Published on: September 27, 2021

C-295 ಸರಕು ಸಾಗಣೆ ವಿಮಾನ

C-295 ಸರಕು ಸಾಗಣೆ ವಿಮಾನ

ಸುದ್ಧಿಯಲ್ಲಿ ಏಕಿದೆ? ಕೇಂದ್ರ ಸರ್ಕಾರ 56 C-295 ಸರಕು ಸಾಗಣೆ ವಿಮಾನ ಸ್ವಾಧೀನ ಒಪ್ಪಂದವನ್ನು ಅಧಿಕೃತಗೊಳಿಸಿದೆ.

  • ಭಾರತೀಯ ಭೂಸೇನೆಗೆ 118 ಅರ್ಜುನ ಎಂಕೆ-1 ಯುದ್ಧ ಟ್ಯಾಂಕರ್‌ ನಿರ್ಮಿಸಲು ಆದೇಶ ನೀಡಿದ್ದ ಕೇಂದ್ರ ಸರ್ಕಾರ, ಈಗ ವಾಯುಪಡೆಗಾಗಿ 20 ಸಾವಿರ ಕೋಟಿ ರೂ. ಮೌಲ್ಯದ 56 ಮಧ್ಯಮ ಪ್ರಮಾಣದ ಸರಕು ಸಾಗಣೆ ವಿಮಾನ, “ಸಿ-295′ ಖರೀದಿಗೆ ಅನುಮತಿ ನೀಡಿದೆ

ಒಪ್ಪಂದ

  • ಸದ್ಯ ಇರುವ ಆ್ಯವ್ರೋ-748 ವಿಮಾನಗಳ ಸ್ಥಾನವನ್ನು ಹೊಸ ವಿಮಾನಗಳು ತುಂಬಲಿದ್ದು, ಸ್ಪೇನ್‌ನ ಏರ್‌ಬಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಜತೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ
  • ಈ ಒಪ್ಪಂದದ ಅನ್ವಯ ಮೊದಲ ಹಂತದಲ್ಲಿ 16 ವಿಮಾನಗಳನ್ನು ಸ್ಪೇನ್‌ನಿಂದ ದೇಶಕ್ಕೆ ತರಲಾಗುತ್ತದೆ. ಉಳಿದ 40 ವಿಮಾನಗಳನ್ನು ಏರ್‌ಬಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಹಾಗೂ ಟಾಟಾ ಅಡ್ವಾನ್ಸ್‌ ಸಿಸ್ಟಮ್ಸ್‌ ಲಿ.(ಟಿಎಎಸ್‌ಎಲ್‌) ಜಂಟಿಯಾಗಿ ದೇಶದಲ್ಲಿಯೇ 10 ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಲಿವೆ.

ದೇಶದ ಇತಿಹಾಸದಲ್ಲಿ ಇದೇ ಮೊದಲು

  • ಇನ್ನು ಖಾಸಗಿ ಕಂಪನಿಯೊಂದು ದೇಶದಲ್ಲಿಯೇ ಸೇನಾ ವಿಮಾನ ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲು. ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ `ಮೇಕ್ ಇನ್ ಇಂಡಿಯಾ’ ಏರೋಸ್ಪೇಸ್ ಕಾರ್ಯಕ್ರಮವಾಗಿದ್ದು, ಇದು ಸಂಪೂರ್ಣವಾಗಿ `ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿ’ಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ.