Published on: August 27, 2022

3ಡಿ ಪ್ರಿಂಟಿಂಗ್ ತಂತ್ರಜ್ಞಾನ

3ಡಿ ಪ್ರಿಂಟಿಂಗ್ ತಂತ್ರಜ್ಞಾನ

ಸುದ್ದಿಯಲ್ಲಿ ಏಕಿದೆ?

3ಡಿ ತಂತ್ರಜ್ಞಾನ ಬಳಸಿ ನಿರ್ಮಿಸಿದ ಭಾರತದ ಮೊದಲ ಅಂಚೆ ಕಚೇರಿ ಬೆಂಗಳೂರಿನ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‌ನಲ್ಲಿ ನಿರ್ಮಾಣವಾಗಲಿದ್ದು, 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ದೇಶದ ಮೊಟ್ಟ ಮೊದಲ ಅಂಚೆ ಕಚೇರಿ ಎನ್ನುವ ಹೆಗ್ಗಳಿಕೆ ಇದರದ್ದಾಗಲಿದೆ.

ಮುಖ್ಯಾಂಶಗಳು

  • ಹಲಸೂರು ಬಜಾರ್ ಉಪ ಅಂಚೆ ಕಚೇರಿ ನಿರ್ಮಿಸಲು ಲಾರ್ಸನ್ ಮತ್ತು ಟೂಬ್ರೊ ಕನ್‌ಸ್ಟ್ರಕ್ಷನ್ ಅನ್ನು ಸಂಪರ್ಕಿಸಿದ್ದೇವೆ. ಭಾರತದಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿ ನಿರ್ಮಾಣವನ್ನು ಕೈಗೊಳ್ಳುತ್ತಿರುವ ಏಕೈಕ ಕಂಪನಿ ಇದಾಗಿದೆ.
  • ಸುಮಾರು 1,000 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬಳಸಿದರೆ 25 ಲಕ್ಷ ರೂಪಾಯಿಗಿಂತ ಕಡಿಮೆ ವೆಚ್ಚವಾಗುತ್ತದೆ. ಇದು ಸಾಮಾನ್ಯ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚದ ಕೇವಲ ಶೇ 25 ರಷ್ಟಾಗುತ್ತದೆ. ಈ ತಂತ್ರಜ್ಞಾನವು ಇಲಾಖೆಗೆ ತನ್ಮೂಲಕ ಅಗತ್ಯವಿರುವ ಪ್ರದೇಶಗಳಲ್ಲಿ ಅಂಚೆ ಕಚೇರಿ ಕಟ್ಟಡ ನಿರ್ಮಿಸಲು ಉತ್ತಮ ಪರ್ಯಾಯವನ್ನು ನೀಡಬಹುದು’.
  • ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಟ್ಟಡ ಸಾಮಗ್ರಿಗಳು ಮತ್ತು ತಂತ್ರಜ್ಞಾನ ಪ್ರಮೋಷನ್ ಕೌನ್ಸಿಲ್ ಹಾಗೂ IIT ಮದ್ರಾಸ್‌ನಿಂದ ಗ್ರೌಂಡ್ ಸೇರಿದಂತೆ ಮೂರು ಮಹಡಿಗಳ ಕಟ್ಟಡ ನಿರ್ಮಾಣಕ್ಕಾಗಿ ತಂತ್ರಜ್ಞಾನವನ್ನು ಬಳಸುವ ಅನುಮೋದನೆಯನ್ನು L&T ಸಂಸ್ಥೆಯು ಪಡೆದುಕೊಂಡಿದೆ
  • ದೇಶದಲ್ಲಿಯೇ ಮೊದಲ ಬಾರಿಗೆ ಈ ತಂತ್ರಜ್ಞಾನ ಬಳಸಿ ಪ್ರಯತ್ನಿಸಲಾಗುತ್ತಿರುವುದರಿಂದ, ಕೆಲವು ಕಾರ್ಯವಿಧಾನದ ಸಮಸ್ಯೆಗಳು ಎದುರಾಗಬಹುದು. ‘ನಿಯಮದ ಪ್ರಕಾರ, 2.5 ಲಕ್ಷ ರೂ.ಗಳಿಗಿಂತ ಹೆಚ್ಚಿನ ಯಾವುದೇ ಒಪ್ಪಂದವನ್ನು ಬಿಡ್ಡಿಂಗ್ ಮೂಲಕ ತೆರೆಯಬೇಕಿರುತ್ತದೆ. ಆದರೆ, ಈ ವರ್ಗದಲ್ಲಿ ಬರುವುದು ಎಲ್&ಟಿ ಒಂದೇ ಕಂಪನಿಯಾಗಿರುವುದರಿಂದ ಆ ಕಂಪನಿಯನ್ನೇ ನಾಮನಿರ್ದೇಶನ ಮಾಡಬಹುದಾಗಿದೆ.

3ಡಿ ತಂತ್ರಜ್ಞಾನ ಕಟ್ಟಡ ನಿರ್ಮಾಣ ಎಂದರೇನು?

  • ಕಾಂಕ್ರೀಟ್ ಮಿಶ್ರಣವನ್ನು ಬಳಸಿಕೊಂಡು ಕಟ್ಟಡವನ್ನು ಮುದ್ರಿಸುವ ತಂತ್ರಜ್ಞಾನವೇ 3ಡಿ ಪ್ರಿಂಟಿಂಗ್ ತಂತ್ರಜ್ಞಾನ. ಇಟ್ಟಿಗೆ, ಮರಳನ್ನು ಬಳಸುವ ಸಾಂಪ್ರದಾಯಿಕ ಶೈಲಿಗೆ ಭಿನ್ನವಾಗಿ ಕಟ್ಟಡ ನಿರ್ಮಿಸುವುದಾಗಿದೆ. ಈ ಮೂಲಕ ಕಡಿಮೆ ಸಮಯ ಮತ್ತು ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಬಹುದು.

L&T ಸಂಸ್ಥೆ

  • ಸಾಮಾನ್ಯವಾಗಿ L&T ಎಂದು ಕರೆಯಲ್ಪಡುವ ಲಾರ್ಸೆನ್ & ಟೂಬ್ರೊ ಲಿಮಿಟೆಡ್, 1946 ರಲ್ಲಿ ಸ್ಥಾಪನೆಯಾದ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಂಜಿನಿಯರಿಂಗ್, ನಿರ್ಮಾಣ, ಉತ್ಪಾದನೆ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ವ್ಯಾಪಾರ ಆಸಕ್ತಿಗಳನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಕಂಪನಿಯಾಗಿದೆ. ಕಂಪನಿಯು ವಿಶ್ವದ ಅಗ್ರ ಐದು ನಿರ್ಮಾಣ ಕಂಪನಿಗಳಲ್ಲಿ ಒಂದಾಗಿದೆ.