Published on: April 18, 2023
2022-23 ರಲ್ಲಿ ನೇರ ತೆರಿಗೆ ಸಂಗ್ರಹ
2022-23 ರಲ್ಲಿ ನೇರ ತೆರಿಗೆ ಸಂಗ್ರಹ
ಸುದ್ದಿಯಲ್ಲಿ ಏಕಿದೆ? ದೇಶದಲ್ಲಿಯೇ ಅತಿ ಹೆಚ್ಚು ನೇರತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನ, ದೆಹಲಿ ಎರಡನೇ ಸ್ಥಾನದಲ್ಲಿವೆ. ಹೆಚ್ಚು ನೇರ ತೆರಿಗೆ ಸಂಗ್ರಹಿಸಿದ ಮಹಾನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ನಂತರದ ಸ್ಥಾನಗಳಲ್ಲಿ ತಮಿಳುನಾಡು ಮತ್ತು ಗುಜರಾತ್ ರಾಜ್ಯಗಳಿವೆ.
ಮುಖ್ಯಾಂಶಗಳು
- ನೇರ ತೆರಿಗೆ ದೇಶದಲ್ಲಿ ಕಳೆದ ವರ್ಷ ಗಣನೀಯವಾಗಿ ಏರಿಕೆಯಾಗಿದೆ. ಇದು ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಒಳಗೊಂಡಿದೆ.
- 2022-23ರಲ್ಲಿ ದೇಶದಲ್ಲಿ ಒಟ್ಟು 19.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. 2013-14ಕ್ಕೆ ಹೋಲಿಸಿದರೆ ಶೇ. 173 ಏರಿಕೆ ಕಂಡುಬಂದಿದೆ.
- ಮುಂಬೈನಲ್ಲಿ 4.95 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ. ದೆಹಲಿಯಲ್ಲಿ 2.04 ಲಕ್ಷ ಕೋಟಿ ರೂ., ಬೆಂಗಳೂರಿನಲ್ಲಿ 2.04 ಲಕ್ಷ ಕೋಟಿ ರೂ., ಚೆನ್ನೈನಲ್ಲಿ 1.05 ಲಕ್ಷ ಕೋಟಿ ರೂ. ಹಾಗೂ ಹೈದರಾಬಾದ್ ನಲ್ಲಿ 88,438 ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ.
- ಮಹಾರಾಷ್ಟ್ರದಲ್ಲಿ 5.2 ಲಕ್ಷ ಕೋಟಿ ರೂ., ದೆಹಲಿಯಲ್ಲಿ 1.8 ಲಕ್ಷ ಕೋಟಿ ರೂ., ತಮಿಳುನಾಡಿನಲ್ಲಿ 0.9 ಲಕ್ಷ ಕೋಟಿ ರೂ., ಮತ್ತು ಗುಜರಾತ್‌ನಲ್ಲಿ 0.7 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ.
- ಬಿಡುಗಡೆ ಮಾಡಿದವರು : ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(CBDT)
ನೇರ ತೆರಿಗೆ ಎಂದರೇನು?
- ನೇರ ತೆರಿಗೆ ಎಂದರೆ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ, ತೆರಿಗೆ ವಿಧಿಸಿದ ಸಂಸ್ಥೆಗೆ ನೇರವಾಗಿ ಪಾವತಿಸುವ ತೆರಿಗೆಯಾಗಿದೆ. ಒಬ್ಬ ವೈಯಕ್ತಿಕ ತೆರಿಗೆದಾರನು ಆದಾಯ ತೆರಿಗೆ, ನೈಜ ಆಸ್ತಿ ತೆರಿಗೆ, ವೈಯಕ್ತಿಕ ಆಸ್ತಿ ತೆರಿಗೆ ಅಥವಾ ಸ್ವತ್ತುಗಳ ಮೇಲಿನ ತೆರಿಗೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಸರ್ಕಾರಕ್ಕೆ ನೇರ ತೆರಿಗೆಯನ್ನು ಪಾವತಿಸುತ್ತಾನೆ.
- ಮಾರಾಟ ತೆರಿಗೆಯಂತಹ ಪರೋಕ್ಷ ತೆರಿಗೆಗಳೂ ಇವೆ. ಅಲ್ಲಿ ಮಾರಾಟಗಾರನಿಗೆ ತೆರಿಗೆ ವಿಧಿಸಲಾಗುತ್ತದೆ. ಖರೀದಿದಾರನು ಈ ತೆರಿಗೆಯನ್ನು ಪಾವತಿಸುತ್ತಾನೆ. ಕಾರ್ಪೊರೇಟ್ ತೆರಿಗೆಗಳು ನೇರ ತೆರಿಗೆಗೆ ಉತ್ತಮ ಉದಾಹರಣೆಯಾಗಿದೆ.