Published on: February 23, 2024
58ನೇ ಜ್ಞಾನಪೀಠ ಪ್ರಶಸ್ತಿ
58ನೇ ಜ್ಞಾನಪೀಠ ಪ್ರಶಸ್ತಿ
ಸುದ್ದಿಯಲ್ಲಿ ಏಕಿದೆ? ಜ್ಞಾನಪೀಠ ಆಯ್ಕೆ ಸಮಿತಿಯು 58ನೇ ಜ್ಞಾನಪೀಠ ಪ್ರಶಸ್ತಿ (2023 ರ) ಯನ್ನು ಇಬ್ಬರು ಲೇಖಕರಾದ ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಉರ್ದು ಕವಿ ಮತ್ತು ಸಾಹಿತಿ ಗುಲ್ಜಾರ್ ಅವರಿಗೆ ನೀಡಲಾಗುವುದು ಎಂದು ಪ್ರಕಟಿಸಿದೆ. ಆ ಮೂಲಕ ಸಂಸ್ಕೃತಕ್ಕೆ ಎರಡನೇ ಬಾರಿ ಹಾಗೂ ಉರ್ದು ಭಾಷೆಗೆ ಐದನೇ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.
ಮುಖ್ಯಾಂಶಗಳು
- ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿನಡೆದ ಆಯ್ಕೆ ಸಮಿತಿಯ ಸಭೆಯಲ್ಲಿಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
- ಪ್ರಶಸ್ತಿ: 11 ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ಮತ್ತು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿದೆ.
- ಗೋವಾದ ಬರಹಗಾರ ದಾಮೋದರ್ ಮೌಜೊ ಅವರು 2022 ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.
‘ಗುಲ್ಜಾರ್’ ಅವರ ಬಗ್ಗೆ
- ಜನನ : ಆಗಸ್ಟ್ 18, 1934
- ಜನ್ಮಸ್ಥಳ: ಪಾಕಿಸ್ತಾನದಲ್ಲಿರುವ ಪಂಜಾಬ್‌ನ ದೀನಾ ಗ್ರಾಮ.
- ಸಂಪೂರಣ್ ಸಿಂಗ್ ಕಲ್ರಾ(90) ಇವರು ‘ಗುಲ್ಜಾರ್’ ಎಂದೇ ಪ್ರಸಿದ್ಧರು.
- ಇವರು ಕವಿ, ನಾಟಕಕಾರ, ಚಿತ್ರಕತೆಗಾರ, ನಿರ್ದೇಶಕರಾಗಿದ್ದಾರೆ.
- ಇವರು ಉರ್ದು ಭಾಷೆಯಲ್ಲಿ‘ಮುಖಫ’ ಅಂದರೆ ತ್ರಿಪದಿ ಚಂದೋಪ್ರಕಾರವನ್ನು ಮೊದಲ ಬಾರಿಗೆ ಪರಿಚಯಿಸಿದರು.
- ಗುಲ್ಜಾರ್ ಅವರಿಗೆ 2002 ರಲ್ಲಿಸಾಹಿತ್ಯ ಅಕಾಡೆಮಿ ಮತ್ತು 2004 ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಇದಲ್ಲದೆ, 2013ರಲ್ಲಿದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಅವರಿಗೆ ಒಲಿದಿದೆ.
- ‘ಸ್ಲಮ್ ಡಾಗ್ ಮಿಲಿಯನೇರ್’ ಎಂಬ ಚಿತ್ರಕ್ಕೆ ‘ಜೈ ಹೋ’ ಎಂಬ ಗೀತೆ ರಚಿಸಿದ್ದರು. ಇದಕ್ಕಾಗಿ 2009ರಲ್ಲಿಆಸ್ಕರ್ ಪ್ರಶಸ್ತಿ ಗಳಿಸಿದ್ದರು.
- 2010 ರಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿದ್ದಾರೆ
ರಾಮಭದ್ರಾಚಾರ್ಯ ಅವರ ಬಗ್ಗೆ
- ಜಗದ್ಗುರು ರಾಮಭದ್ರಾಚಾರ್ಯ, ಬಹುಭಾಷಾವಾದಿ, ಹಿಂದೂ ಆಧ್ಯಾತ್ಮಿಕ ನಾಯಕ, ಶಿಕ್ಷಣತಜ್ಞ, ಕವಿ ಮತ್ತು ಬರಹಗಾರ.
- ಅವರು 1950 ರಲ್ಲಿ ಉತ್ತರ ಪ್ರದೇಶದ ಜೌನ್‌ಪುರ ಖಾಂಡಿ ಖುದ್‌ರ್ ಗ್ರಾಮದಲ್ಲಿ ಜನಿಸಿದರು
- ರಾಮಭದ್ರಾಚಾರ್ಯರು ಬಹುಶ್ರುತ ವಿದ್ವಾಂಸರು. ಕವಿ, ವ್ಯಾಖ್ಯಾನಕಾರ, ತತ್ವಜ್ಞಾನಿ, ಗಾಯಕ, ಕಥಾ ವಿದ್ವಾನ್, ಗೀತರಚನೆಕಾರರು
- ಇವರು ರಮಾನಂದ ಪಂಥದ ಪ್ರಸ್ತುತ ನಾಲ್ವರು ಜಗದ್ಗುರುಗಳಲ್ಲಿ ಒಬ್ಬರಾಗಿದ್ದಾರೆ.
- ಅವರು ಮಧ್ಯಪ್ರದೇಶದ ಚಿತ್ರಕೂಟದಲ್ಲಿ ತುಳಸಿ ಪೀಠದ ಸ್ಥಾಪಕರು ಮತ್ತು ಅಧ್ಯಕ್ಷರಾಗಿದ್ದಾರೆ.
- 22 ಭಾಷೆಗಳ ತಜ್ಞ. ಈ ಕಾರಣಕ್ಕೆ ಸಂಸ್ಕೃತ, ಹಿಂದಿ, ಅವಧಿ ಮತ್ತು ಮೈಥಿಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಬರಹಗಾರರಾಗಿದ್ದಾರೆ.
- ನಾಲ್ಕು ಮಹಾಕಾವ್ಯಗಳು (ಸಂಸ್ಕತ್ರೃತದಲ್ಲಿ ಎರಡು ಮತ್ತು ಹಿಂದಿಯಲ್ಲಿಎರಡು), ರಾಮಚರಿತಮಾನಸದ ಬಗ್ಗೆ ಹಿಂದಿ ವ್ಯಾಖ್ಯಾನ, ಅಷ್ಟಾಧ್ಯಾಯಿಯ ಬಗ್ಗೆ ಕಾವ್ಯಾತ್ಮಕ ಸಂಸ್ಕತ್ರೃತ ವ್ಯಾಖ್ಯಾನ ಮತ್ತು ಪ್ರಸ್ಥಾನತ್ರಯಿ (ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಪ್ರಧಾನ ಉಪನಿಷತ್ತುಗಳು) ಸೇರಿದಂತೆ 240 ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ತುಳಸೀದಾಸರ ಬಗ್ಗೆ ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ.
- 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು.
ಜ್ಞಾನಪೀಠ ಪ್ರಶಸ್ತಿ
- ಭಾರತದ ಅತ್ಯಂತ ಹಳೆಯ ಮತ್ತು ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದೆ.
- ಇದನ್ನು ವಾರ್ಷಿಕವಾಗಿ ಲೇಖಕರಿಗೆ ಅವರ “ಸಾಹಿತ್ಯದ ಕಡೆಗೆ ಅತ್ಯುತ್ತಮ ಕೊಡುಗೆಗಾಗಿ” ನೀಡಲಾಗುತ್ತದೆ.
- ಪ್ರಶಸ್ತಿಯನ್ನು 1961 ರಲ್ಲಿ ಸ್ಥಾಪಿಸಲಾಯಿತು ಮತ್ತು ಮೊದಲ ಬಾರಿಗೆ 1965 ರಲ್ಲಿ ನೀಡಲಾಯಿತು.
- ಪ್ರಶಸ್ತಿಯು ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳೆರಡನ್ನೂ ಪರಿಗಣಿಸುತ್ತದೆ. ಆದಾಗ್ಯೂ, ಅರ್ಹತೆ ಭಾರತೀಯ ನಾಗರಿಕರಿಗೆ ಸೀಮಿತವಾಗಿದೆ. ಇದನ್ನು ಮರಣೋತ್ತರವಾಗಿ ನೀಡಲಾಗುವುದಿಲ್ಲ.
- ಭಾರತೀಯ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ಇದನ್ನು ಭಾರತೀಯ ಜ್ಞಾನಪೀಠವು ನೀಡುತ್ತದೆ.
- ಸಾಹು ಶಾಂತಿ ಪ್ರಸಾದ್ ಜೈನ್ ಮತ್ತು ಅವರ ಪತ್ನಿ ರಾಮಾ ಜೈನ್ ಅವರಿಂದ 1944 ರಲ್ಲಿ ಸ್ಥಾಪಿಸಲಾದ ಭಾರತೀಯ ಜ್ಞಾನಪೀಠ, ಭಾರತದ ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರತಿಷ್ಠಿತ ಸಾಹಿತ್ಯ ಮತ್ತು ಸಂಶೋಧನಾ ಸಂಸ್ಥೆಯಾಗಿದೆ.