77ನೇ ಕಾನ್ಸ್ ಚಲನಚಿತ್ರೋತ್ಸವ
77ನೇ ಕಾನ್ಸ್ ಚಲನಚಿತ್ರೋತ್ಸವ
ಸುದ್ದಿಯಲ್ಲಿ ಏಕಿದೆ? ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಸಹಯೋಗದೊಂದಿಗೆ ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮNFDC ಯಿಂದ 77 ನೇ ಕಾನ್ ಸ್ ಚಲನಚಿತ್ರೋತ್ಸವದಲ್ಲಿ ಉದ್ಘಾಟನಾ ಭಾರತ್ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾನ್ ಸ್ ನಲ್ಲಿ ಭಾರತಕ್ಕೆ ಸಂದ ಪ್ರಶಸ್ತಿಗಳು
ಪಾಯಲ್ ಕಪಾಡಿಯಾ ಅವರ ಚಲನಚಿತ್ರ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಉತ್ಸವದಲ್ಲಿ ಎರಡನೇ ಅತ್ಯುನ್ನತ ಗೌರವವಾದ ಪ್ರತಿಷ್ಠಿತ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಪಾಡಿಯಾ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಭಾರತ ಮತ್ತು ಫ್ರಾನ್ಸ್ ನಡುವಿನ ಸಹಿ ಮಾಡಿದ ಆಡಿಯೋ-ವಿಷುಯಲ್ ಒಪ್ಪಂದದ ಅಡಿಯಲ್ಲಿ ಪಾಯಲ್ ಕಪಾಡಿಯಾ ಅವರ ಚಲನಚಿತ್ರಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಧಿಕೃತ ಇಂಡೋ-ಫ್ರೆಂಚ್ ಸಹ-ನಿರ್ಮಾಣ ಸ್ಥಾನಮಾನವನ್ನು ನೀಡಿತು.
‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಕನ್ನಡ ಕಿರುಚಿತ್ರ
- ‘ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’ ಎಂಬ ಕನ್ನಡ ಕಿರುಚಿತ್ರ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ (ಲಾ ಸಿನೆಫ್} ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಇದು ಭಾರತಕ್ಕೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ.
- ಈ ಮೂಲಕ ಚಿತ್ರಕ್ಕೆ 15000ಯೂರೊ (₹13.5 ಲಕ್ಷ) ಬಹುಮಾನ ಸಿಗಲಿದೆ.
- ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕೆ ಕಾರಣವೆಂದು ಎಲ್ಲರೂ ನಂಬಿದ್ದ ಹುಂಜದೊಂದಿಗೆ ಅಜ್ಜಿ ಓಡಿಹೋಗುವ ಜನಪದ ಕಥಾವಸ್ತುವನ್ನು ಈ ಕಿರುಚಿತ್ರ ಹೊಂದಿದೆ. ಇದೊಂದು ಕರ್ನಾಟಕದ ಜಾನಪದಕ್ಕೆ ಸಂಬಂಧಿಸಿದ ಕಥಾಹಂದರ ಹೊಂದಿರುವ ಕಿರುಚಿತ್ರವಾಗಿದೆ.
- ಈ ಕಿರುಚಿತ್ರದಲ್ಲಿ ಕನ್ನಡದ ಜನಪ್ರಿಯ ನಟ ಎಂ .ಎಸ್.ಜಹಾಂಗೀರ್ ಅಜ್ಜನಾಗಿ ನಟಿಸಿದ್ದಾರೆ.
- ನಿರ್ಮಾಣ: ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ (ಎಫ್ಟಿಐಐ) ಸಂಸ್ಥೆ
- ರಚನೆ ಹಾಗೂ ನಿರ್ದೇಶನ: ಮೈಸೂರಿನ ಡಾ.ಚಿದಾನಂದ ಎಸ್ ನಾಯ್ಕ್
- ಈ ವಿಭಾಗದಲ್ಲಿ ಭಾಗವಹಿಸಿದ್ದ 2,263 ಕಿರುಚಿತ್ರಗಳಲ್ಲಿ 18 ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು, ಅವುಗಳಲ್ಲಿ ಇದ್ದ ಏಕೈಕ ಭಾರತೀಯ ಸಿನಿಮಾ ಇದಾಗಿತ್ತು.
- ಲಾ ಸಿನೆಫ್ ಬಹುಮಾನ ಗೆದ್ದ ಭಾರತದ ಎರಡನೇ ಕಿರುಚಿತ್ರ ಇದಾಗಿದ್ದು, 2020ರಲ್ಲಿ ಅಶ್ಮಿತಾ ಗುಹಾ ನಿಯೋಗಿ ನಿರ್ದೇಶನದ ‘ಕ್ಯಾಟ್ಡಾಗ್’ ಬಹುಮಾನ ಗೆದ್ದಿತ್ತು.
ಅನಸೂಯಾ ಸೆನ್ ಗುಪ್ತ
- ಹಿಂದಿ ಸಿನಿಮಾ‘ದಿ ಶೇ ಮ್ಲೆಸ್’ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಅನಸೂಯಾ ಸೆನ್ ಗುಪ್ತ ಅವರು 2024ನೇ ಸಾಲಿನ ಕಾನ್ ಚಲನಚಿತ್ರೋತ್ಸವದ ‘ಅನ್ ಸರ್ಟೇನ್ ರಿಗಾರ್ಡ್’ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ.
- ಈ ಸಿನಿಮಾವನ್ನು ಬಲ್ಗೇರಿಯಾದ ನಿರ್ದೇಶಕ ಕೊನ್ಸ್ಟಾಂಟಿನ್ ಬೊಜನೊವ್ ನಿರ್ದೇಶಿಸಿದ್ದಾರೆ.
- ಅನಸೂಯಾ ಅವರು ಕೋಲ್ಕತ್ತ ಮೂಲದವರು. ಈ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದ ಮೊದಲ ಭಾರತೀಯ ಕಲಾವಿದೆ ಇವರು.
ಕಾನ್ಸ್ ಚಲನಚಿತ್ರೋತ್ಸವ
ಕಾನ್ಸ್ ಒಂದು ಫ್ರಾನ್ಸ್ ದೇಶದಲ್ಲಿರುವ ನಗರವಾಗಿದೆ
ಪ್ರತಿ ವರ್ಷ ಇಲ್ಲಿ ಕಾನ್ಸ್ ಚಿತ್ರೋತ್ಸವವನ್ನು ಆಯೋಜಿಸಲಾಗುತ್ತದೆ
ಸ್ಥಾಪನೆ: 1946