Published on: November 6, 2021

5 ಪೌಂಡ್ನ ಹೊಸ ನಾಣ್ಯ

5 ಪೌಂಡ್ನ ಹೊಸ ನಾಣ್ಯ

ಸುದ್ಧಿಯಲ್ಲಿ ಏಕಿದೆ?  ಮಹಾತ್ಮ ಗಾಂಧಿ ಸ್ಮರಣಾರ್ಥ ಅವರ ಜೀವನ ಮತ್ತು ಪರಂಪರೆ ಕೊಂಡಾಡುವ 5 ಪೌಂಡ್‌ನ ಹೊಸ ನಾಣ್ಯವನ್ನು ದೀಪಾವಳಿ ಹಬ್ಬದ ಅಂಗವಾಗಿ ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ಅವರು ಅನಾವರಣಗೊಳಿಸಿದರು.

  • ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಈ ನಾಣ್ಯ ಲಭ್ಯವಿದೆ. ಸಂಗ್ರಹ ಯೋಗ್ಯವಾದ ಈ ನಾಣ್ಯವನ್ನು ಹೀನಾ ಗ್ಲೋವರ್ ವಿನ್ಯಾಸಗೊಳಿಸಿದ್ದಾರೆ.
  • ಗಾಂಧಿಯವರ ಅತ್ಯಂತ ಪ್ರಸಿದ್ಧ ಉಲ್ಲೇಖಗಳಲ್ಲಿ ಒಂದಾದ ‘ಮೈ ಲೈಫ್ ಈಸ್ ಮೈ ಮೆಸೇಜ್ ಜೊತೆಗೆ ಭಾರತದ ರಾಷ್ಟ್ರೀಯ ಹೂವು ಕಮಲದ ಚಿತ್ರವನ್ನು ಒಳಗೊಂಡಿದೆ.
  • ಈ ನಾಣ್ಯವು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಪ್ರಭಾವಿ ನಾಯಕನಿಗೆ ಸೂಕ್ತವಾದ ಗೌರವವಾಗಿದೆ