಿ ಲೀಟರ್‌ (ಎಂಎಲ್‌) ದರ ಎಷ್ಟೆಂಬುದನ್ನೂ ನೀಡಬೇಕಾಗುತ್ತದೆ. ಮೀಟರ್‌ ಮತ್ತು ಸಎಂಟಿ ಮೀಟರ್‌ ಅಳತೆಯ ಪದಾರ್ಥಗಳಲ್ಲೂ ಇದೇ ರೀತಿ ವಿಸ್ತೃತ ವಿವರ ನೀಡಬೇಕಾಗುತ್ತದೆ.
  • ಈ ವ್ಯವಸ್ಥೆಯಲ್ಲಿ 19 ವಿಧದ ಉತ್ಪನ್ನಗಳಿಗೆ ನಿರ್ದಿಷ್ಟ ಪ್ರಮಾಣದ ಪ್ಯಾಕೇಜ್‌ನಿಂದ ವಿನಾಯಿತಿ ಕೂಡ ಇದೆ. ಉದಾಹರಣೆಗೆ ಹಾಲು, ಚಹಾ, ಬಿಸ್ಕತ್‌, ಖಾದ್ಯ ತೈಲ, ತಂಪು ಪಾನೀಯ, ಕುಡಿಯುವ ನೀರು, ಬ್ರೆಡ್‌, ಧಾನ್ಯಗಳು, ಬೇಳೆ ಕಾಳುಗಳು, ಡಿಟರ್ಜೆಂಟ್‌, ಸಿಮೆಂಟ್‌ ಬ್ಯಾಗ್‌ ಇತ್ಯಾದಿಗಳನ್ನು ಉತ್ಪಾದಕರು ಮಾರುಕಟ್ಟೆಯಲ್ಲಿ ನಾನಾ ಪ್ರಮಾಣಗಳಲ್ಲಿ ವಿತರಿಸಲು ಪೂರ್ಣ ಸ್ವಾತಂತ್ರ್ಯವೂ ಸಿಗಲಿದೆ.
  • ಆಮದು ಮಾಡಿದ ವಸ್ತುಗಳ ಪ್ಯಾಕೇಜ್‌ನಲ್ಲಿ ಉತ್ಪಾದನೆಯ ವರ್ಷ ಮತ್ತು ತಿಂಗಳನ್ನು ನಮೂದಿಸುವುದು ಕಡ್ಡಾಯವಾಗಲಿದೆ. ಹಾಲಿ ಆಮದು ಮಾಡಿದ ದಿನಾಂಕ ಅಥವಾ ಪ್ಯಾಕಿಂಗ್‌ ಮಾಡಿದ ದಿನಾಂಕವನ್ನು ನಮೂದಿಸಲು ಅವಕಾಶ ಇದೆ.

ಪ್ರಯೋಜನಗಳು

  • ನಿಯಮಗಳಲ್ಲಿನ ಪ್ರಮುಖ ತಿದ್ದುಪಡಿಗಳೆಂದರೆ, ಉತ್ಪನ್ನದ ಪ್ರಮಾಣ ಮತ್ತು ಯೂನಿಟ್‌ ದರ ನಮೂದಿಸುವುದಾಗಿದೆ. ಇದರಿಂದ ಗ್ರಾಹಕರಿಗೆ ಉತ್ಪನ್ನದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಂತಾಗುತ್ತದೆ. ಅಲ್ಲದೆ, ಉತ್ಪಾದಕರಿಗೂ ವಾಣಿಜ್ಯ ವಹಿವಾಟಿಕೆ ಅನುಕೂಲಕಾರಿ ಆಗಿಲಿದೆ.
  • ಉತ್ಪನ್ನವು ಎಲ್ಲ ಪ್ರಮಾಣಗಳಲ್ಲಿಯೂ ಲಭ್ಯವಾಗುವಂತಾದಾಗ, ಗ್ರಾಹಕರು ತಮಗೆ ಎಷ್ಟು ಅಗತ್ಯವಿದೆಯೋ ಅಷ್ಟನ್ನು ಮಾತ್ರವೇ ಖರೀದಿಸಲು ಸಹಾಯಕವಾಗಲಿದೆ. ಅಲ್ಲದೆ ಉತ್ಪಾದಕರೂ ಕೂಡ ಗ್ರಾಹಕರಿಗೆ ಹೆಚ್ಚು ಆಯ್ಕೆಗಳನ್ನು ನೀಡಲು ಸಹಾಯಕ.