ಫ್ರಾನ್ಸ್ ಅಂಚೆ ಚೀಟಿಯಲ್ಲಿ ಟಿಪ್ಪು ವಂಶಸ್ಥೆ: ವಿಶ್ವ ಯುದ್ಧದ ನಾರಿ 'ನೂರ್'ಗೆ ಗೌರವ

ಸುದ್ದಿ -  ಫ್ರಾನ್ಸ್ ಸರ್ಕಾರವು ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆಯಾಗಿದ್ದಾರೆ.

  • ಫ್ರೆಂಚ್ ಅಂಚೆ ಸೇವೆ, ಲಾ ಪೋಸ್ಟ್ಯು ನಾಜಿಗಳ ವಿರುದ್ಧ ಹೋರಾಡಿದವರ ಗೌರವಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್‌ನ ವಿಶೇಷ ಕಾರ್ಯಾಚರಣೆ ವಿಭಾಗದ ರಹಸ್ಯ ಪ್ರತಿನಿಧಿಯಾಗಿ ಫ್ರಾನ್ಸ್ ಪರ ನೂರ್ ಕೆಲಸ ಮಾಡಿದ್ದರು.
  • ಎರಡನೇ ಮಹಾಯುದ್ಧದ 80 ವರ್ಷಾಚರಣೆ ಸಂದರ್ಭದಲ್ಲಿ ಈ ತಿಂಗಳು ಬಿಡುಗಡೆ ಮಾಡಿದ ಅಂಚೆ ಚೀಟಿಗಳಿಗೆ ಆಯ್ಕೆಯಾದ 12 ಯುದ್ಧ ವೀರರು ಮತ್ತು ನಾಯಕಿಯರಲ್ಲಿ ನೂರ್ ಸಹ ಒಬ್ಬರು.
  • 'ಫ್ರಾನ್ಸ್ ಸರ್ಕಾರ ನೂರ್ ಇನಾಯತ್ ಖಾನ್ ಅವರ ಅಂಚೆ ಚೀಟಿ ಬಿಡುಗಡೆ ಮೂಲಕ ಗೌರವಿಸಿರುವುದು ಸಂತೋಷ ತಂದಿದೆ' ಎಂದು ನೂರ್ ಅವರ ಜೀವನ ಚರಿತ್ರೆ 'ಸ್ಟ್ರೆ ಪ್ರಿನ್ಸೆಸ್: ದಿ ಲೈಫ್ ಆಫ್ ನೂರ್ ಇನಾಯತ್ ಖಾನ್'ನ ಲೇಖಕಿ ಶಬಾನಿ ಬಸು ಹೇಳಿದ್ದಾರೆ.
  • 'ನಿರಂಕುಶ ಪ್ರಭುತ್ವದ ವಿರುದ್ಧದ ಹೋರಾಟದಲ್ಲಿ ನೂರ್ ತನ್ನ ಪ್ರಾಣ ತ್ಯಾಗ ಮಾಡಿದ್ದರು. ಫ್ರಾನ್ಸ್‌ನಲ್ಲಿ ಸಾಮಾನ್ಯ ಜನರು ಪೋಸ್ಟ್ ಮಾಡುವ ಅಂಚೆ ಚೀಟಿಯಲ್ಲಿ ಅವರ ಮುಖವನ್ನು ನೋಡುವುದು ಅದ್ಭುತವಾಗಿದೆ' ಎಂದಿದ್ದಾರೆ.