Published on: October 18, 2022
75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು
75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳು
ಸುದ್ದಿಯಲ್ಲಿ ಏಕಿದೆ?
ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ (ಡಿಬಿಯು) ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮಾಧ್ಯಮದ ಮೂಲಕ ನೆರವೇರಿಸಿದರು.
ಮುಖ್ಯಾಂಶಗಳು
- ಇವು ಹೊಸ ಬ್ಯಾಂಕಗಳಲ್ಲ ಹಾಲಿ ಇರುವ ಬ್ಯಾಂಕಗಳ ಆಯ್ದ ಶಾಖೆಗಳಲ್ಲಿ ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲಿಯೇ ನಡೆಸಲಾಗುತ್ತದೆ.
- ದಿನದ 24 ಘಂಟೆ ಹಣ ಜಮಾ ಮಾಡುವ ಮತ್ತು ಹಣವನ್ನು ತೆಗೆಯುವ ಸೌಲಭ್ಯ ಇರುತ್ತದೆ.
- ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಕಾರಣ 75 ಡಿಜಿಟಲ್ ಬ್ಯಾಂಕಗಳನ್ನು ಸ್ಥಾಪಿಸಲಾಗಿದೆ.
ರಾಜ್ಯದಲ್ಲಿ ನಾಲ್ಕು ಕಡೆ
- ಕರ್ನಾಟಕದಲ್ಲಿ ನಾಲ್ಕು ಕಡೆ ಈ ಡಿಜಿಟಲ್ ಸೌಲಭವನ್ನು ನೀಡಲಾಗಿದೆ. ಮಂಗಳೂರು, ಮೈಸೂರು, ರಾಯಚೂರು ಮತ್ತು ಬೆಂಗಳೂರು ಬಳಿ ಇರುವ ದೇವನಹಳ್ಳಿ
ಉದ್ದೇಶ
- ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕನಸಿಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಾಗೂ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಪ್ರಯೋಜನಗಳು
- ಉಳಿತಾಯ ಖಾತೆ ತೆರೆಯುವಿಕೆ
- ಖಾತೆಯ ಬ್ಯಾಲೆನ್ಸ್ ಪರಿಶೀಲನೆ
- ಪಾಸ್ ಬುಕ್ ಮುದ್ರಣ
- ನಗದು ವರ್ಗಾವಣೆ
- ಸಾಲದ ಅರ್ಜಿ
- ನಿಗದಿತ ಠೇವಣಿ ಹೂಡಿಕೆ
- ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಗಳಿಗೆ ಅರ್ಜಿ
- ಬಿಲ್ ಗಳು, ತೆರಿಗೆ ಪಾವತಿಸುವಿಕೆ
ಏನೆಲ್ಲಾ ಸೇವೆ
- ಸಣ್ಣ ಪ್ರಮಾಣದ ಸಾಲ
- ಗ್ರಾಹಕರಿಗೆ ನೆರವಾಗಲು ಮಾಹಿತಿ ನೀಡಲು ಸಿಬ್ಬಂದಿ ವ್ಯವಸ್ಥೆ
- ಸೈಬರಾ ಭದ್ರತೆಯ ಬಗ್ಗೆ ಅರಿವು ಮೂಡಿಸಲು ಶಿಬಿರ ಯೋಜನೆ
- ಇತರ ಬ್ಯಾಂಕಗಳ ಗ್ರಾಹಕರಿಗೆ ಆನ್ ಲೈನ್ ಬ್ಯಾಂಕ್ ಸೇವೆಗೆ ಶಾಖೆಯಲ್ಲಿ ಟ್ಯಾಬ್ ವ್ಯವಸ್ಥೆ