13 ಬಂದರುಗಳಿಗೆ ಜೀವಕಳೆ: 'ಕಬ್ಬಿಣದ ಅದಿರು ರಫ್ತು ನೀತಿ-2025'

ಸುದ್ದಿ - ಕರ್ನಾಟಕ ಸಚಿವ ಸಂಪುಟವು 'ಪ್ರಮುಖವಲ್ಲದ ಬಂದರುಗಳ ಕಬ್ಬಿಣದ ಅದಿರು ನಿರ್ವಹಣಾ ನೀತಿ – 2025' ಕ್ಕೆ ಅನುಮೋದನೆ ನೀಡಿದೆ.  ರಾಜ್ಯದ 13 ಪ್ರಮುಖವಲ್ಲದ ಬಂದರುಗಳ (Non-Major Ports) ಮೂಲಕ ಕಬ್ಬಿಣದ ಅದಿರನ್ನು ರಫ್ತು, ಆಮದು ಮತ್ತು ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತದೆ. ಹಿಂದಿನ ನಿರ್ಬಂಧಗಳ ನಂತರ ಕರಾವಳಿ ಖನಿಜ ವ್ಯಾಪಾರವನ್ನು ಪುನರುಜ್ಜೀವನಗೊಳಿಸಲು  ಪ್ರಮುಖ ಹೆಜ್ಜೆಯಾಗಿದೆ.

ಹಿನ್ನೆಲೆ:

  • ಕರ್ನಾಟಕವು 343.3 ಕಿ.ಮೀ ಕರಾವಳಿಯನ್ನು ಹೊಂದಿದೆ.
  • 1 ಪ್ರಮುಖ ಬಂದರು: ನವ ಮಂಗಳೂರು ಬಂದರು ಪ್ರಾಧಿಕಾರ.
  • 13 ಪ್ರಮುಖವಲ್ಲದ ಬಂದರುಗಳು: ಕಾರವಾರ, ಹೊನ್ನಾವರ, ಮಲ್ಪೆ, ಬೇಲೆಕೇರಿ, ಮಂಕಿ, ಪಡುಬಿದ್ರಿ, ಕೇಣಿ, ಭಟ್ಕಳ, ಹಳೆ ಮಂಗಳೂರು, ತದಡಿ, ಕುಂದಾಪುರ, ಪವಿನಕುರ್ವೆ, ಹಂಗಾರಕಟ್ಟೆ.
  • 2022 ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ ಕಬ್ಬಿಣದ ಅದಿರನ್ನು ರಫ್ತು ಮಾಡಲು ಅನುಮತಿ ನೀಡಿತ್ತು.

ನೀತಿಯ ಪ್ರಮುಖ ಲಕ್ಷಣಗಳು:

ಉದ್ದೇಶಗಳು:

  • ಕಬ್ಬಿಣದ ಅದಿರು ರಫ್ತು ಮತ್ತು ಆಮದುಗಳನ್ನು ಪುನರಾರಂಭಿಸುವುದು.
  • ಕರಾವಳಿ ಬಂದರು ಬಳಕೆಯನ್ನು ಉತ್ತೇಜಿಸುವುದು.
  • ಖನಿಜ ಲಾಜಿಸ್ಟಿಕ್ಸ್‌ನಿಂದ ರಾಜ್ಯದ ಆದಾಯವನ್ನು ಹೆಚ್ಚಿಸುವುದು.

ಆದಾಯ ಉತ್ಪಾದನಾ ಕ್ರಮಗಳು:

  • ನೋಂದಣಿ ಶುಲ್ಕ ಮತ್ತು ಭೂ ಹಂಚಿಕೆಗಾಗಿ ಪರವಾನಗಿ ಶುಲ್ಕ.
  • ವಾರ್ಫೇಜ್ ಶುಲ್ಕಗಳು (Wharfage charges).
  • ಮಾಲಿನ್ಯ ತಗ್ಗಿಸುವಿಕೆ ಮತ್ತು ಮೇಲ್ವಿಚಾರಣಾ ಶುಲ್ಕ: ಪ್ರತಿ ಟನ್‌ಗೆ ₹13.

ಅರ್ಹತಾ ಮಾನದಂಡಗಳು:

  • ರಫ್ತುದಾರರು ಗಣಿ ಮತ್ತು ಭೂವಿಜ್ಞಾನ ನಿರ್ದೇಶನಾಲಯಕ್ಕೆ ₹10,000 ನೋಂದಣಿ ಶುಲ್ಕವನ್ನು ಪಾವತಿಸಬೇಕು.
  • ಭೂಮಿಯನ್ನು 'ಮೊದಲು ಬಂದವರಿಗೆ ಮೊದಲ ಆದ್ಯತೆ' ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ.

ಇತರೆ ಸಚಿವ ಸಂಪುಟ ನಿರ್ಧಾರಗಳು:

  • ಕರ್ನಾಟಕ ರಾಜ್ಯ ಹಜ್ ಸಮಿತಿ ನಿಯಮಗಳು 2025 ಕ್ಕೆ ಅನುಮೋದನೆ.
  • ಮೈಸೂರು ಮಹಾನಗರ ಪಾಲಿಕೆಯನ್ನು 'ಬೃಹತ್ ಮೈಸೂರು ಮಹಾನಗರ ಪಾಲಿಕೆ' ಎಂದು ಘೋಷಣೆ.
  • ಔಷಧಗಳು ಮತ್ತು ಸೌಂದರ್ಯವರ್ಧಕಗಳ (ಕರ್ನಾಟಕ ತಿದ್ದುಪಡಿ) ಮಸೂದೆ, 2025.
  • ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ (ಕ್ಷೇಮಾಭಿವೃದ್ಧಿ ತಿದ್ದುಪಡಿ) ಕಾಯ್ದೆ, 2025.